ದೇಶ- ವಿದೇಶ

ಆರ್‌ಬಿಐನಿಂದ ಮಹತ್ವದ ಮಾಹಿತಿ: ರೈತರಿಗೆ ಅಡಮಾನ ರಹಿತ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಳ

ನವದೆಹಲಿ: ಅಗತ್ಯ ದಾಖಲೆಗಳು ಇಲ್ಲದೆ ರೈತರಿಗೆ ನೀಡುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ 2 ಲಕ್ಷಕ್ಕೆ ಹೆಚ್ಚಿಸಿದ್ದು, ಇದು ಜನವರಿ.1ರಿಂದಲೇ ಜಾರಿಗೆ ಬರಲಿದೆ.

ಇದಕ್ಕೂ ಮೊದಲು ಅಡಮಾನವಿಲ್ಲದೇ 1.6 ರೂ. ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ಆರ್‌ಬಿಐನ ಈ ಹೊಸ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ಈಗಾಗಲೇ ತಿಳಿಸಿದ್ದು, ಜನವರಿಯಿಂದ ಜಾರಿಗ ತರಲು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದೆ. ಜೊತೆಗೆ ದೇಶದಾದ್ಯಂತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ 2 ಲಕ್ಷದವರೆಗಿನ ಸಾಲಕ್ಕೆ ಅಡಮಾನ ಅಥವಾ ಅಗತ್ಯ ದಾಖಲೆಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.

ಕೃಷಿಯಲ್ಲಿ ಹೆಚ್ಚುತ್ತಿರುವ ಮೂಲ ಬಂಡವಾಳ, ಬೀಜ ಹಾಗೂ ಗೊಬ್ಬರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ. ಇದರಿಂದಾಗಿ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಒಳಗೊಂಡಂತೆ ಶೇಕಡಾ.86ರಷ್ಟು ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.

ಈ ಹೊಸ ಮಾರ್ಗಸೂಚಿ ರೈತರಿಗೆ ಬೇಗ ತಲುಪಿಸುವ ಉದ್ದೇಶದಿಂದ ಪ್ರಚಾರ ಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇದರ ಜೊತೆಯಲ್ಲಿ ರೈತರು ಕಿಸಾನ್‌ ಕಾರ್ಡ್‌ ಬಳಸಿದರೆ ಶೇಕಡಾ.4ರ ಬಡ್ಡಿ ದರದಲ್ಲಿ 3 ಲಕ್ಷದವರೆಗೂ ಸಾಲ ಪಡೆಯಬಹುದು ಎಂದು ತಿಳಿಸಲಾಗಿದೆ.

ಹಣಕಾಸು ವಲಯದ ವ್ಯಾಪ್ತಿಗೆ ಕೃಷಿ ಕ್ಷೇತ್ರದ ಪಾಲನ್ನು ಹೆಚ್ಚಿಸುವುದು. ರೈತರು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಜೀವನ ಕ್ರಮ ಸುಧಾರಿಸುವುದು ಹಾಗೂ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದೆ.

ಈ ಮೂಲಕ ಅನ್ನದಾತರಿಗೆ ಆರ್‌ಬಿಐ ಗುಡ್‌ನ್ಯೂಸ್‌ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ರೈತರಿಗೆ ವರದಾನವಾಗಲಿದೆ. ಹೀಗಾಗಿ ಮತ್ತಷ್ಟು ಯುವಕರು ಕೃಷಿಯತ್ತ ಮುಖಮಾಡಲು ಇದು ಸಂಪೂರ್ಣ ಸಹಕಾರಿಯಾಗಲಿದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

3 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

3 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

3 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

3 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

3 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

3 hours ago