ಬೆಂಗಳೂರು: ಪವನ್ ದೇಶಪಾಂಡೆ ಅವರ ಸಮಯೋಚಿತ ಬ್ಯಾಟಿಂಗ್ (57) ಹಾಗೂ ವಿದ್ಯಾಧರ ಪಾಟೀಲ್ ಅವರ ಮಾರಕ ಬೌಲಿಂಗ್ (24ಕ್ಕೆ 4) ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ದಾಖಲಿಸಿದೆ.
146 ರನ್ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ಬೌಲಿಂಗ್ ದಾಳಿಗೆ ಸಿಲುಕಿ 9 ವಿಕೆಟ್ ಕಳೆದುಕೊಂಡು 143ರನ್ ಗಳಿಸಿ ವೀರೋಚಿತ ಸೋಲನುಭವಿಸಿತು.
ನಾಯಕ ಅಭಿಮನ್ಯು ಮಿಥುನ್ (27), ಶರಣ್ ಗೌಡ (31) ಹಾಗೂ ಆನಂದ್ ದೊಡ್ಡಮನಿ (10) ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
ಮೈಸೂರು ವಾರಿಯರ್ಸ್ ಪರ ವಿದ್ಯಾಧರ ಪಾಟೀಲ್ ೩, ಶ್ರೇಯಸ್ ಗೋಪಾಲ್ ಹಾಗೂ ಆದಿತ್ಯ ಗೋಯಲ್ ತಲಾ ೨ ವಿಕೆಟ್ ಗಳಿಸಿ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೈಸೂರಿಗೆ ಆಸರೆಯಾದ ದೇಶಪಾಂಡೆ: ಕುಸಿದ ಮೈಸೂರಿಗೆ ಪವನ್ ದೇಶಪಾಂಡೆ ಮತ್ತೆ ಆಸರೆಯಾದರು. ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್ 7ವಿಕೆಟ್ ನಷ್ಟಕ್ಕೆ ಕೇವಲ 145ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ಅದ್ಭುತ ಯಶಸ್ಸು ಕಂಡಿತು. ನಾಯಕ ಕರುಣ್ ನಾಯರ್ ಹಾಗೂ ನಿತಿನ್ ಬಿಲ್ಲೆ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು, ಮೈಸೂರಿನ ರನ್ ಗಳಿಕೆಯ ಮೇಲೆ ತೀವ್ರ ಹೊಡೆತ ಬಿದ್ದಿತು. ನಿಹಾಲ್ ಉಳ್ಳಾಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆಗ ತಂಡಕ್ಕೆ ಆಶ್ರಯ ನೀಡಿದ್ದು, ಪವನ್ ದೇಶಪಾಂಡೆ. 51 ಎಸೆತಗಳನ್ನೆದುರಿಸಿದ ದೇಶಪಾಂಡೆ 8 ಬೌಂಡರಿ ನೆರವಿನಿಂದ 57 ರನ್ ಗಳಿಸಿದರು. ಸತತ ನಾಲ್ಕು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ ಕೀರ್ತಿ ಪವನ್ ದೇಶಪಾಂಡೆಗೆ ಸಲ್ಲುತ್ತದೆ. ಒಟ್ಟು 328ರನ್ ಗಳಿಸಿದ ಪವನ್ ದೇಶಪಾಂಡೆ ಈಗ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಶುಭಾಂಗ್ ಹೆಗ್ಡೆ (22) ಮತ್ತು ಶಿವರಾಜ್ (26) ಕೆಲ ಹೊತ್ತು ದೇಶಪಾಂಡೆ ಅವರಿಗೆ ಸಾಥ್ ನೀಡಿದರು. ಕೊನೆಯ ಕ್ಷಣದಲ್ಲಿ ಭರತ್ ಧುರಿ ಕೇವಲ 7 ಎಸೆತಗಳಲ್ಲಿ 2ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 18 ರನ್ ಗಳಿಸಿ ತಂಡಕ್ಕೆ ನೆರವಾದರು.
ಸಂಕ್ಷಿಪ್ತ ಸ್ಕೋರ್:
ಮೈಸೂರು ವಾರಿಯರ್ಸ್: 20ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ (ಪವನ್ ದೇಶಪಾಂಡೆ 57, ಶುಭಾಂಗ್ ಹೆಗ್ಡೆ 22, ಶಿವರಾಜ್ 26, ವಾಸುಕಿ ಕೌಶಿಕ್ 19ಕ್ಕೆ 3, ರೋಹನ್ ನವೀನ್ 37ಕ್ಕೆ 2)
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143(ಸಿಸೋಡಿಯಾ 22, ಶ್ರೀನಿವಾಸ್ ಶರತ್ 21, ಎ.ಮಿಥುನ್ 27, ಶರಣ್ ಗೌಡ್ 31, ಆನಂದ ದೊಡ್ಡ ಮನಿ 10*, ವಿದ್ಯಾಧರ 24ಕ್ಕೆ 4, ಅದಿತ್ಯ ಗೋಯಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 27ಕ್ಕೆ 2)
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…
ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…
ಮೈಸೂರು : ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋಟ್೯ನ ನಿ.ನ್ಯಾಯಮೂರ್ತಿಯೂ ಆದ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…
ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…
ಬೆಂಗಳೂರು : ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ…