ದೇಶ- ವಿದೇಶ

ತಮಿಳುನಾಡು ನೂತನ ಸಿಎಂ ವಿಜಯ್‌ ಮುಂದಿವೆ ಬೆಟ್ಟದಂತಹ ಸವಾಲುಗಳು! ಮೆಟ್ಟಿ ನಿಲ್ಲುತ್ತಾರಾ ದಳಪತಿ?

ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 60 ವರ್ಷಗಳ ದ್ರಾವಿಡ ಯುಗಕ್ಕೆ ತೆರೆ ಎಳೆದು, ಮೊದಲ ಬಾರಿಗೆ ಸಿನಿತಾರೆ-ರಾಜಕಾರಣಿ ಸಿ.ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

108 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬಹುಮತಕ್ಕೆ 10 ಸ್ಥಾನ ಕಡಿಮೆ ಇದ್ದರೂ, ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಎಂ, ಐಯುಎಂಎಲ್ ಬೆಂಬಲದೊಂದಿಗೆ 120ರ ಬಲ ಪಡೆದು ಸರ್ಕಾರ ರಚಿಸಿದೆ. ಆದರೆ ವಿಜಯ್‌ ಸರ್ಕಾರದ ಮುಂದೆ ಬೆಟ್ಟದಂತಹ ಸವಾಲುಗಳಿವೆ. ಇವುಗಳನ್ನು ದಳಪತಿ ವಿಜಯ್ ಮೆಟ್ಟಿ ನಿಲ್ಲುತಾರಾ‌ ಎಂಬ ಪ್ರಶ್ನೆಗಳಿವೆ.

1.ಬಹುಮತದ ಅಂಚಿನ ಸರ್ಕಾರ : ಪ್ರತಿ ಮತವೂ ಮುಖ್ಯ
234 ಸದಸ್ಯ ಬಲದ ಸದನದಲ್ಲಿ ಬಹುಮತಕ್ಕೆ 118 ಬೇಕು. ಟಿವಿಕೆ-ಮಿತ್ರಪಕ್ಷಗಳ ಒಟ್ಟು ಬಲ 120. ವಿಜಯ್ 2 ಕ್ಷೇತ್ರದಲ್ಲಿ ಗೆದ್ದು 1 ಸ್ಥಾನ ತೆರವು ಮಾಡಿರುವುದರಿಂದ ಪರಿಣಾಮಕಾರಿ ಬಲ 107. ಸ್ಪೀಕರ್ ಮತ ಚಲಾಯಿಸದ ಸಂಪ್ರದಾಯದಿಂದ ಮತ್ತೊಂದು ಇಳಿಕೆ. ಅಂದರೆ ನಿಜವಾದ ‘ವರ್ಕಿಂಗ್ ಮೇಜಾರಿಟಿ’ ಕೇವಲ 2-3 ಮತಗಳು. ಒಬ್ಬ ಶಾಸಕ ಅತ್ತ-ಇತ್ತ ಆಡಿದರೂ ಸರ್ಕಾರ ಉರುಳುವ ಭೀತಿ.

2. ಆಡಳಿತ ಅನುಭವ ಶೂನ್ಯ
ಟಿವಿಕೆಯ 108 ಶಾಸಕರಲ್ಲಿ 90% ಮೊದಲ ಬಾರಿಗೆ ಗೆದ್ದವರೇ. ವಿಜಯ್ ಅವರಿಗೂ ಆಡಳಿತ ಅನುಭವ ಇಲ್ಲ. ಬ್ಯೂರೋಕ್ರಸಿ, ಹಣಕಾಸು ನಿರ್ವಹಣೆ, ಬಿಕ್ಕಟ್ಟು ನಿಭಾಯಿಸುವುದು ಬೇರೆ ಸವಾಲು.

