ಉತ್ತರ ಪ್ರದೇಶ: ಫೆಬ್ರವರಿ.10ರಂದು ಎರಡೂವರೆ ಗಂಟೆಗಳ ಕಾಲ ಪ್ರವಾಸಿಗರಿಗೆ ತಾಜ್‌ಮಹಲ್ ಪ್ರವೇಶ ನಿಷೇಧಿಸಲಾಗಿದೆ.
ಭಾರತೀಯ ಪುರಾತತ್ವ ಸಮೀಕ್ಷೆ ಪ್ರಕಾರ ಸೀಶೆಲ್ಸ್ ದೇಶದ ಅಧ್ಯಕ್ಷ ಡಾ.ಪ್ಯಾಟ್ರಿಕ್ ಹರ್ಮಿನಿ ಅವರು ಪತ್ನಿ ವೆರೋನಿಕ್ ಹರ್ಮಿನಿ ಅವರೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡುತ್ತಿದ್ದಾರೆ.
ಹಾಗಾಗಿ ಆ ದಿನ ಬೆಳಿಗ್ಗೆ 9ರಿಂದ 11.30ರವರೆಗೆ ಸಾಮಾನ್ಯ ಪ್ರವಾಸಿಗರಿಗೆ ತಾಜ್‌ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಂಗಳವಾರ ಹಾಗೂ ಬುಧವಾರ ಆಗ್ರಾ ಅಂತರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ರಾಜಮನೆತನದ ಆತಿಥ್ಯಕ್ಕೆ ಕೇಂದ್ರವಾಗಲಿದೆ.
ನಾಳೆ ಹಾಗೂ ನಾಡಿದ್ದು, ಆಗ್ರಾಕ್ಕೆ ವಿವಿಐಪಿಗಳು ಆಗಮಿಸುತ್ತಿದ್ದಾರೆ. ಅತಿಥಿಗಳಿಗೆ ಭದ್ರತೆ, ಸಾರಿಗೆ ಮತ್ತು ಸ್ವಾಗತ ವ್ಯವಸ್ಥೆಗಳ ಕುರಿತು ಚರ್ಚಿಸಲು ಸಂಬಂಧಿತ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ.
ವಿವಿಐಪಿ ಭೇಟಿಯ ಸಮಯದಲ್ಲಿ ಭದ್ರತಾ ಕಾರಣಗಳಿಂದಾಗಿ ತಾಜ್‌ಮಹಲ್‌ಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…
ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…
ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…
ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…
ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್ ಅವರ ವಾರದ ಅಂಕಣ ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ…
ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…