ದೇಶ- ವಿದೇಶ

ತಮಿಳುನಾಡು ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

ಚನ್ನೈ: ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ, ಬಿಜೆಪಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ ಮೂರು ಉಚಿತ ಎಲ್‍ಪಿಜಿ ಸಿಲಿಂಡರ್‌ಗಳು ಮತ್ತು ಹೆಚ್ಚುತ್ತಿರುವ ತೆರಿಗೆಗಳು ಮತ್ತು ಜೀವನ ವೆಚ್ಚಗಳನ್ನು ಸರಿದೂಗಿಸಲು ಪ್ರತಿ ಮನೆಗೆ 10,000 ರೂ.ಗಳನ್ನು ಒಮ್ಮೆ ಪಾವತಿಸುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಚೆನ್ನೈನಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರಿಗೆ ಇ-ಸ್ಕೂಟರ್ ಖರೀದಿಸಲು 25,000 ರೂ. ಸಬ್ಸಿಡಿ, ಜಲ್ಲಿಕಟ್ಟು ಹೋರಿಗಳನ್ನು ಸಾಕುವ ವ್ಯಕ್ತಿಗಳಿಗೆ ಮಾಸಿಕ 2,000 ರೂ. ಬೆಂಬಲ ಮತ್ತು ಭಾಗವಹಿಸುವವರು ಸಾವನ್ನಪ್ಪಿದರೆ 10 ಲಕ್ಷ ರೂ. ಪರಿಹಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಮೊದಲ ಬಾರಿಗೆ ಮನೆ ಖರೀದಿಸುವ ಮಹಿಳೆಯರಿಗೆ ಶೇ.3ರಷ್ಟು ಸ್ಟಾಂಪ್ ಡ್ಯೂಟಿ ರಿಯಾಯಿತಿ, ರೂ. 10,000 ಗಳ ಒಂದು ಬಾರಿ ಗೃಹ ಸಹಾಯ ಯೋಜನೆ ಮತ್ತು ಗೃಹೋಪಯೋಗಿ ವಸ್ತುಗಳಿಗೆ ರೂ. 8,000 ಕೂಪನ್‍ಗಳನ್ನು ಒಳಗೊಂಡ ನಿರಂತರ ಬೆಂಬಲ ಕ್ರಮಗಳನ್ನು ಪಕ್ಷ ಘೋಷಿಸಿದೆ.

ಶೂನ್ಯ ಎಫ್‍ಐಆರ್ ವರದಿ ಮಾಡುವ ವ್ಯವಸ್ಥೆ,ಘೋರ ಅಪರಾಧಗಳಿಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ, ಬಸ್ಸುಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬ್ಲೈಂಡ್ ಸ್ಪಾಟ್‍ಗಳನ್ನು ತೆಗೆದುಹಾಕಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ, ಇ-ಸ್ಕೂಟರ್ ಖರೀದಿಸಲು ಅರ್ಹ ಮಹಿಳೆಯರಿಗೆ 25,000 ರೂ. ಬೆಂಬಲ, ಸ್ವಸಹಾಯ ಗುಂಪುಗಳು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ,ರೈತರಿಗೆ ಹೆಚ್ಚುವರಿ 3,000 ರೂ. (ಕೇಂದ್ರ ಯೋಜನೆ ಸೇರಿದಂತೆ ಒಟ್ಟು 9,000 ರೂ.) ಜಲ್ಲಿಕಟ್ಟು ಹೋರಿ ಸಾಕುವವರಿಗೆ ಮಾಸಿಕ 2,000 ರೂ. ಆರ್ಥಿಕ ನೆರವು,ಜಲ್ಲಿಕಟ್ಟು ಕಾರ್ಯಕ್ರಮಗಳ ಸಮಯದಲ್ಲಿ ಭಾಗವಹಿಸುವವರು ಸಾವನ್ನಪ್ಪಿದರೆ 10 ಲಕ್ಷ ರೂ. ಪರಿಹಾರ, ಮನೆ ಖರೀದಿಸುವ ಮಹಿಳೆಯರಿಗೆ ಶೇ 3 ರಷ್ಟು ಮುದ್ರಾಂಕ ಶುಲ್ಕ ರಿಯಾಯಿತಿ. ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ದಾಳಿ ನಡೆಸಿ, ತಮಿಳು ಹೊಸ ವರ್ಷದಂದು ಪ್ರಣಾಳಿಕೆಯನ್ನು ಅನಾವರಣಗೊಳಿಸುವುದು “ಶುಭ” ಎಂದು ಬಣ್ಣಿಸಿದರು.ತಮಿಳುನಾಡನ್ನು “ವಿಶ್ವದ ಅತ್ಯಂತ ಹಳೆಯ ನಾಗರಿಕತೆಯ ತೊಟ್ಟಿಲು” ಎಂದು ಪರಿಗಣಿಸಲಾಗಿದೆ. ತಿರುವಳ್ಳುವರ್ ಮತ್ತು ಸುಬ್ರಮಣ್ಯ ಭಾರತಿಯಂತಹ ಶ್ರೇಷ್ಠ ವ್ಯಕ್ತಿಗಳನ್ನು ಉಲ್ಲೇಖಿಸಿ ಅದರ ಶ್ರೀಮಂತ ಸಾಂಸ್ಕøತಿಕ ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಜೆ.ಪಿ.ನಡ್ಡಾ ಚೆನ್ನೈನಲ್ಲಿ ಬಿಡುಗಡೆ ಮಾಡಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಬಿಜೆಪಿ ನಾಯಕರಾದ ಕೆ.ಅಣ್ಣಾಮಲೈ ಮತ್ತು ತಮಿಳಿಸೈ ಸೌಂದರರಾಜನ್ ಸೇರಿದಂತೆ ಪಕ್ಷದ ಇತರ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ.4ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು 5.67 ಕೋಟಿ ನೋಂದಾಯಿತ ಮತದಾರರಿದ್ದಾರೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮತ್ತು 2 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.ಈ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಪಕ್ಷಗಳಲ್ಲಿ ಡಿಎಂಕೆ, ಎಐಎಡಿಎಂಕೆ, ಬಿಜೆಪಿ, ವಿಜಯ್ ಅವರ ತಮಿಳುನಾಡು ಕೊಂಗು (ಟಿವಿಕೆ), ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿವೆ.

