ರಾಜಕೀಯ

ರೈತರ ಹಣ ತಿಂದ್ರೆ ಪ್ಯಾರಾಲಿಸಿಸ್‌ ಬರುತ್ತೆ : ಲಕ್ಷ್ಮಣ ಸವದಿ

ಬೆಳಗಾವಿ : ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಾಲಿಸಿಸ್‌ ಬರುತ್ತೆ ಅಂತ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಮಾತನಾಡಿರುವ ಶಾಸಕ ಲಕ್ಷ್ಮಣ ಸವದಿ ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಲಿಸಿಸ್‌ ಬರುತ್ತೆ. ರೈತರ ಹಣ ತಿಂದ ಮಾಲಿಕರು ಉದ್ದಾರ ಆಗಲ್ಲ. ಅನ್ನದಾತರಿಗೆ ಮೋಸ ಮಾಡಬೇಡಿ ಎಂದಿದ್ದಾರೆ.
ನಿಯಮ  69 ರ ಅಡಿಯಲ್ಲಿ ಕಬ್ಬು ಕಾರ್ಖಾನೆಗಳಲ್ಲಿ ಆಧುನಿಕ ತೂಕದ ಯಂತ್ರಗಳನ್ನು  ಅಳವಡಿಸುವ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತು ಆರಂಭಿಸುತ್ತಿದ್ದಂತೆಯೇ ವಿಪಕ್ಷ ಶಾಸಕರು ಸದನದ ಭಾವಿಯಲ್ಲಿ ನಿಂತು ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸವದಿ ನೀವು ಕಬ್ಬು ಬೆಳೆಗಾರರ ವಿರೋಧಿಗಳು, ಹೊರಗೆ ಹೋದರೆ ಜನ ನಿಮಗೆ ಕಬ್ಬು ತಗೊಂಡು ಹೊಡಿತಾರೆ ಎಂದು ಎಚ್ಚರಿಸಿದರು.
ಇನ್ನು ತಮ್ಮ ಚರ್ಚೆಗೆ ಅಡ್ಡಿ ಪಡಿಸಿದ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ ಅವರ ವಿರುದ್ಧ ಸಿಟ್ಟಾದ ಸವದಿ, ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು. ನಿನ್ನ ಯಾರು ಕೀಲಿ ಕೊಟ್ಟು ಇಲ್ಲಿಗೆ ಕೂಗಲು ಕಳಿಸಿದ್ದಾರೆ ಅಂತಾ ಗೊತ್ತಿದೆ. ಕೂಗೂ ಜೋರಾಗಿ ಕೂಗು ಎಂದು ಕಿಡಿ ಕಾರಿದರು.
lokesh

Recent Posts

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

10 mins ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

2 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

2 hours ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

3 hours ago