ಕ್ರೀಡೆ

ಇಂಗ್ಲೆಂಡ್‌ ವಿರುದ್ಧ ನಾಳೆ ಗೆದ್ದರೆ ಫೈನಲ್‌ ನಲ್ಲಿ ಮತ್ತೆ ಪಾಕ್‌ ಜತೆ ಮುಖಾಮುಖಿ

ಸಾಂಪ್ರದಾಯಿಕ ಎದುರಾಳಿಗಳು ಎದುರಾದರೆ ಟಿ& 20 ಪಂದ್ಯ ಮತ್ತಷ್ಟು ರೋಚಕ

ಅಡಿಲೇಡ್: ಈ ಬಾರಿ ಟಿ- 20 ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಛಲ ತೊಟ್ಟಿರುವ ಭಾರತ ತಂಡ, ಸೂಪರ್ ೧೨ರಲ್ಲಿ ೫ ಪಂದ್ಯಗಳಿಂದ ೮ ಅಂಕಗಳೊಂದಿಗೆ ಗ್ರೂಪ್ ೨ರಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.

ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪ್ರಮುಖ ಪಂ ದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡ ಸಜ್ಜಾಗಿದೆ.
ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಟಿ೨೦ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೆಣಸಾಡಲಿದ್ದು, ಇಲ್ಲಿ ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಮುನ್ನಡೆಯಲಿದೆ.

2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಮೂರು ಅರ್ಧಶತಕಗಳನ್ನು ದಾಖಲಿಸಿ ಭಾರತದ ಮಹತ್ವದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇನ್ನು ತಂಡದ ವಿಷಯಕ್ಕೆ ಬಂದರೆ ಸ್ಪಿನ್ನರ್‌ಗಳನ್ನು ಎದುರಿಸಲು ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶವನ್ನು ನೀಡಲು ತಂಡದ ನಾಯಕ ಬಯಸಿದ್ದಾರೆ. ಆದರೆ ವಿಕೆಟ್ ಕೀಪರ್‌ಗಳಿಬ್ಬರೂ ತಂಡದ ಆಯ್ಕೆಯಲ್ಲಿರುತ್ತಾರೆ,
ಮಂಗಳವಾರ ನೆಟ್ಸ್ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಅವರ ಮುಂಗೈಗೆ ಪೆಟ್ಟು ಬಿದ್ದಿತ್ತು. ಅದರ ಬಗ್ಗೆ ಮಾತನಾಡಿರುವ ರೋಹಿತ್ “” ನನಗೆ ನಿನ್ನೆ ಬಾಲ್ ತಾಗಿದೆ, ಆದರೆ ಇದೀಗ ಚೇತರಿಕೆಯಾಗಿದೆ ಎಂದು ತೋರುತ್ತದೆ, ಸಣ್ಣದಾದ ಏಟು ಕಂಡುಬಂದಿದೆ, ಆದರೆ ಈಗ ಅದು ಸಂಪೂರ್ಣವಾಗಿ ಗುಣಮುಖವಾಗಿದೆʼʼ ಎಂದಿದ್ದಾರೆ.

 

2013ರಲ್ಲಿ ಭಾರತ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದಕ್ಕೂ ಮುನ್ನ 2007ರಲ್ಲಿ ಟಿ೨೦ ವಿಶ್ವಕಪ್ ಗೆದ್ದು ಬೀಗಿತ್ತು. ಭಾರತ ತಂಡವು ಕೊನೆಯದಾಗಿ ಐಸಿಸಿ ಟೂರ್ನಿಯನ್ನು ಅನ್ನು ಗೆದ್ದು ಒಂಬತ್ತು ವರ್ಷಗಳಾಗಿವೆ. ಅಂದಿನಿಂದ ಐಸಿಸಿ ಪ್ರಶಸ್ತಿಯು ಪ್ರತಿ ಬಾರಿಯೂ ಟೀಂ ಇಂಡಿಯಾಗೆ ಗಗನಕುಸುಮವಾಗಿದೆ. ಆದರೆ ಈ ಬಾರಿ ಸೆಮಿಫೈನಲ್ ಹಂತ ತಲುಪಿದ್ದು, ಮತ್ತೊಂದು ವಿಶ್ವಕಪ್ ಗೆಲ್ಲುವ ಸನಿಹದಲ್ಲಿದೆ.


ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ. ಅದು ಬಹುಶಃ ಸೂರ್ಯಕುಮಾರ್ ಯಾದವ್ ಸ್ವಭಾವ.‌ ಅವನು ನಿರ್ಭೀತಿಯಿಂದ ಆಡುತ್ತಾನೆ. ಪಂದ್ಯದ ಪರಿಸ್ಥಿತಿಗನುಗುಣವಾಗಿ ತಂಡದ ಒತ್ತಡವನ್ನು ಬ್ಯಾಟಿಂಗ್ ಮೂಲಕ ನಿಭಾಯಿಸುತ್ತಾನೆ. ಇದು ತಂಡಕ್ಕೆ ವರದಾನವಾಗಿದೆ. ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ. ಅದು 10 ರನ್‌ಗೆ 2 ವಿಕೆಟ್ ಬಿದ್ದಿರಬಹುದು ಅಥವಾ 100ಕ್ಕೆ 2 ವಿಕೆಟ್‌ ಆಗಿರಬಹುದು—

–ರೋಹಿತ್ ಶರ್ಮಾ, ತಂಡದ ನಾಯಕ

andolanait

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

13 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

14 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

15 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

16 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

19 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

19 hours ago