ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರೊಹಿಂಗ್ಯಾ ನಿರಾಶ್ರಿತರನ್ನು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಅವರಿಗೆ ಪಶ್ಚಿಮ ದೆಹಲಿಯ ಬಕ್ಕರ್ವಾಲಾದಲ್ಲಿ ಫ್ಲಾಟ್ ನೀಡಲಾಗುವುದು ಎಂದು ಬಧುವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು.
ಇದಾಗಿ ಕೆಲವೇ ಗಂಟೆಗಳಲ್ಲಿ ಹೇಳಿಕೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಅಕ್ರಮ ವಿದೇಶಿಯರನ್ನು ಕಾನೂನು ಮೂಲಕ ದೇಶದಿಂದ ಗಡಿಪಾರು ಮಾಡುವ ವರಗೆ ಅವರನ್ನು ಬಂಧನದಲ್ಲೇ ಇರಿಸಲಾಗುವುದು ಎಂದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವಾಲಯ ರೊಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ದೆಹಲಿ ಸರ್ಕಾರ ಮುಂದಾಗಿದೆ. ರೊಹಿಂಗ್ಯಾ ಅಕ್ರಮ ವಿದೇಶಿಗರು ಪ್ರಸ್ತುತ ಸ್ಥಳದಲ್ಲಿಯೇ ಮುಂದುವರಿಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ GNCTD ಗೆ ನಿರ್ದೇಶನ ನೀಡಿದೆ. ಯಾಕೆಂದರೆ ಗೃಹಸಚಿವಾಲ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಕ ಸಂಬಂಧಪಟ್ಟ ದೇಶದೊಂದಿಗೆ ಅವರನ್ನು ಗಡೀಪಾರು ಮಾಡುವ ವಿಷಯ ಚರ್ಚಿಸುತ್ತಿದೆ ಎಂದಿದೆ.
ಬೆಳಗ್ಗೆ ಟ್ವೀಟ್ ಮಾಡಿದ ಪುರಿ, ದೇಶದಲ್ಲಿ ಆಶ್ರಮ ಬೇಡಿ ಬಂದ ನಿರಾಶ್ರಿತರನ್ನು ಭಾರತ ಸದಾ ಸ್ವಾಗತಿಸಿದೆ. ಮಹತ್ವದ ನಿರ್ಧಾರ ಏನೆಂದರೆ ಎಲ್ಲ ರೊಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾದಲ್ಲಿರುವ ಇಡಬ್ಯುಎಸ್ ಫ್ಲಾಟ್ಗೆ ಶಿಫ್ಟ್ ಮಾಡಲಾಗುವುದು. ಇಲ್ಲಿ ಇವರಿಗೆ ಮೂಲ ಸೌಕರ್ಯ, ಯುಎನ್ಎಚ್ ಸಿಆರ್ ಐಡಿ ಮತ್ತು ದಿನದ 24 ಗಂಟೆ ದೆಹಲಿ ಪೊಲೀಸ್ ರಕ್ಷಣೆ ನೀಡಲಾಗುವುದು. ದೇಶದ ವಲಸೆಗಾರರ ನೀತಿಯನ್ನು ಸಿಎಎ ಜತೆ ಜೋಡಿಸಿ ಅಪಪ್ರಚಾರ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡವರಿಗೆ ಇದರಿಂದ ನಿರಾಶೆಯಾಗಿದೆ. ಭಾರತ ಯುಎನ್ ರೆಫ್ಯೂಗಿ ಕನ್ವೆನ್ಶನ್ 1951ನ್ನು ಗೌರವಿಸುತ್ತದೆ ಮತ್ತು ಪಾಲಿಸುತ್ತದೆ. ಯಾವುದೇ ನಿರಾಶ್ರಿತರಿಗೆ ಅವರ ಜನಾಂಗ, ಧರ್ಮ ಅಥವಾ ಸಮುದಾಯದ ಭೇದವಿಲ್ಲದೆ ಆಶ್ರಯ ಒದಗಿಸುತ್ತದೆ ಎಂದು ಸಚಿವ ಪುರಿ ಟ್ವೀಟ್ ಮಾಡಿದ್ದರು.
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…
ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…
ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…
ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…
ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ ಮೈಸೂರು ದಸರಾ ಎಂದರೆ ಕೇವಲ ಹತ್ತು…
ಸಂದರ್ಶನ: ಬಾನಾಸು ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…