ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಈಗ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ. ಬಾಕ್ಸ್ ಆಫೀಸ್ ಕಿಂಗ್ ಈಗ ಮತಪೆಟ್ಟಿಗೆಯ ಕಿಂಗ್ ಆಗ್ತಾರಾ? ಉತ್ತರಕ್ಕೆ ಮೇ 4ರವರೆಗೆ ಕಾಯಲೇಬೇಕು.
ಡಿಎಂಕೆ vs ಎಐಎಡಿಎಂಕೆ ಫೈಟ್‌ಗೆ ಬ್ರೇಕ್?
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಡಿಎಂಕೆ-ಎಐಎಡಿಎಂಕೆ ನೇರಾನೇರ ಕಾಳಗದ ಸೂತ್ರವನ್ನೇ ಟಿವಿಕೆ ಮುರಿಯುವ ಲಕ್ಷಣ ಕಾಣುತ್ತಿದೆ. ಹಲವು ಚುನಾವಣಾ ಸಮೀಕ್ಷೆಗಳು ವಿಜಯ್ ‘ಕಿಂಗ್ ಮೇಕರ್’ ಆಗುವುದಷ್ಟೇ ಅಲ್ಲ, ‘ಕಿಂಗ್’ ಆಗುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ.
ಆಕ್ಸಿಸ್ ಮೈ ಇಂಡಿಯಾ ಶಾಕಿಂಗ್ ವರದಿ
ಮತಗಟ್ಟೆ ಸಮೀಕ್ಷೆಯಲ್ಲಿ ನಂಬಿಕೆ ಗಳಿಸಿರುವ ಆಕ್ಸಿಸ್ ಮೈ ಇಂಡಿಯಾ ವರದಿ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ. ಟಿವಿಕೆ ಪಕ್ಷ 98ರಿಂದ 120 ಸ್ಥಾನ ಗೆದ್ದು, ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯನ್ನು ಮೂರನೇ ಸ್ಥಾನಕ್ಕೆ ತಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 118 ಸ್ಥಾನ ಬೇಕು. ಒಂದು ವೇಳೆ ಸಮೀಕ್ಷೆ ನಿಜವಾದರೆ, ಮೊದಲ ಪ್ರಯತ್ನದಲ್ಲೇ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಿಜಯ್ ಮುಖ್ಯಮಂತ್ರಿ ಗಾದಿಗೆ ಲಗ್ಗೆ ಇಡಬಹುದು.
ಯುವ-ಮಹಿಳಾ ವೋಟ್‌ಬ್ಯಾಂಕ್ ವಿಜಯ್ ಕಡೆಗೆ
18ರಿಂದ 39 ವರ್ಷದ ಯುವ ಮತದಾರರಲ್ಲಿ ಶೇ.38ರಷ್ಟು ಮಂದಿ ಟಿವಿಕೆ ಪರ ಒಲವು ತೋರಿದ್ದಾರೆ ಎಂದು ಸಮೀಕ್ಷೆಗಳು ಬೊಟ್ಟು ಮಾಡಿವೆ. ಮಹಿಳಾ ಮತದಾರರ ದೊಡ್ಡ ವರ್ಗವೂ ವಿಜಯ್ ಕಡೆಗೆ ವಾಲಿದೆ. ಇದು ಡಿಎಂಕೆ-ಎಐಎಡಿಎಂಕೆ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ನೇರ ಹೊಡೆತ ಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಅತಂತ್ರವಾದರೆ ವಿಜಯ್ ಕೈಯಲ್ಲಿ ಕೀಲಿಕೈ
ಟಿವಿಕೆ ಮೊದಲ ಬಾರಿ ಕಣದಲ್ಲಿರುವುದರಿಂದ ಯಾರ ಮತ ಸೆಳೆದಿದೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಡಿಎಂಕೆ-ಎಐಎಡಿಎಂಕೆ ಮೈತ್ರಿಕೂಟದ ಮತಗಳಿಗೆ ಕತ್ತರಿ ಬೀಳುವುದು ಖಚಿತ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, 100ರ ಆಸುಪಾಸು ಶಾಸಕರೊಂದಿಗೆ ವಿಜಯ್ ‘ಕಿಂಗ್ ಮೇಕರ್’ ಆಗಿ ಯಾರಿಗೆ ಪಟ್ಟ ಕಟ್ಟಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಸದ್ಯಕ್ಕೆ ಎಲ್ಲರ ಚಿತ್ತ ಮೇ 4ರ ಫಲಿತಾಂಶದ ಮೇಲೆ ನೆಟ್ಟಿದೆ. ದಳಪತಿಯ ರಾಜಕೀಯ ಎಂಟ್ರಿ ತಮಿಳುನಾಡಿನ ದ್ರಾವಿಡ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತಾ? ಕಾದು ನೋಡಬೇಕಿದೆ.
ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…
ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…
ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…