ಕ್ರೀಡೆ

ಫುಟ್ಬಾಲ್ ಕನಸು ಹೊತ್ತ ಮಕ್ಕಳಿಗೊಂದು ಉತ್ತಮ ವೇದಿಕೆ; ರೆಸಿಡೆನ್ಶಿಯಲ್ ಅಕಾಡೆಮಿಗೆ ಓಪನ್ ಟ್ರಯಲ್ಸ್ ಆಯೋಜಿಸಿದ SUFC

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ ಕ್ಲಬ್ ನಲ್ಲಿ ಈ ಓಪನ್ ಟ್ರಯಲ್ಸ್ ನಡೆಯಲಿದೆ.

SUFCಯ ಮುಂಬರುವ ರೆಸಿಡೆನ್ಶಿಯಲ್ ಅಕಾಡೆಮಿಗೆ ಆಟಗಾರರನ್ನು ಆಯ್ಕೆ ಮಾಡುವುದು ಈ ಟ್ರಯಲ್ಸ್ ಮುಖ್ಯ ಉದ್ದೇಶವಾಗಿದೆ.ಯುವ ಫುಟ್ಬಾಲ್ ಆಟಗಾರರಿಗೆ ಉತ್ತಮ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಈ ಅಕಾಡೆಮಿಯು ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಆಧುನಿಕ ಸೌಲಭ್ಯಗಳು, ಪರಿಣಿತ ಕೋಚಿಂಗ್, ಮತ್ತು ವೃತ್ತಿಪರ ಫುಟ್ಬಾಲ್ ಗೆ ಮಾರ್ಗವನ್ನು ಒದಗಿಸುತ್ತದೆ. ಆಧುನಿಕ ಸೌಲಭ್ಯಗಳು ಮತ್ತು ಪರಿಣಿತ ತರಬೇತಿಯೊಂದಿಗೆ ಸುಸಜ್ಜಿತವಾದ SUFC ರೆಸಿಡೆನ್ಶಿಯಲ್ ಅಕಾಡೆಮಿ ಆಟಗಾರರನ್ನು ಕೇವಲ ಉತ್ತಮ ಫುಟ್ಬಾಲರ್ಗಳಾಗಿ ಮಾತ್ರವಲ್ಲ, ವೃತ್ತಿಪರ ಜೀವನಕ್ಕೆ ಸಿದ್ಧರಾಗುವ ಪರಿಪೂರ್ಣ ವ್ಯಕ್ತಿಗಳಾಗಿಯೂ ರೂಪಿಸಲು ಕಾರ್ಯ ನಿರ್ವಹಿಸುತ್ತದೆ. ಸ್ಪರ್ಧಾತ್ಮಕ ದರಗಳಲ್ಲಿ, ಆಟಗಾರರಿಗೆ ವೃತ್ತಿಪರ ಪಥವನ್ನು ರೂಪಿಸುವ ಅವಕಾಶವನ್ನು ಅಕಾಡೆಮಿ ನೀಡಲಿದೆ.

ಪ್ರತಿಭಾವಂತ ಆಟಗಾರರನ್ನು ಹುಡುಕಲು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅನೇಕ ರಾಜ್ಯಗಳಲ್ಲಿ ಓಪನ್ ಟ್ರಯಲ್ಸ್ ಆಯೋಜಿಸುತ್ತಿದೆ. ಫೆಬ್ರವರಿ 15 ರಂದು ಬೆಂಗಳೂರಿನ ಹಲಸೂರಿನಲ್ಲಿರುವ SUFC ಯಲ್ಲಿ ಪ್ರಥಮ ಓಪನ್ ಟ್ರಯಲ್ಸ್ ನಡೆಯಲಿದ್ದು ಬಳಿಕ ಮಾರ್ಚ್ 1 ಮತ್ತು 2 ರಂದು ಪುಣೆಯ ಬವ್ಧಾನ್ ಮತ್ತು ಖರಾಡಿಯಲ್ಲಿ ಟ್ರಯಲ್ಸ್ ನಡೆಯಲಿವೆ. 11 ರಿಂದ 18 ವರ್ಷ ವಯಸ್ಸಿನ ಎಲ್ಲ ಯುವ ಫುಟ್ಬಾಲ್ ಆಟಗಾರರು ಓಪನ್ ಟ್ರಯಲ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಈ ಟ್ರಯಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ SUFC ಅಕಾಡಮಿಯಲ್ಲಿ ಸ್ಥಾನ ಪಡೆಯಬಹುದಾಗಿದೆ.

