ನವದೆಹಲಿ: ಜಗತ್ತಿನ ಅತೀ ದೊಡ್ಡ ವಿಮಾನ A380 ಶೀಘ್ರದಲ್ಲೇ ನಮ್ಮ ಬೆಂಗಳೂರಿಗೆ ಬರಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಈ ದೈತ್ಯ ವಿಮಾನವನ್ನು ಸ್ವೀಕರಿಸಲು ಸಿದ್ಧವಾಗಿದೆ.
ಹಲವಾರು ವರ್ಷಗಳ ನಂತರ ಎಮಿರೇಟ್ಸ್ ಏರ್‌ಲೈನ್ಸ್ ಅಕ್ಟೋಬರ್ 30 ರಿಂದ ಜಂಬೋ ಜೆಟ್ ಅನ್ನು ಜನನಿಬಿಡ ಬೆಂಗಳೂರು-ದುಬೈ ಮಾರ್ಗದಲ್ಲಿ ನಿಯೋಜಿಸಲಿದೆ. A380 ಕೋಡ್ ಎಫ್ ವಿಮಾನವಾಗಿದೆ. ಕೋಡ್ ಎಫ್ ಎಂದರೆ ವಿಮಾನದ ವಿಂಗ್ ಸ್ಪಾನ್ 65 ಮೀಟರ್ ಗಳಿಂದ ಹೆಚ್ಚು ಆದರೆ 80 ಮೀಟರ್ ಗಳಿಗಿಂತ ಕಡಿಮೆ ಇದೆ. A380ನ ವಿಂಗ್ ಸ್ಪಾನ್ 79.8 ಮೀಟರ್ ಇದೆ. ಕೋಡ್ ಎಫ್ ಅಡಿಯಲ್ಲಿರುವ ಏಕೈಕ ಪ್ಯಾಸೆಂಜರ್ ವಿಮಾನ ಬೋಯಿಂಗ್ 747. ಎ380 ವಿಶಾಲವಾದ ಡಬಲ್ ಡೆಕರ್ ವಿಮಾನವಾಗಿದ್ದು 500ಕ್ಕಿಂತ ಹೆಚ್ಚು ಜನರಿಗೆ ಪ್ರಯಾಣಿಸುವ ಆಸನ ವ್ಯವಸ್ಥೆ ಇದೆ.
ದೆಹಲಿ ಮತ್ತು ಮುಂಬೈ ನಂತರ ಅತೀ ದೊಡ್ಡ ವಿಮಾನ ಬಂದಿಳಿಯುವ ಮೂರನೇ ವಿಮಾನ ನಿಲ್ದಾಣವಾಗಿದೆ ಬೆಂಗಳೂರು ವಿಮಾನ ನಿಲ್ದಾಣ. ದಿನ ನಿತ್ಯ ಸೇವೆಗಾಗಿ ಎಮಿರೇಟ್ಸ್ ಏರ್ ಲೈನ್ಸ್ A380 ನಿಯೋಜನೆಯಾಗಿರುವ ಭಾರತದ ಎರಡನೇ ನಗರ ಇದಾಗಿದೆ. ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ-ದುಬೈ ಮಾರ್ಗದಲ್ಲಿ A380 ನ್ನು ಹಾರಾಟ ಮಾಡುತ್ತಿದೆ. ಬೆಂಗಳೂರು-ದುಬೈ ಮಾರ್ಗದಲ್ಲಿ ಪ್ರತಿ ದಿನ A380 ವಿಮಾನವು EK568/569 ಎಕಾನಮಿ, ಬ್ಯುಸಿನೆಸ್ ಮತ್ತು ಫಸ್ಟ್ ಕ್ಲಾಸ್ ಈ ಮೂರು ಕ್ಲಾಸ್ ಗಳಿರುವ ಪ್ರಯಾಣ ಮಾಡುತ್ತಿದೆ.