3. ಮಿತ್ರಪಕ್ಷಗಳ ಒತ್ತಡ : ಕಾಂಗ್ರೆಸ್‌ಗೆ 2 ಸಚಿವ ಸ್ಥಾನ, 1 ರಾಜ್ಯಸಭೆ
ಕಾಂಗ್ರೆಸ್ 5 ಶಾಸಕರ ಬೆಂಬಲಕ್ಕೆ 2 ಸಚಿವ ಸ್ಥಾನ, 1 ರಾಜ್ಯಸಭೆ ಸ್ಥಾನ ಕೇಳಿದೆ. ವಿಸಿಕೆ, ಎಡಪಕ್ಷಗಳು ಹೊರಗಿನಿಂದ ಬೆಂಬಲ ನೀಡಿ ಒಳಗೆ ಬರುವುದಿಲ್ಲ. ಪ್ರತಿಯೊಂದು ಖಾತೆ ಹಂಚಿಕೆ, ನಿರ್ಧಾರದಲ್ಲೂ ಮೈತ್ರಿ ಪಕ್ಷಗಳ ಜೊತೆ ಸಂಘರ್ಷ ಸಾಧ್ಯತೆ.

4. ಆಡಳಿತಾತ್ಮಕ ಅನುಭವ ಮತ್ತು ಅಧಿಕಾರಿಗಳ ವಿಶ್ವಾಸ
ವಿಜಯ್ ಅವರು ಚಿತ್ರರಂಗದಿಂದ ನೇರವಾಗಿ ರಾಜಕೀಯದ ಉನ್ನತ ಸ್ಥಾನಕ್ಕೆ ಬಂದಿದ್ದಾರೆ. ಆರಂಭದಿಂದ, ರಾಜಕೀಯದ ಅನುಭವ ಇಲ್ಲದ ಕಾರಣ, ಅವರಿಗೆ ಶಾಸನಸಭೆಯ ಅಥವಾ ಆಡಳಿತಾತ್ಮಕ ವ್ಯವಸ್ಥೆಯ ಪೂರ್ವಾಪರ ಅನುಭವವಿಲ್ಲ. ಹೀಗಾಗಿ ಹಿರಿಯ ಶಾಸಕರನ್ನು ಮ್ಯಾನೇಜ್ ಮಾಡುವುದು, ಆಡಳಿತದಲ್ಲಿ ಬರುವಂತಹ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು, ಜನರ ಜೊತೆಗೆ ಅಧಿಕಾರಿಗಳ ವಿಶ್ವಾಸ ಗಳಿಸಿಕೊಂಡು ಆಡಳಿತ ನಡೆಸಿಕೊಂಡು ಹೋಗುವುದು ಸವಾಲಾಗಿದೆ. ಅಲ್ಲದೆ ಭ್ರಷ್ಟಾಚಾರ ಮುಕ್ತ ಆಡಳಿತ ಭರವಸೆ ಕೊಟ್ಟಿರುವ ವಿಜಯ್, ಹಳೆಯ ಕೊಳಕು ಲಂಚ ಪದ್ಧತಿಯನ್ನು ಸಂಪೂರ್ಣ ಗುಡಿಸಿ ಸ್ವಚ್ಛಗೊಳಿಸುವುದು ಸವಾಲಾಗಿದೆ.

5. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಬಲ ವಿರೋಧ ಪಕ್ಷಗಳ ಎದುರಾಳಿ
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಕಳೆದ 59 ದಶಕಗಳಿಂದ ಬೇರೂರಿವೆ. ಈ ಪಕ್ಷಗಳ ಕಾರ್ಯಕರ್ತರ ಪಡೆ ಮತ್ತು ಅನುಭವಿ ನಾಯಕರು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ.

6. ಮಾದಕ ದ್ರವ್ಯ ಮುಕ್ತ ರಾಜ್ಯ ಮತ್ತು ಕಾನೂನು ಸುವ್ಯವಸ್ಥೆ
ವಿಜಯ್ ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಮಾಡಿದ ಮೊದಲ ಭಾಷಣದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪವಿದೆ. ಆದರೆ ಆನ್‌ಲೈನ್ ಮಾಧ್ಯಮಗಳಲ್ಲೂ ಹಬ್ಬಿರುವ ಡ್ರಗ್ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯುವುದು ಅಷ್ಟು ಸುಲಭವಲ್ಲ. ಇದು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಹಿಡಿತವನ್ನು ಬಯಸುತ್ತದೆ. ರಾಜಕೀಯ ಹಸ್ತಕ್ಷೇಪವಿಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ವಿಜಯ್ ಮುಂದಿರುವ ಸವಾಲಾಗಿದೆ.

ಆಂದೋಲನ ಡೆಸ್ಕ್

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

3 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

3 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

14 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

14 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

14 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

14 hours ago