ಮಂಡ್ಯ

ಮಂಡ್ಯ | ಶೂಟೌಟ್‌ ಪ್ರಕರಣ ; 7 ಆರೋಪಿಗಳ ಬಂಧನ

ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಟಯೋಟ ಕಾರು, ಪಿಸ್ತೂಲ್ ವಶ: ಎಸ್‌ಪಿ

ಮಂಡ್ಯ : ನಗರದ ಹೊರವಲಯದ ಹೆದ್ದಾರಿಯಲ್ಲಿ ಜು.2ರ ಗುರುವಾರ ಮುಂಜಾನೆ ಗೂಡ್ಸ್ ವಾಹನದ ಚಾಲಕನ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಒಂದು ಪಿಸ್ತೂಲ್, ಕಾರ್ಬನ್ ರೀಫಿಲ್ಸ್-02 ಪಿಲ್ಲೇಟ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿ.ಜೆ. ಶೋಭಾರಾಣಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಅಶೋಕನಗರದ ನಿವಾಸಿ, ಕಾನೂನು ವಿದ್ಯಾರ್ಥಿ ಎಚ್.ವಿ.ರೋಹನ್‌ಗೌಡ (23), ಮರೀಗೌಡ ಬಡಾವಣೆಯ ಬಿ.ಇ.ವಿದ್ಯಾರ್ಥಿ ಶಶಾಂಕ್ (25), ಕಾರಸವಾಡಿ ರಸ್ತೆಯಲ್ಲಿರುವ ದ್ವಾರಕಾನಗರದ ನಿವಾಸಿ ಅಫಾನ್ (25), ಕುವೆಂಪುನಗರದ ಮಹಮ್ಮದ್ ಉಮರ್, ವಿದ್ಯಾನಗರದ ನಿತಿನ್ (27), ಗಾಂಧಿನಗದ ಮಹಮ್ಮದ್ ಅಬೂಬಕರ್ (25), ವಿದ್ಯಾನಗದ ನಿವಾಸಿ, ಡೆಲಿವರಿ ಹೆಡ್ ಸಚಿನ್ (26) ಎಂಬವರೇ ಬಂಧಿತ ಆರೋಪಿಗಳು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನೆಯ ಹಿನ್ನೆಲೆ:
ಮೈಸೂರಿನ ನಿವಾಸಿ, ಸೂಪರ್ ಸ್ಪೀಡ್ ಸರ್ವಿಸ್ ಕೊರಿಯರ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಶಂಕರ್ ಅವರು ಜು.2ರಂದು ತಡರಾತ್ರಿ 2 ಗಂಟೆ ಸಮಯದಲ್ಲಿ ಬೆಂಗಳೂರಿನ ಕೊರಿಯರ್ ಕಚೇರಿಯಿಂದ ಪಾರ್ಸೆಲ್ ತುಂಬಿಕೊಂಡು ಟಾಟಾ ಗೂಡ್ಸ್ ವಾಹನದಲ್ಲಿ ಹೆದ್ದಾರಿ ಮೂಲಕ ಮೈಸೂರಿಗೆ ಬರುತ್ತಿದ್ದಾಗ ಮಂಡ್ಯ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್ ಬಳಿ ಹಿಂಬದಿ ಕಾರಿನಲ್ಲಿ ಬರುತ್ತಿದ್ದ ಆರೋಪಿ ಎಚ್.ವಿ.ರೋಹನ್‌ಗೌಡ ಮತ್ತು ಸ್ನೇಹಿತರು ಗೂಡ್ಸ್ ವಾಹನವನ್ನು ಓವರ್ ಟೇಕ್ ಮಾಡಿ 4.50ರ ಸಮಯದಲ್ಲಿ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ಚಾಲಕ ಶಂಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕಾರಿನ ಚಾಲಕನು ಕಿಟಕಿ ಮೂಲಕ ಯಾವುದೋ ಆಯುಧವನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ನಂತರ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನುಳಿದವರು ಕಾರನ್ನು ನಿಲ್ಲಿಸದೆ ಚಾಲನೆ ಮಾಡಿಕೊಂಡು ಪರಾರಿಯಾದರು ಎಂದು ಚಾಲಕ ಶಂಕರ್ ತಿಳಿಸಿದ್ದಾರೆ ಎಂದರು.

ನಂತರ ಈ ಘಟನೆಯಿಂದ ಹೆದರಿದ ಗೂಡ್ಸ್ ವಾಹನದ ಚಾಲಕ ಶಂಕರ್ ವಾಹನವನ್ನು ಮೈಸೂರಿನಲ್ಲಿರುವ ತಮ್ಮ ಕಚೇರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಸುಮ್ಮನಾಗಿದ್ದನು. ಈ ವಿಷಯ ತಿಳಿದು ಚಾಲಕ ಶಂಕರ್‌ನನ್ನು ಕರೆಯಿಸಿ ವಿಚಾರಣೆ ಮಾಡಲಾಗಿ ನಡೆದಿರುವ ವಿಷಯವನ್ನು ತಿಳಿಸಿದರು.

ಬಳಿಕ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಶುಕ್ರವಾರ ರಾತ್ರಿ 11ರ ಸಮಯದಲ್ಲಿ ಗೂಡ್ಸ್ ವಾಹನದ ಚಾಲಕ ಶಂಕರ್ ಅವರು ದೂರು ದಾಖಲಿಸಿದ್ದಾರೆ. ಈ ಸಂಬಂಧವಾಗಿ ತನಿಖೆ ನಡೆಸಿದಾಗ ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಟಯೋಟ ಫಾರ್ಚುನರ್ ಕಪ್ಪು ಬಣ್ಣದ ಕಾರು ಹಾಗೂ ಒಂದು ಪಿಸ್ತೂಲ್ (ಓ2 ಏರ್ ಪಿಸ್ತೂಲ್), ಕಾರ್ಬನ್ ರೀಫಿಲ್ಸ್-02, ಪಿಲ್ಲೇಟ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶೋಭಾರಾಣಿ ಅವರು ಹೇಳಿದರು.

ಏರ್ ಗನ್‌ನಿಂದ ಫೈಯರ್…
ಕುಡಿದ ಮತ್ತಿನಲ್ಲಿ ಏರ್ ಗನ್ ಬಳಸಿ ಫೈಯರ್ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಬರ್ತ್ ಡೇ ಪಾರ್ಟಿ ಮುಗಿಸಿ ಬರುವಾಗ ಫೈಯರ್ ಮಾಡಿದ್ದಾರೆ. ಹಾರ್ನ್ ಮಾಡಿದರೂ ಗೂಡ್ಸ್ ವಾಹನದ ಚಾಲಕ ಜಾಗ ಬಿಡದ ಕಾರಣ ಮುಂದೆ ಬಂದು ಕಾರ್ ಗ್ಲಾಸ್ ಇಳಿಸಿ ಫೈಯರ್ ಮಾಡಿದ್ದು, ತಮಾಷೆಗಾಗಿ ಏರ್‌ಗನ್‌ನಿಂದ ಫೈಯರ್ ಮಾಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಅದು ಯಾವ ಗನ್ ಎಂದು ತಿಳಿದುಕೊಳ್ಳಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅವರು ಮಾದಕ ವ್ಯಸನ ಸೇವಿಸಿರುವ ಬಗ್ಗೆಯೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

16 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

16 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

23 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

23 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

23 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

23 hours ago