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ನ CEO ಮೊಹಮದ್ ರಫಿಕ್  ಯುವ ಫುಟ್ಬಾಲ್ ಆಟಗಾರರಿಗೆ ಟ್ರಯಲ್ಸ್ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದಾರೆ. ‘ ಎಲ್ಲ ಅರ್ಹ ಫುಟ್ಬಾಲ್ ಆಟಗಾರರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಅಕಾಡೆಮಿಯ ಭಾಗವಾಗಲು ಈ ಟ್ರಯಲ್ಸ್ ಅನ್ನು ಆಯೋಜಿಸಲಾಗಿದೆ. ಈ ಟ್ರಯಲ್ಸ್ ಯುವ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯದಲ್ಲಿ ವೃತ್ತಿಪರ ತರಬೇತಿ ಪಡೆಯುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಫುಟ್ಬಾಲ್ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ’ ಎಂದಿದ್ದಾರೆ.

SUFC ರೆಸಿಡೆನ್ಶಿಯಲ್ ಅಕಾಡೆಮಿ ಟ್ರಯಲ್ಸ್ ಗಳಿಗೆ ನೋಂದಾಯಿಸಲು, SUFC ವೆಬ್ಸೈಟ್ಗೆ ಭೇಟಿ ನೀಡಬಹುದು

SUFC ರೆಸಿಡೆನ್ಶಿಯಲ್ ಅಕಾಡೆಮಿಯು ಭವಿಷ್ಯದ ಫುಟ್ಬಾಲ್ ಆಟಗಾರರಿಗೆ ತಳಮಟ್ಟದ ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಅಕಾಡೆಮಿಯು FIFA ಸ್ಟ್ಯಾಂಡರ್ಡ್ ಸೌಲಭ್ಯ, ವಿಶ್ವದರ್ಜೆಯ ಪಠ್ಯಕ್ರಮ, ಸ್ಥಾನ-ನಿರ್ದಿಷ್ಟ ವಿಶ್ಲೇಷಣೆ, ಪರವಾನಗಿ ಪಡೆದ ಕೋಚ್ ಗಳೊಂದಿಗೆ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ತರಬೇತಿ ಕೂಡ ನೀಡುತ್ತದೆ.

