ರಾಷ್ಟ್ರೀಯ

ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದು ನಾವೇ: ಪಿಎಎಫ್‌ಎಫ್ ಉಗ್ರ ಸಂಘಟನೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಹಠಾತ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸೇನಾ ವಾಹನದ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಪಿಎಎಫ್‌ಎಫ್ ಹೊತ್ತುಕೊಂಡಿದೆ.

ಏನಿದು ಪಿಎಎಫ್‌ಎಫ್?

People’s Anti-Fascist Front ಅನ್ನೋದು PAFFನ ವಿಸೃತ ರೂಪವಾಗಿದೆ. ಈ ಭಯೋತ್ಪಾದಕ ಸಂಘಟನೆ ಈ ಹಿಂದೆಯೂ ಹಲವು ಬಾರಿ ಸೇನೆ ಮೇಲೆ ದಾಳಿಗಳನ್ನು ನಡೆಸಿತ್ತು. ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರ ರಾಜ್ಯಾದ್ಯಂತ ಸಕ್ರಿಯವಾಗಿದೆ.

ಪಿಎಎಫ್‌ಎಫ್ ಸಂಘಟನೆಯ ಪ್ರಮುಖ ಅಂಶಗಳು ಇಂತಿವೆ:

1. ಪಿಎಎಫ್‌ಎಫ್ ಸಂಘಟನೆಯು ಲಷ್ಕರ್ – ಇ – ತೊಯ್ಬಾ ಭಯೋತ್ಪಾದಕ ಸಂಘಟನೆಯ ಒಂದು ವಿಭಾಗ. ಈ ಸಂಘಟನೆಯು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2019ರಲ್ಲಿ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ರದ್ದತಿ ಬಳಿಕ 2019ರ ಆಗಸ್ಟ್‌ನಲ್ಲಿ ಈ ಸಂಘಟನೆ ತನ್ನ ಚಟುವಟಿಕೆ ಮೂಲಕ ಗಮನ ಸೆಳೆಯಿತು.

2. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಾದ್ಯಂತ ನಡೆದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಪಿಎಎಫ್‌ಎಫ್ ಸಂಘಟನೆಯ ಕೈವಾಡ ಸಾಬೀತಾಗಿದೆ. ಸೈನಿಕರು, ಭದ್ರತಾ ಪಡೆಗಳು ಹಾಗೂ ಜನ ಸಾಮಾನ್ಯರ ವಸತಿ ಪ್ರದೇಶಗಳಲ್ಲೂ ಈ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ.

3. ಬಾಡಿ ಕ್ಯಾಮ್ ಬಳಸುವ ಹೈಟೆಕ್ ಸಂಘಟನೆ!: ಪಿಎಎಫ್‌ಎಫ್ ಸಂಘಟನೆಯ ಉಗ್ರಗಾಮಿಗಳು ತಾವು ದಾಳಿ ನಡೆಸುವಾಗ ತಮ್ಮ ದೇಹಕ್ಕೆ ಬಾಡಿ ಕ್ಯಾಮ್ ಅಳವಡಿಕೆ ಮಾಡಿಕೊಂಡಿರುತ್ತಾರೆ. ಈ ಬಾಡಿ ಕ್ಯಾಮ್ ಮೂಲಕವೇ ಈ ಉಗ್ರ ಸಂಘಟನೆ ವಿಶಿಷ್ಟವಾಗಿ ಗುರ್ತಿಸಿಕೊಂಡಿದೆ. ಬಾಡಿ ಕ್ಯಾಮ್‌ನಲ್ಲಿ ಉಗ್ರರು ದಾಳಿ ನಡೆಸುವ ದೃಶ್ಯ ಹಾಗೂ ಕೆಲವು ವೇಳೆ ಉಗ್ರರು ಹತ್ಯೆಗೀಡಾಗುವ ದೃಶ್ಯಗಳೂ ಚಿತ್ರೀಕರಣ ಆಗಬಹುದು. ನಂತರ ಈ ದೃಶ್ಯಗಳನ್ನೇ ತಮ್ಮ ಪರ ವಾದ ಮಾಡಲು ತಿರುಚಿ ಬಳಕೆ ಮಾಡಿಕೊಳ್ಳುತ್ತಾರೆ!

4. 2023ರ ಏಪ್ರಿಲ್‌ನಲ್ಲೂ ಪಿಎಎಫ್‌ಎಫ್ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದೃಶ್ಯಗಳನ್ನು ಬಾಡಿ ಕ್ಯಾಮ್‌ನಲ್ಲಿ ಸೆರೆ ಹಿಡಿದಿದ್ದರು. ಇತ್ತೀಚೆಗೆ ಲಷ್ಕರ್ – ಇ – ತೊಯ್ಬಾ ಉಗ್ರ ಸಂಘಟನೆ ಈ ವಿಡಿಯೋವನ್ನ ಬಿಡುಗಡೆ ಮಾಡಿತ್ತು. ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಸೈನಿಕರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯವ ದೃಶ್ಯಗಳು ಇದರಲ್ಲಿ ಇದ್ದವು.

5. ಭಾರತದ ಭಯೋತ್ಪಾದನಾ ನಿಗ್ರಹ ಕಾಯ್ದೆಯ ಅಡಿ ಪಟ್ಟಿ ಮಾಡಲಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ಲಷ್ಕರ್ – ಇ – ತೊಯ್ಬಾ ಜೊತೆಯಲ್ಲೇ ಪಿಎಎಫ್‌ಎಫ್ ಸಂಘಟನೆಯನ್ನೂ ಸೇರಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 35ರ ಅಡಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಗಿದೆ.

andolanait

Recent Posts

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

14 hours ago

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

15 hours ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

15 hours ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

16 hours ago

ಕಾಡಾನೆ ದಾಳಿ: ರೈತ ಸಾವು

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…

16 hours ago

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

19 hours ago