ಕಠ್ಮಂಡು : ನೇಪಾಳದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ 6.6 ತೀವ್ರತೆಯ ಭೂಕಂಪದಿಂದಾಗಿ 6 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ನೇಪಾಳದ ದೋತಿ ಜಿಲ್ಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸಿದ್ದು, ಹಲವು ಮನೆ ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪದಿಂದಾಗಿ ಕುಸಿದ ಕಟ್ಟಡಗಳಲ್ಲಿ ಸಿಲುಕಿದ್ದವರ ಪೈಕಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ರಕ್ಷಣಾ ಮತ್ತು ಪರಿಹಾರ ಕಾರ್ಯಚರಣೆ ಮುಂದುವರಿದಿದೆ ಎಂದು ನೇಪಾಳದ ಗೃಹ ಸಚಿವಾಲಯದ ಅಧಿಕಾರಿ ತುಳಸಿ ರಿಜಾಲ್ ತಿಳಿಸಿದ್ದಾರೆ. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಎರಡು ಭೀಕರ ಭೂಕಂಪದಲ್ಲಿ ಸುಮಾರು 9000 ಜನರು ಮೃತಪಟ್ಟಿದ್ದರು.
ಬೆಂಗಳೂರು: ಪರಿಸರವಾದಿಗಳ ವಿರೋಧದ ಬೆನ್ನಲ್ಲೇ ಲಾಲ್ಬಾಗ್ ಮೂಲಕ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು…
ಕೆ.ಆರ್.ನಗರ: ಇಲ್ಲಿನ ಚುಂಚನಕಟ್ಟೆ ಸಮೀಪದ ಮಾಳನಾಯಕನಹಳ್ಳಿ ಬಳಿ ಚಾಮರಾಜ ಎಡದಂಡೆಯ ಕಿರು ನಾಲೆಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸೆರೆಹಿಡಿಯಲಾಗಿದೆ. ಮೊಸಳೆಯನ್ನು ಗಮನಿಸಿದ…
ಸಂವಿಧಾನ ದಿನಾಚರಣೆ ಹೆಸರಲ್ಲಿ ಮೇಲಾಟಕ್ಕೆ ಪ್ರಗತಿಪರ ಚಿಂತಕರು, ಸಂಸ್ಕೃತಿ ಚಿಂತಕರು, ರೈತರು, ಕಾರ್ಮಿಕರ ಬೇಸರ ನವೆಂಬರ್ ೨೬ರಂದು ಮೈಸೂರಿನಲ್ಲಿ ಸಂವಿಧಾನ…
ನವದೆಹಲಿ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಾಲಯ, ಎರಡು…
ಬ್ರೇಕ್ ಬೀಳಬೇಕು ಅತಿಯಾಸೆಗೆ! ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಇನ್ನೆಲ್ಲಿಗೆ ಹೋಗಬೇಕೆಂಬುದು ತಿಳಿಯದೆ ವಿಲವಿಲ ಒzಡಿತು ಕಾಡಾನೆ ಪಡೆ!ಹೊಸದೇನಲ್ಲ ಮಾನವ-ವನ್ಯಜೀವಿಗಳ ಸಂಘರ್ಷ! ಬೆಳೆದಂತೆಲ್ಲ…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ…