ದೇಶ- ವಿದೇಶ

ಮಂಗಳೂರು ಬಂದರಿಗೆ ಬಂದ ಎಲ್‌ಪಿಜಿ ಹೊತ್ತ ಎರಡು ಹಡಗು

ಮಂಗಳೂರು : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಹಾಗೂ ಅಮೆರಿಕದಿಂದ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ತಂದಿರುವ ಹಡಗು ನವಮಂಗಳೂರು ಬಂದರಿಗೆ ಆಗಮಿಸಿವೆ.

ರಷ್ಯಾದ ಪ್ರಿಮೊರ್ಸ್ಕ್ ಎಂಬಲ್ಲಿಂದ ಉರಾಲ್ ಕಚ್ಚಾ ತೈಲ ತುಂಬಿಕೊಂಡು ಬಂದಿರುವ ’ಅಕ್ವಾ ಟೈಟನ್’ ಎಂಬ ಹಡಗು ಚೀನಾದ ರಿಝಾವೊ ಬಂದರಿನತ್ತ ಹೊರಟಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ದಿಕ್ಕು ಬದಲಿಸಿ ಮಂಗಳೂರಿಗೆ ಶನಿವಾರ ತಡರಾತ್ರಿ ಬಂದಿದೆ. ಈ ಕಚ್ಚಾತೈಲವನ್ನು ಎಂಆರ್‌ಪಿಎಲ್ ಸಂಸ್ಕರಣಾ ಘಟಕಕ್ಕೆ ಪೂರೈಸಲಾಗುತ್ತಿದ್ದು, ಹಡಗಿನಿಂದ ತೈಲ ಇಳಿಸುವ ಪ್ರಕ್ರಿಯೆ ನಡೆದಿದೆ.

ಈ ಕುರಿತು ನವಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಶನಿವಾರ ತಡರಾತ್ರಿ ಬಂದರಿಗೆ ಸುರಕ್ಷಿತವಾಗಿ ತಲುಪಿದೆ ಎಂದು ದೃಢಪಡಿಸಿದ್ದಾರೆ.

ಅಮೆರಿಕದಿಂದ ಬಂತು ಎಲ್‌ಪಿಜಿ
ಅಮೆರಿಕದಿಂದ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ನವಮಂಗಳೂರು ಬಂದರಿಗೆ ಭಾನುವಾರ ಬೆಳಿಗ್ಗೆ ಆಗಮಿಸಿದೆ. ಅಮೆರಿಕದ ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಎಂಬಲ್ಲಿಂದ ಹೊರಟ ’ಪಿಕ್ಸಿಸ್ ಪಯೊನಿಯರ್’ ಎಂಬ ಕಾರ್ಗೋ ನೌಕೆ ಇದಾಗಿದೆ. ಇದು ಅನಿಲ ಸರಬರಾಜಿಗೆ ಮಹತ್ವದ ನೆರವಾಗಲಿದೆ.

ನೌಕೆಯಲ್ಲಿ ಒಟ್ಟು ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮಂಗಳೂರಿನ ಎಜಿಸ್ ಅನಿಲ ಸಂಗ್ರಹಣಾ ಘಟಕಕ್ಕೆ ಪೂರೈಸಲಾಗುತ್ತಿದೆ. ಅನಿಲ ಇಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ‘ಶಿವಾಲಿಕ್’ ಹಾಗೂ ‘ನಂದಾದೇವಿ’ ಎಂಬ ಹಡಗುಗಳು ಈ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತದತ್ತ ಪ್ರಯಾಣ ಬೆಳೆಸಿದ್ದವು. ಕೆಲ ದಿನಗಳ ಹಿಂದೆ ಸುರಕ್ಷಿತವಾಗಿ ಗುಜರಾತ್ ತಲುಪಿತ್ತು. ಇನ್ನೂ ಅನೇಕ ಭಾರತೀಯ ಹಡಗುಗಳು ಹಾರ್ಮುಜ್‌ನಲ್ಲಿಯೇ ಸಿಲುಕಿಕೊಂಡಿವೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

1 hour ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

2 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

2 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

2 hours ago