ದೇಶ- ವಿದೇಶ

ವಕ್ಫ್ ವಿವಾದ: ಜಂಟಿ ಸಂಸದೀಯ ಸಮಿತಿಯ ಭೇಟಿಗೆ ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ನಿರ್ಧಾರ

ಹೊಸದಿಲ್ಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್ ಬಿ ) ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಅವರ ಅಧ್ಯಕ್ಷತೆಯಲ್ಲಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳ ವರಿಷ್ಠರು ಹಾಗೂ ಕಾನೂನು ಸಮಿತಿಯ ಸದಸ್ಯರ ಸಭೆಯು ಇತ್ತೀಚೆಗೆ ನಡೆಯಿತು.

ಕೇಂದ್ರ ಸರಕಾರದ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆಯ ಕುರಿತಾಗಿ ಪ್ರತಿಪಕ್ಷ ನಾಯಕರು ಹಾಗೂ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ವರಿಷ್ಠರನ್ನು ಭೇಟಿಯಾಗಲು ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಫಜ್ಲುರ್ ರಹೀಮ್ ಮುಜದ್ದಿದಿ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಅನುಸಾರವಾಗಿ ವಿವಿಧ ರಾಜಕೀಯ ಧುರೀಣರೊಂದಿಗೆ ತುರ್ತು ಸಭೆಗಳನ್ನು ಆಯೋಜಿಸಲಾಗಿತ್ತು. ಈ ವಿಧೇಯಕದಲ್ಲಿನ ಪ್ರಮಾದಭರಿತ, ಕರಾಳ ಹಾಗೂ ಅಪ್ರಜಾಸತ್ಮಾತ್ಮಕ ಅಂಶಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಮುಸ್ಲಿಂ ಸಮುದಾಯದ ಸಂಸದರು ಹಾಗೂ ಇತರ ರಾಜಕೀಯ ವ್ಯಕ್ತಿಗಳಿಗೂ ಈ ಬಗ್ಗೆ ಎಐಎಂಪಿಎಲ್ಬಿ ಯಿಂದ ಪತ್ರಗಳನ್ನು ಬರೆಯಲಾಗಿದೆ.

ಈಗ ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ನೂತನ ವಕ್ಫ್ (ತಿದ್ದುಪಡಿ) ವಿಧೇಯಕವು ಹೊಂದಿದೆ. ವಕ್ಫ್ ಆಸ್ತಿಗಳನ್ನು ಕಸಿದು ಕೊಳ್ಳಲು, ವಕ್ಫ್ ಮಂಡಳಿಗಳನ್ನು ಅಧಿಕಾರವನ್ನು ಕಸಿಯಲು ಹಾಗೂ ವಕ್ಫ್ ಟ್ರಿಬ್ಯೂನಲ್ಗಳು ಹಾಗೂ ಸರ್ವೇಕ್ಷಣಾ ಆಯುಕ್ತರ ಅದಿಕಾರಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಪಟ್ವಾರಿಗಳಿಗೆ ನೀಡಲು ಅದು ಬಯಸುತ್ತಿದೆ. ಹಾಲಿ ವಕ್ಫ್ ಕಾಯ್ದೆಗೆ ಕಳಂಕ ತರುವ ಹಾಗೂ ಅದನ್ನು ಅಪಮೌಲ್ಯಗೊಳಿಸುವಂತಹ ದುರುದ್ದೇಶವನ್ನು ಈ ವಿಧೇಯಕದ ಇತರ ನಿಯಮಗಳು ಹೊಂದಿವೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ)ಯು ಪತ್ರಿಕಾ ಪ್ರಕಟಣೆಯಲ್ಲಿ ಆಪಾದಿಸಿದೆ.

ವಕ್ಫ್ ಕಾಯ್ದೆಯನ್ನು ತಿದ್ದುಪಡಿಗೊಳಿಸಿರುವುದು ಮಾತ್ರವಲ್ಲದೆ ಕೇಂದ್ರ ವಕ್ಫ್ ಕೌನ್ಸಿಲ್ ಹಾಗೂ ವಕ್ಫ್ ಮಂಡಳಿಗೆ ವ್ಯಕ್ತಿಗಳನ್ನು ತಾನಾಗಿಯೇ ನೇಮಿಸುವ ಮೂಲಕ ಅವುಗಳ ಅಧಿಕಾರವನ್ನು ಕೇಂದ್ರ ಸರಕಾರವು ಕಸಿದುಕೊಳ್ಳಲಿದೆ. ಎಐಎಂಪಿಎಲ್ಬಿ ಈ ವಿಧೇಯಕವನ್ನು ಬಲವಾಗಿ ವಿರೋಧಿಸುತ್ತದೆ ಹಾಗೂ ಕೇಂದ್ರ ಸರಕಾರದ ದುಷ್ಟ ಉದ್ದೇಶವು ಈಡೇರುವುದಕ್ಕೆ ಅವಕಾಶ ನೀಡದಂತೆ ಅದು ಎಲ್ಲಾ ಪ್ರತಿಪಕ್ಷಗಳು ಹಾಗೂ ಬಿಜೆಪಿಯ ಮಿತ್ರಪಕ್ಶಗಳಿಗೆ ಕಳಕಳಿಯ ಮನವಿ ಮಾಡಿತ್ತು. ಬಹುತೇಕ ಎಲ್ಲಾ ಪ್ರತಿಪಕ್ಷಗಳು ಈ ವಿಧೇಯಕವನ್ನು ತಿರಸ್ಕರಿಸಿರುವುದು ಶ್ಲಾಘನೀಯವೆಂದು ಅದು ತಿಳಿಸಿದೆ.

ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಧ್ವನಿಯೆತ್ತಿದ ಪ್ರತಿಯೊಬ್ಬ ಸಂಸದರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯು ತಿಳಿಸಿದೆ.

ಆದರೆ ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸದೆ, ಈ ವಿವಾದಾತ್ಮಕ ವಿಧೇಯಕವನ್ನು ಹಿಂದೆಗೆದುಕೊಳ್ಳುವಂತೆ ಮಾಡಲು ಜಂಟಿ ಸಂಸದೀಯ ಸಮಿತಿ ಸಭೆಗಳಲ್ಲಿ ಪ್ರತಿಪಕ್ಷಗಳು ಹಾಗೂ ಅವುಗಳ ಮಿತ್ರಪಕ್ಷಗಳು ಗರಿಷ್ಠ ಪ್ರಯತ್ನಗಳನ್ನು ಮಾಡಬೇಕಾಗಿದೆ. ಮಂಡಳಿಯು ಮುಸ್ಲಿಂ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರುವಂತಹ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತುವಂತೆ ಕೆಲವು ರಾಜಕೀಯ ನಾಯಕರನ್ನು ಕೋರಿತ್ತು. ಅದರಂತೆ ಅವರು ಸಂಸತ್ನಲ್ಲಿ ವಿಧೇಯಕದ ಕುರಿತು ತಾನು ವ್ಯಕ್ತಪಡಿಸಿರುವ ಕಳವಳಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆಂದು ಎಐಎಂಪಿಎಲ್ಬಿ ಹೇಳಿಕೆ ತಿಳಿಸಿದೆ.

ತತ್ಕಾಲಕ್ಕೆ ವಕ್ಫ್ ತಿದ್ದುಪಡಿ ಕಾಯ್ದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳದಿರುವುದಕ್ಕಾಗಿ ಹಾಗೂ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಿರುವುದಕ್ಕೆ ಎಏಎಂಪಿಎಲ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಂಟಿ ಸಂಸದೀಯ ಸಮಿತಿಯ ಸದಸ್ಯರನ್ನು ಮಂಡಳಿಯು ಭೇಟಿಯಾಗಲಿದ್ದು, ಮುಸ್ಲಿಮ್ ಸಮುದಾಯದ ಅಭಿಪ್ರಾಯಗಳನ್ನು ವಿವರಿಸಲಿದೆ. ತಮ್ಮ ಪ್ರದೇಶಗಳ ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಹಾಗೂ ದುರ್ಬಳಕೆಯಿಂದ ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಮುಸ್ಲಿಮರಿಗೆ ಮಂಡಳಿಯು ಮನವಿ ಮಾಡಿದೆ. ತಮ್ಮ ಪೂರ್ವಿಕರ ಪರಂಪೆಯನ್ನು ಅವರು ಸಂರಕ್ಷಿಸಬೇಕು ಹಾಗೂ ವಕ್ಫ್ ಅಧಿಕಾರದ ಕಬಳಿಕೆಗೆ ಅವಕಾಶ ನೀಡಕೂಡದು. ವಕ್ಫ್ ವಿವಾದದ ಬಗ್ಗೆ ಮಸೀದಿಗಳ ಇಮಾಮ್ಗಳು ಮುಸ್ಲಿಮರಲ್ಲಿ ಅರಿವು ಮೂಡಿಸಬೇಕು ಹಾಗೂ ಪ್ರಾರ್ಥನೆಗಳನ್ನು ಏರ್ಪಡಿಸಬೇಕೆಂದು ಎಐಎಂಪಿಎಲ್ಬಿಯ ಕಾರ್ಯಾಲಯ ಕಾರ್ಯದರ್ಶಿ ಡಾ.ಎಂ. ವಖಾರ್ ಉದ್ದೀನ್ ಲತೀಫಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಕಾಕ್ರೋಚ್‌ ಪ್ರತಿಭಟನೆ ; ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್‌ ವ್ಯಾನ್‌ ತಡೆದ ಜೇನ್‌-ಝಿ ಕಿಡ್‌

ಮುಂಬೈ : ನೀಟ್‌ ಅಕ್ರಮ ವಿರೋಧಿಸಿ ದೇಶಾದ್ಯಂತ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯು ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.…

38 mins ago

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

13 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

13 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

13 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

14 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

14 hours ago