ಕ್ರೀಡೆ

ಫಿಫಾ ಮಹಿಳಾ ವಿಶ್ವಕಪ್ ಫೈನಲ್: ಇಂಗ್ಲೆಂಡ್ ವಿರುದ್ಧ ಗೆದ್ದ ಸ್ಪೇನ್ ವಿಶ್ವ ಚಾಂಪಿಯನ್!

ಸಿಡ್ನಿ : ಸಿಡ್ನಿಯಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್‌ನ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಸ್ಪೇನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸ್ಪೇನ್ ತಂಡದ ನಾಯಕಿ ಓಲ್ಗಾ ಕಾರ್ಮೋನಾ ಏಕೈಕ ಗೋಲು ದಾಖಲಿಸಿದ್ದರು. ಈ ಗೋಲಿನೊಂದಿಗೆ ಸ್ಪ್ಯಾನಿಷ್ ಪಡೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು ವಿಶೇಷ.

ಉಭಯ ತಂಡಗಳು ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಫುಟ್​ಬಾಲ್​ನಲ್ಲಿ ಫೈನಲ್ ಆಡಿದ್ದು, ಇದಾಗ್ಯೂ ಹೀಗಾಗಿ ಹೊಸ ಚಾಂಪಿಯನ್ ತಂಡವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಪಂದ್ಯದ 29ನೇ ನಿಮಿಷಲ್ಲಿ ಕಾರ್ಮೋನಾ ಬಾರಿಸಿದ ಚೆಂಡು ಇಂಗ್ಲೆಂಡ್ ಗೋಲಿಯನ್ನು ವಂಚಿಸಿ ಬಲೆಯೊಳಗೆ ಸೇರಿತು.

ಇದಾದ ಬಳಿಕ ಇಂಗ್ಲೆಂಡ್ ಆಟಗಾರ್ತಿಯರು ಸಮಬಲ ಸಾಧಿಸಲು ಕೊನೆಯವರೆಗೆ ಹೋರಾಟ ನಡೆಸಿದರು. ಆದರೆ ದ್ವಿತಿಯಾರ್ಧದಲ್ಲೇ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದ ಸ್ಪೇನ್ ಪಡೆಯು ಮೊದಲಾರ್ಧದ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿಯರಿಗಿಂತ ಸ್ಪೇನ್ ತಂಡ ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಇಂಗ್ಲೆಂಡ್ ಶೇ.70 ರಷ್ಟು ನಿಖರ ಪಾಸ್​ಗಳ ಮೂಲಕ ಗಮನ ಸೆಳೆದರೆ, ಸ್ಪೇನ್ ಆಟಗಾರ್ತಿಯರು ಶೇ.81 ರಷ್ಟು ಪಾಸ್​ಗಳ ಮೂಲಕ ಪಂದ್ಯವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಈ ಮೂಲಕ ಪೂರ್ಣ ಸಮಯದವರೆಗೆ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಸ್ಪೇನ್ ತಂಡವು ಅಂತಿಮವಾಗಿ  1-0 ಅಂತರದ ಮುನ್ನಡೆಯೊಂದಿಗೆ ಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಸ್ಪೇನ್​ನ ಐತಾನಾ ಬೊನ್ಮಾಟಿಗೆ ಗೋಲ್ಡನ್ ಬಾಲ್ ಪ್ರಶಸ್ತಿ ಲಭಿಸಿದರೆ, ಇಂಗ್ಲೆಂಡ್ ಗೋಲ್ ಕೀಪರ್ ಮೇರಿ ಇಯರ್ಪ್ಸ್ ಗೋಲ್ಡನ್ ಗ್ಲೋವ್ ಅವಾರ್ಡ್ ಪಡೆದರು.

ಹಾಗೆಯೇ ಬೆಸ್ಟ್ ಯಂಗ್ ಪ್ಲೇಯರ್ ಪ್ರಶಸ್ತಿ ಸ್ಪೇನ್​ನ ಸಲ್ಮಾ ಪ್ಯಾರಲ್ಯುಲೋಗೆ ನೀಡಲಾಗಿದೆ. ಇನ್ನು ಟೂರ್ನಿಯಲ್ಲಿ ಅತ್ಯಧಿಕ ಗೋಲು ಬಾರಿಸಿದ ಗೋಲ್ಡನ್ ಬೂಟ್ ಪ್ರಶಸ್ತಿಯು ಜಪಾನಿನ ಹಿನಾತಾ ಪಾಲಾಗಿದೆ.

ಮಹಿಳಾ ವಿಶ್ವಕಪ್ ಗೆದ್ದ ರಾಷ್ಟ್ರಗಳು :

  1. 1991- ಯುಎಸ್​ಎ
  2. 1995- ನಾರ್ವೆ
  3. 1999- ಯುಎಸ್​ಎ
  4. 2003- ಜರ್ಮನಿ
  5. 2007- ಜರ್ಮನಿ
  6. 2011- ಜಪಾನ್
  7. 2015- ಯುಎಸ್​ಎ
  8. 2019- ಯುಎಸ್​ಎ
  9. 2023- ಸ್ಪೇನ್
andolanait

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

12 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

13 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

13 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

13 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

16 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

22 hours ago