ಆಂದೋಲನ ಡೆಸ್ಕ್

Recent Posts

ಮಂಡ್ಯ | ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಬಂದಿದ್ದ ಕೈದಿ ಜನರ ಕೈಗೆ ಸಿಕ್ಕಿಬಿದ್ದ

ಮಂಡ್ಯ : ಕೈಯ್ಯಲ್ಲಿ ಬೇಡಿ ಹಾಕಿ ಕೊಂಡಿರುವಾಗಲೇ ಠಾಣೆಯಿಂದ ತಪ್ಪಿಸಿಕೊಂಡು ಬಂದ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಇಲ್ಲಿನ…

5 hours ago

ದಸರಾ ಗಜಪಡೆ ವೀಕ್ಷಣೆ ಟಿಕೆಟ್‌ ರದ್ದು

ಮೈಸೂರು: ಮೊನ್ನೆಯಷ್ಟೇ ಲಿಂಗಾಂಬುಧಿ ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅರಮನೆ ಅಂಗಳದಲ್ಲಿ…

5 hours ago

ನೇಪಾಳ ದುರಂತ | ಮೃತದೇಹದ ಮೇಲಿದ್ದ ಚಿನ್ನ ಕಳವು ; ಇಬ್ಬರು ಆರೋಪಿಗಳ ಬಂಧನ

ಎಚ್ಚೆತ್ತ ಪೊಲೀಸ್ ಆಡಳಿತ ; ಇಬ್ಬರು ಆರೋಪಿಗಳ ಬಂಧನ ಕಠ್ಮಂಡು : ನೇಪಾಳದಲ್ಲಿ ಸಂಭವಿಸಿರುವ ಭೀಕರ ಮಹಾಪೂರ ಹಾಗೂ ಭೂಕುಸಿತದಿಂದಾಗಿ…

6 hours ago

ಸೋನಿಯಾ ಗಾಂಧಿ ಆತ್ಮಚರಿತ್ರೆ ; ರಾಜಕೀಯ, ಸಾಹಿತ್ಯಿಕ ವಲಯದಲ್ಲಿ ಕೋಲಾಹಲ

ಹೊಸದಿಲ್ಲಿ : ಯುಪಿಎ ಒಕ್ಕೂಟದ ಹಿರಿಯ ನಾಯಕಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ…

6 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಈ ಬಾರಿ ಮೆರವಣಿಗೆಗೆ ಸೇನೆಗೆ ಆಹ್ವಾನ ಎಂದ ಸಿಎಂ ಡಿಕೆಶಿ

ಮೈಸೂರು: ಈ ಬಾರಿಯ ಮೈಸೂರು ದಸರಾ ಮೆರವಣಿಗೆಗೆ ಸೇನೆ ಹಾಗೂ ವಾಯುಸೇನೆಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌…

11 hours ago

ಮೈಕ್ರೋ ಫೈನಾನ್ಸ್‌ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…

14 hours ago