ತಿರುಮಲ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು 50 ಕೆಜಿ ತೂಕದ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಹಾಗೂ ದೇವಾಲಯದ ಅಧಿಕಾರಿಗಳು ರಂಗನಾಯಕುಲ ಮಂಟಪದಲ್ಲಿ ಬೆಳ್ಳಿ ದೀಪಗಳನ್ನು ಪ್ರಮೋದಾದೇವಿ ಒಡೆಯರ್ ಅವರಿಂದ ಸ್ವೀಕರಿಸಿದರು.
ಪ್ರತಿ ಬೆಳ್ಳಿ ದೀಪ ಸುಮಾರು 50 ಕೆಜಿ ತೂಕವಿದ್ದು, ಎರಡೂ ದೀಪಗಳು ಸೇರಿ ಒಂದು ಕ್ವಿಂಟಾಲ್ ತೂಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 300 ವರ್ಷಗಳ ಹಿಂದೆ ಅಂದಿನ ಮೈಸೂರು ಮಹಾರಾಜರು ಬೃಹತ್ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಅವುಗಳನ್ನು ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತದೆ. ಮೂರು ಶತಮಾನಗಳ ನಂತರ ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮತ್ತೊಮ್ಮೆ ತಿರುಪತಿ ತಿಮ್ಮಪ್ಪನಿಗೆ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…
ಲೀಲಾ ಶಿವಕುಮಾರ್, ಪರಿಸರವಾದಿ ಸ್ವಚ್ಛ ನಗರಿ ಮೈಸೂರು ಮಾತ್ರವಲ್ಲ, ಇಡೀ ದೇಶವೇ ಇಂದು ಕಸದ ಸಮಸ್ಯೆಯನ್ನು ಎದುರಿಸುತ್ತಿದೆ. ರಸ್ತೆ, ಬಡಾವಣೆ,…
ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಗರಿಷ್ಟ ಮೊತ್ತ ೨೦೦ ರೂ. ಅಸಾಧ್ಯವೇ? ಕನ್ನಡ ಚಿತ್ರರಂಗ ಮತ್ತು…