ದೇಶ- ವಿದೇಶ

ರಾಹುಲ್‌ ಗಾಂಧಿ ಇದ್ದ ವೇದಿಕೆ ಕುಸಿತ; ಕೆಲಕಾಲ ಆತಂಕ

ಬಿಹಾರ:‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿದ್ದ ವೇದಿಕೆ ಕುಸಿದು ಬಿದ್ದಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿದೆ.

ರಾಹುಲ್‌ ಅವರು ಬಿಹಾರದ ಪಾಲಿಗಂಜ್‌ನ ಲೋಕಸಭಾ ಚನಾವಣೆಯ ಸಮಾವೇಶದಲ್ಲಿ ಭಾಗಿಯಾಗಿದ್ದರು. ಪಕ್ಷದ ನಾಯಕರು ಹಾಗೂ ಪಾಟಲೀಪುತ್ರ ಲೋಕಸಭೆ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಮಿಸಾ ಭಾರತಿ ಪರ ಮತಯಾಚನೆ ಮಾಡಲು ಪಾಟ್ನಾಕ್ಕೆ ಬಂದಿದ್ದರು. ಈವೇಳೆ ವೇದಿಕೆ ಮೇಲೆ ರಾಹುಲ್‌ ಬರುತ್ತಿದ್ದಂತೆಯೇ ವೇದಿಕೆಯ ಒಂದು ಭಾಗ ಕುಸಿದಿದೆ. ಕೂಡಲೇ ಧಾವಿಸಿದ ಮಿಸಾ ಭಾರತಿ ರಾಹುಲ್‌ ಕೈಹಿಡಿದು ಪಕ್ಕಕ್ಕೆ ಕರೆದಕೊಂಡು ಹೋಗಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ರಾಹುಲ್‌ ನೆರವಿಗೆ ಧಾವಿಸುತ್ತಿರುವ ದೃಶ್ಯದ ವಿಡಿಯೋಗಳು ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್‌ ಹಾಗುತ್ತಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ | ಸಿಇಟಿ ; ನಿಯಮಗಳಿಗೆ ತಿದ್ದುಪಡಿ ಅವಶ್ಯ

ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು…

38 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಸೋಲಾದದ್ದು ಮುಚ್ಚುಮರೆಯ ಕ್ಷೇತ್ರ ಪುನರ್‌ ವಿಂಗಡಣೆಗೆ

ದೆಹಲಿ ಕಣ್ಣೋಟ ಸಂಸತ್ತು ಅಂಗೀಕರಿಸಬೇಕಿದ್ದ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ ಮಹಿಳಾ ಮೀಸಲಾತಿಯೋ ಅಥವಾ ಜನಗಣತಿಯ ನಂತರ ಲೋಕಸಭೆ ಮತ್ತು…

48 mins ago

ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ : ದಾಳಿಗೆ ಮೋದಿ ಪ್ರತಿಕ್ರಿಯೆ

ನವದೆಹಲಿ : ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು…

1 hour ago

ಆಂದೋಲನ ಹಾಡುಪಾಡು | ಚಾಮರಾಜನಗರದ ರಂಗಭೂಮಿಯ ಕಿರಣ

ಸ್ವಾಮಿ ಪೊನ್ನಾಜಿ... ಕಿರಣ್ ಗಿರ್ಗಿ ಚಾಮರಾಜನಗರದ ಕಿರಿಯ ವಯಸ್ಸಿನ ಪ್ರತಿಭಾವಂತ ರಂಗ ನಿರ್ದೇಶಕ. ಈ ಹಿಂದೆ ಚಾಮರಾಜನಗರದ ರಂಗತರಂಗ ತಂಡದ…

1 hour ago

ಶಂಕಿತ ಶೂಟರ್‌ನ ಚಿತ್ರ, ವಿಡಿಯೊ ಬಿಡುಗಡೆ ಮಾಡಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗವಹಿಸಿದ್ದ ವೈಟ್‌ ಹೌಸ್‌ ಕರೆಸ್ಪಾಂಡೆಂಟ್ಸ್  ಔತಣಕೂಟ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ…

1 hour ago

ಟ್ರಂಪ್‌ ಭಾಗವಹಿಸಿದ್ದ ಡಿನ್ನರ್‌ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ : ಆಗಿದ್ದೇನು?

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗವಹಿಸಿದ್ದ ಔತಣಕೂಟ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್,…

2 hours ago