ಕ್ರೀಡೆ

ಪುನಃ ರ‍್ಯಾಲಿಗೆ ಮರಳಿದ ಹರಿತ್ ನೋಹ್; ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ ಸ್ಪರ್ಧೆ

ಬೆಂಗಳೂರು : 2025 ಡಕಾರ್ ರ‍್ಯಾಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದ ಭಾರತದ ಅಗ್ರಸ್ಥಾನದಲ್ಲಿರುವ ರ‍್ಯಾಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. 2024ರ ಡಕಾರ್ ರ‍್ಯಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ.

ಎಫ್ಐಎ ಎಫ್ಐಎಂ ವರ್ಲ್ಡ್ ರ‍್ಯಾಲಿ-ರೇಡ್ ಚಾಂಪಿಯನ್ಶಿಪ್ (W2RC) 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ, ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿ ರಿಸಾರ್ಟ್ನಿಂದ ರ‍್ಯಾಲಿ ಆರಂಭವಾಗಲಿದೆ.

ಶೆರ್ಕೋ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಆ ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳ ಚಿಕಿತ್ಸೆಯ ನಂತರ ಮತ್ತೆ ಸ್ಪರ್ಧೆಗೆ ಮರಳಿದ್ದು, 2026ರ ಡಕಾರ್ ರ‍್ಯಾಲಿ ತೀವ್ರ ಪೈಪೋಟಿ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ ಹರಿತ್ ‘ಡಕಾರ್ನ ನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ, ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ನನ್ನ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ಇರುತ್ತದೆ, ಅದು ಸಹಜ. ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿ ಎಲ್ಲರಿಗೂ ಹೊಸದು, ಮಾರ್ಗವು ಎಲ್ಲರಿಗೂ ಅಪರಿಚಿತ. ಪ್ರತಿಯೊಂದು ಕಿಲೋಮೀಟರ್ ಅನ್ನು ಗಮನದಿಂದ ತೆಗೆದುಕೊಳ್ಳುವುದು ನನ್ನ ತಂತ್ರ’ ಎಂದು ಹೇಳಿದ್ದಾರೆ.

ಹರಿತ್ ನೋಹ್ ಅವರ ಈ ಮರಳಿಕೆಯು ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ಭಾರತೀಯ ಮೋಟಾರ್ಸ್ಪೋರ್ಟಿಗೂ ಮಹತ್ವದ್ದಾಗಿದೆ. ಇಂತಹ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಪಾಲ್ಗೊಳ್ಳುವುದು, ದೇಶದ
ರ‍್ಯಾಲಿ-ರೇಡ್ ಸ್ಪರ್ಧೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯುತ್ತದೆ.

ಆಂದೋಲನ ಡೆಸ್ಕ್

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

7 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

12 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

13 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

14 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

15 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

20 hours ago