ರಾಷ್ಟ್ರೀಯ

ಮೈಸೂರಿನ ಕೃಷ್ಣ ಶಿಲೆಯಿಂದ ತಯಾರಾಯ್ತು ಅಯೋಧ್ಯೆಯ ಬಾಲ ರಾಮ ಮೂರ್ತಿ!

ಮೈಸೂರು: ಉತ್ತರ ಪ್ರದೇಶದಲ್ಲಿ ಸಜ್ಜಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮುಂದಿನ ವರ್ಷ ಉದ್ಘಾಟನೆ ಆಗಲಿರುವ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳಿಸಲು ಬಾಲ ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಿ ಕಳುಹಿಸಿರುವುದು ಮೈಸೂರಿನ ಕೃಷ್ಣ ಶಿಲೆ ಎಂಬ ವೀಶೇಷ ಸಂಗತಿಯೊಂದು ಬೆಳಕಿಗೆ ಬಂದಿದೆ.

ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಜಮೀನಿನಲ್ಲಿ 6 ತಿಂಗಳ ಹಿಂದೆ ಸಿಕ್ಕ ಬೃಹತ್ ಕೃಷ್ಣಶಿಲೆಯಿಂದಲೇ ಬಾಲ ರಾಮನ ಮೂರ್ತಿಯನ್ನು ನಿರ್ಮಿಸಲಾಗಿದೆ. ಅಯೋಧ್ಯೆಯ ಟ್ರಸ್ಟಿಗಳು ಈ ಸ್ಥಳಕ್ಕೆ ಬಂದು ಕಲ್ಲು ಪರೀಕ್ಷೆ ಮಾಡಿ ಕಲ್ಲನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿನ ಮಣ್ಣನ್ನು ಕೂಡ ಕುಂಭದಲ್ಲಿ ತೆಗೆದು ಕೊಂಡು ಹೋಗಿ ರಾಮ ಮಂದಿರದ ಗರ್ಭಗುಡಿಯ ಒಳಗಿಟ್ಟಿದ್ದಾರೆ ಎಂದು ಕೃಷ್ಣಶಿಲೆ ಅರ್ಪಿಸಿದ ಗುತ್ತಿಗೆದಾರ ಶ್ರೀನಿವಾಸ್‌ ತಿಳಿಸಿದ್ದಾರೆ.

ಈ ಸಂಬಂಧ ಖಾಸಗಿ ವಾಹಿನಿ ಜೊತೆಗೆ ಮಾತನಾಡಿರುವ ಅವರು, ಹಾರೋಹಳ್ಳಿಯಲ್ಲಿ ಜಮೀನು ಹದಗೊಳಿಸುತ್ತಿದ್ದ ವೇಳೆ ಆಕಾಶ ನೀಲಿ ಬಣ್ಣದ ಬೃಹತ್‌ ಬಂಡೆಯೊಂದು ಕಂಡಿತು. ರಾಮಮಂದಿರ ಗುರುಗಳೊಂದಿಗೆ ಸಂಪರ್ಕದಲ್ಲಿದ್ದ ವಿಶ್ವಕರ್ಮ ಸಮುದಾಯದ ಸುರೇಂದ್ರ ಎಂಬವರು ಶ್ರೀರಾಮನ ಮೂರ್ತಿಗೆ ಪರಿಶುದ್ಧ ಶಿಲೆ ಸಿಕ್ಕರೆ ಕೊಡುವಂತೆ ತಿಳಿಸಿದ್ದರು. ಪತ್ತೆಯಾದ ಕಲ್ಲನ್ನು ಮೂರು ಭಾಗ ಮಾಡಿ ಮತ್ತೊಂದು ಸ್ಥಳದಲ್ಲಿ ಇರಿಸಲಾಯಿತು. ನಂತರ ಸುರೇಂದ್ರ ವಿಶ್ವಕರ್ಮ ಎಂಬವರು ಅದನ್ನು ಇಷ್ಟಪಟ್ಟು, ವೈಜ್ಞಾನಿಕ ಪರೀಕ್ಷೆ ಮಾಡಿಸಿದ ಬಳಿಕ ಮೂರ್ತಿ ನಿರ್ಮಾಣಕ್ಕೆ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟರು.

ಶ್ರೀರಾಮ-ಸೀತಾ ಮಾತೆ ಬಳಿಕ, ಲಕ್ಷ್ಮಣ, ಭರತ, ಶತ್ರುಜ್ಞ ವಿಗ್ರಹಗಳ ಕೆತ್ತನೆಗಳಿಗೂ ಕೃಷ್ಣಶಿಲೆಯನ್ನು ಕಳುಹಿಸಿಕೊಡಲಾಯಿತು. ಇದೆಲ್ಲ ನಮ್ಮ ಪೂರ್ವಜರ ಪುಣ್ಯವೆಂದೇ ನಾವು ಭಾವಿಸುತ್ತೇವೆ ಎಂದು ಶ್ರೀನಿವಾಸ್‌ ನೆನೆದರು.

ಜನವರಿ 22ರಂದು ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ (ಇಂದು) ಬಾಲ ಶ್ರೀರಾಮ ಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು ಆಯ್ಕೆಗೆ ಮೂರು ಮೂರ್ತಿಗಳನ್ನು ಕೆತ್ತಲಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಮೂರ್ತಿಯನ್ನ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಕರ್ನಾಟಕ‌ ಶಿಲ್ಪಿಗಳು, ಓರ್ವ ರಾಜಸ್ಥಾನ ಮೂಲದ ಶಿಲ್ಪಿಯಿಂದ ನಿರ್ಮಾಣಗೊಂಡಿರುವ ಕರ್ನಾಟಕ ಮೂಲದ ಬಾಲರಾಮನ ಮೂರ್ತಿ ಸಹ ಇದೆ. ಈ ಮೂರ್ತಿ ಪ್ರತಿಷ್ಟಾಪನೆಗೆ ಆಯ್ಕೆಯಾಗುವ ಮೂಲಕ ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ನಂಟು ಉಳಿಯುತ್ತಾ? ಎಂಬುದನ್ನು ಕಾದುನೋಡಬೇಕಿದೆ.

andolanait

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

8 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

13 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

14 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

15 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

16 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

21 hours ago