SUFC ರೆಸಿಡೆನ್ಶಿಯಲ್ ಅಕಾಡೆಮಿಯು ಕೇವಲ ಫುಟ್ಬಾಲ್ ತರಬೇತಿ ಮಾತ್ರವಲ್ಲದೆ, ಆಟಗಾರರರ ಸಮಗ್ರ ಅಭಿವೃದ್ಧಿಯತ್ತ ಕೂಡ ಒತ್ತು ನೀಡಲಿದೆ. ಜೀವನ ಕೌಶಲ್ಯ ತರಬೇತಿ,ಜಿಮ್ , ಭಾವನಾತ್ಮಕ ಅಭಿವೃದ್ಧಿ, ವೈಯಕ್ತಿಕ ಪೌಷ್ಠಿಕತೆ, ಮತ್ತು ವೃತ್ತಿ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಉತ್ತಮ ವೇದಿಕೆ ಒದಗಿಸುತ್ತಿದೆ. SUFC ರೆಸಿಡೆನ್ಶಿಯಲ್ ಅಕಾಡೆಮಿ ಮಾನ್ಯತೆ ಪಡೆದ ಶಿಕ್ಷಣ ಪಠ್ಯಕ್ರಮವನ್ನು ಅನುಸರಿಸಲಿದ್ದು, ಅಥ್ಲೆಟಿಕ್ ತರಬೇತಿಯೊಂದಿಗೆ ಶೈಕ್ಷಣಿಕ ಶಿಕ್ಷಣದ ಕಡೆಗೂ ಕೂಡ ಆದ್ಯತೆ ನೀಡುತ್ತದೆ. ಅಕಾಡೆಮಿಯು ಉತ್ತಮ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾದ ಕ್ಯಾಂಪಸ್ ಅನ್ನು ಹೊಂದಿದ್ದು, ಜಿಮ್, ಫಿಜಿಯೊಥೆರಪಿ ಕೇಂದ್ರ, ವಿಡಿಯೋ ಅನಾಲಿಸಿಸ್ ರೂಮ್ಗಳು, ಹಾಗೂ ಆರಾಮದಾಯಕ ವಾಸಸ್ಥಾನಗಳನ್ನು ಒಳಗೊಂಡಿದೆ. ತನ್ನದೇ ಆದ ಸುರಕ್ಷಿತ ಮತ್ತು ಸುಸಜ್ಜಿತ ಕ್ಯಾಂಪಸ್ನಲ್ಲಿ ನೆಲೆಗೊಂಡಿರುವ ಅಕಾಡೆಮಿಯು ಆಟಗಾರರ ಆರೋಗ್ಯ ಮತ್ತು ಮನರಂಜನೆಗೆ ಅಗತ್ಯವಿರುವ PUMA ಇಂಡಿಯಾ, Maverick & Farmer, Cult.Fit, Tagda Raho ಮತ್ತು ಹೆಚ್ಚಿನ ಬ್ರ್ಯಾಂಡ್ಗಳನ್ನು ಒಳಗೊಂಡಿದೆ.

2012ರಿಂದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ 13,000 ಕ್ಕೂ ಹೆಚ್ಚು ಫುಟ್ಬಾಲ್ ಆಟಗಾರರಿಗೆ ತರಬೇತಿ ನೀಡಿದೆ. BDFA A ಡಿವಿಷನ್ ಚಾಂಪಿಯನ್ಶಿಪ್, BDFA ಸೂಪರ್ ಡಿವಿಷನ್ನಲ್ಲಿ ನಾಲ್ಕು ಬಾರಿ ಟಾಪ್-2 ಸ್ಥಾನವನ್ನು ಪಡೆದಿದ್ದು, 2ನೇ ಡಿವಿಷನ್ I-ಲೀಗ್ನಲ್ಲಿ ಭಾಗವಹಿಸಿದೆ. SUFCಯು Under-13, Under-15, ಮತ್ತು Under-17 ವಿಭಾಗಗಳಲ್ಲಿ ಮೂರು ಎಲೈಟ್ ಯುವ ತಂಡಗಳನ್ನು ಹೊಂದಿದ್ದು, ಜೊತೆಗೆ ಹಿರಿಯ ಪುರುಷರ ತಂಡವನ್ನೂ ಕೂಡ ಹೊಂದಿದೆ. ಭಾರತದಲ್ಲಿ ಸುಸ್ಥಿರ ಫುಟ್ಬಾಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ರೆಸಿಡೆನ್ಶಿಯಲ್ ಅಕಾಡೆಮಿಯ ಮಹತ್ವದ ಹೆಜ್ಜೆಯಾಗಿದೆ. ಇಲ್ಲಿ ಆಟಗಾರರು, ತರಬೇತುದಾರರು ಮತ್ತು ವೃತ್ತಿಪರರು ಕ್ರೀಡೆಯಲ್ಲಿ ಅಭಿವೃದ್ಧಿ ಹೊಂದಬಹುದು ಮತ್ತು ಉತ್ತಮ ಸಾಧನೆ ಮಾಡಬಹುದಾಗಿದೆ.

SUFC ರೆಸಿಡೆನ್ಶಿಯಲ್ ಅಕಾಡೆಮಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  82962 81556ನ್ನು ಸಂಪರ್ಕಿಸಬಹುದು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

3 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

4 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

4 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

5 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

5 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

6 hours ago