EK568 ವಿಮಾನವು ಅಕ್ಟೋಬರ್ 30ರಂದು ದುಬೈಯಿಂದ ಸ್ಥಳೀಯ ಕಾಲಮಾನ ರಾತ್ರಿ 9.25ಕ್ಕೆ ಹೊರಟು ಮರುದಿನ ಮುಂಜಾನೆ 2.30ಕ್ಕೆ ಬೆಂಗಳೂರು ತಲುಪಲಿದೆ. ಹಿಂತಿರುಗುವ ವಿಮಾನ EK569 ಬೆಂಗಳೂರು ವಿಮಾನ ನಿಲ್ದಾಣದಿಂದ ಅಕ್ಟೋಬರ್ 31ಕ್ಕೆ ಮುಂಜಾನೆ 4.30ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ದುಬೈ ತಲುಪಲಿದೆ. A380ನಲ್ಲಿರುವ ಎಕಾನಮಿ ಕ್ಲಾಸ್ ನಲ್ಲಿರುವ ಸೀಟುಗಳು ದೊಡ್ಡದಾಗಿದ್ದು ಕಾಲಿಡುವ ಜಾಗವೂ ವಿಶಾಲವಾಗಿದೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಫ್ಲಾಟ್ ಸೀಟ್ ಆಗಿದ್ದು ಫಸ್ಟ್ ಕ್ಲಾಸ್ ನಲ್ಲಿ ಪ್ರೈವೆಟ್ ಸೂಟ್ಸ್ ಮತ್ತು ಶವರ್ ಸ್ಪಾ ಇದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ನವೆಂಬರ್ 2021ರಲ್ಲಿ A380 ವಿಮಾನದಲ್ಲಿ 249 ಪ್ರಯಾಣಿಕರು ಜಗತ್ತಿನ 70 ಸ್ಥಳಗಳಿಗೆ ಪಯಣಿಸಿದ್ದಾರೆ. ಭಾರತದಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 400ಕ್ಕಿಂತಲೂ ಹೆಚ್ಚು ವಿಮಾನ ನಿಲ್ದಾಣಗಳು A380 ವಿಮಾನಕ್ಕೆ ಅನುಕೂಲಕರವಾಗಿದೆ. A380 ವಿಮಾನವನ್ನು 2007 ಅಕ್ಟೋಬರ್ 25ರಂದು ಕಮರ್ಷಿಯಲ್ ಸೇವೆಗಾಗಿ ಸಿಂಗಾಪುರ್ ಏರ್ ಲೈನ್ಸ್ ನಲ್ಲಿ ನಿಯೋಜಿಸಲಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಏರ್ ಬಸ್ ಈ ವಿಮಾನ ನಿರ್ಮಾಣವನ್ನು ನಿಲ್ಲಿಸಿತ್ತು.
ಯಶಸ್ವಿ ರಾಜಕೀಯ ನಾಯಕತ್ವಕ್ಕೆ ಈಗ ಬೇಕಾಗಿರುವುದು ವರ್ಚಸ್ಸು ಮತ್ತು ಜನಪ್ರಿಯತೆ. ಈ ಗುಣಗಳಿದ್ದರೆ ಸರ್ಕಾರ ಮತ್ತು ಪಕ್ಷದಲ್ಲಿ ಏನು ಬೇಕಾದರೂ…
-ಗಿರೀಶ್ ಹುಣಸೂರು ೫ ವರ್ಷಗಳ ಬಳಿಕ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆಗೆ ಮುಂದಾದ ಸರ್ಕಾರ ಮೈಸೂರು: ಹದಿಹರೆಯದ ಹೆಣ್ಣು ಮಕ್ಕಳಲ್ಲಿ…
೨೦೨೫ನೇ ವರ್ಷಕ್ಕೆ ವಿದಾಯ ಹೇಳಿ ೨೦೨೬ರ ಹೊಸ ವರ್ಷವನ್ನು ಸ್ವಾಗತಿಸುವ ದಿನ ಸನ್ನಿಹಿತವಾಗಿದೆ. ಪ್ರತಿ ಸಲ ಹೊಸ ವರ್ಷವನ್ನು ಹರ್ಷದಿಂದ…
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…