ಕ್ರೀಡೆ

FIFA World Cup :ವಿಶ್ವಕಪ್​ಗೆ ಮುತ್ತಿಕ್ಕಿದ ಅರ್ಜೆಂಟೀನಾ

ದೋಹಾ (ಕತಾರ್​): ಭಾನುವಾರ ಕತಾರ್‌ನ ಲುಸೇಲ್ ಸ್ಟೇಡಿಯಂ ರಣರೋಚಕ ಫುಟ್ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ವಿಶ್ವಕಪ್​ ಫೈನಲ್​ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ಚಾಂಪಿಯನ್​ ಪಟ್ಟ ಗೆದ್ದುಕೊಂಡಿತು. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್​ನ ಯುವ ತಾರೆ ಕೈಲಿಯನ್ ಎಂಬಪ್ಪೆ ಅದ್ಭುತ ಆಟ ಪ್ರದರ್ಶಿಸಿದರು. ಮೆಸ್ಸಿ ಎರಡು ಮತ್ತು ಎಂಬಪ್ಪೆ ಮೂರು ಗೋಲು ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು. 

ಲಿಯೋನೆಲ್ ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯಲ್ಲಿ ಮೊದಲ ಗೋಲು ಗಳಿಸಿದರು. ಈ ಮೂಲಕ ವಿಶ್ವಕಪ್‌ನ ಎಲ್ಲಾ ನಾಕೌಟ್ ಪಂದ್ಯಗಳಲ್ಲಿ ಸ್ಕೋರ್ ಮಾಡಿದ ವಿಶ್ವದ ಮೊದಲ ಫುಟ್‌ಬಾಲ್ ಆಟಗಾರರೆನಿಸಿದರು. ಅದರ ನಂತರ, ಏಂಜೆಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾವನ್ನು 2-0 ಮುನ್ನಡೆಗೆ ತಂದರು. ವಿರಾಮದ ವೇಳೆಗೆ ಅರ್ಜೆಂಟೀನಾ 2-0 ಮುನ್ನಡೆಯಲ್ಲಿತ್ತು. ವಿರಾಮದ ಬಳಿಕ ಉಭಯ ತಂಡಗಳು ಪೈಪೋಟಿ ಮುಂದುವರೆಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ 80ನೇ ನಿಮಿಷದವರೆಗೂ ಪಂದ್ಯವನ್ನು ಅರ್ಜೆಂಟೀನಾ ಸುಲಭವಾಗಿ ಗೆಲ್ಲುತ್ತದೆ ಎಂದೆನಿಸಿತ್ತು. ಆದರೆ ಕೈಲಿಯನ್ ಎಂಬಪ್ಪೆ 80 ಮತ್ತು 81ನೇ ನಿಮಿಷದಲ್ಲಿ ಎರಡು ಗೋಲು ಬಾರಿ ಪಂದ್ಯಕ್ಕೆ ಪಂದ್ಯಕ್ಕೆ ತಿರುವು ನೀಡಿದರು.
ನಿಗದಿತ 90 ನಿಮಿಷಗಳ ನಂತರ ಸ್ಕೋರ್ 2-2ರಲ್ಲಿ ಸಮನಾದ ನಂತರ ಪಂದ್ಯ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು.

108ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಗೋಲು ಬಾರಿಸಿ ಅರ್ಜೆಂಟೀನಾವನ್ನು 3-2 ಗೋಲುಗಳಿಂದ ಮುನ್ನಡೆಸಿದರು. ಮತ್ತೊಮ್ಮೆ ಅರ್ಜೆಂಟೀನಾ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತು. ಆದರೆ, 117ನೇ ನಿಮಿಷದಲ್ಲಿ ಫ್ರಾನ್ಸ್​ ತಂಡ ಗೋಲು ಬಾರಿಸುವ ಮೂಲಕ ಪಂದ್ಯವನ್ನು 3-3ರಲ್ಲಿ ಸಮಬಲಗೊಳಿಸಿದರು. ಇದಾದ ಬಳಿಕ ಪಂದ್ಯ ಪೆನಾಲ್ಟಿ ಶೂಟೌಟ್ ನಡೆಯಿತು.

ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ: ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟೌಟ್‌ನ ಹೀರೋ ಆಗಿ ಹೊರಹೊಮ್ಮಿದರು. ಎಂಬಪ್ಪೆ ಫ್ರಾನ್ಸ್‌ಗೆ ಮೊದಲ ಪೆನಾಲ್ಟಿಯ ಲಾಭ ಪಡೆದರು. ನಂತರ ಮೆಸ್ಸಿ ಅರ್ಜೆಂಟೀನಾ ಪರ ಗೋಲು ಗಳಿಸಿದರು. ಆ ಬಳಿಕ ಕೋಮನ್ (ಎರಡನೇ ಪೆನಾಲ್ಟಿ) ಮತ್ತು ಚೌಮಾನಿ (ಮೂರನೇ ಪೆನಾಲ್ಟಿ) ಸತತ ವಿಫಲವಾದಾಗ ಅರ್ಜೆಂಟೀನಾ ಅಭಿಮಾನಿಗಳು ಸಂಭ್ರಮಿಸಿದರು. ಅರ್ಜೆಂಟೀನಾ ಪರ ಎರಡು ಮತ್ತು ಮೂರನೇ ಪ್ರಯತ್ನಗಳಲ್ಲಿ ಡೈಬಾಲಾ ಮತ್ತು ಪರೆಡೆಸ್ ಯಶಸ್ವಿಯಾಗಿದ್ದರಿಂದ ತಂಡವು 3-1ರ ಮುನ್ನಡೆ ಸಾಧಿಸಿತು. ಕೊಲೊ ಮೌನಿ ನಾಲ್ಕನೇ ಪೆನಾಲ್ಟಿಯ ಲಾಭ (2-3) ಪಡೆಯುವ ಮೂಲಕ ಫ್ರಾನ್ಸ್‌ನ ಭರವಸೆಯನ್ನು ಜೀವಂತವಾಗಿಟ್ಟರು. ಆದರೆ ನಂತರ ಮೊಂಟಿಯೆಲ್ ಒದ್ದ ಚೆಂಡನ್ನು ಫ್ರಾನ್ಸ್​ನ ಗೋಲ್ ಕೀಪರ್ ತಡೆಯುವಲ್ಲಿ ವಿಫಲರಾದರು. ಹೀಗಾಗಿ ಫ್ರಾನ್ಸ್ ವಿರುದ್ಧ​ ಅರ್ಜೆಂಟೀನಾ 4-2ರಿಂದ ಪಂದ್ಯ ಗೆದ್ದು ವಿಶ್ವಕಪ್​ಗೆ ಮುತ್ತಿಕ್ಕಿದೆ

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

14 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

18 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

18 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

18 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

18 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

18 hours ago