ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ತಂಡ ಗುರುವಾರ(ಜೂ.27) ಬಿಹಾರದ ಪಾಟ್ನದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ನೀಟ್ ಪ್ರಕರಣದ ಮೊದಲ ಬಂಧನ ಇದಾಗಿದೆ.
ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕೂಡ ವ್ಯವಸ್ಥೆ ಮಾಡಿಕೊಟ್ಟ ಆರೋಪದ ಮೇರೆಗೆ ಪಾಟ್ನಾದ ಮನೀಶ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಸಿಬಿಐ 6 ಎಫ್‌ಐಆರ್‌ಗಳನ್ನು ದಾಖಲಿಸಿದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಎನ್‌ಟಿಎ ಸಂಸ್ಥೆಯು ನೀಟ್-ಯುಜಿ ಪರೀಕ್ಷೆಗಳನ್ನು ನಡೆಸುತ್ತ ಬಂದಿದೆ. ಈ ವರ್ಷ ಮೇ 5 ರಂದು ವಿದೇಶದ 14 ಪರೀಕ್ಷಾ ಕೇಂದ್ರಗಳು ಸೇರಿ 571 ನಗರಗಳ 4750 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ 23 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಿದ್ದರು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ನೀಟ್ ಅಕ್ರಮವನ್ನು ಸಿಬಿಐಗೆ ವಹಿಸಿತ್ತು. ಆ ಬೆನ್ನಲ್ಲೇ ಭಾನುವಾರ(ಜೂ.23) ಮೊದಲ ಎಫ್‌ಐಆರ್ ದಾಖಲಾಗಿತ್ತು.
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ವಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಮೈಸೂರು: ಅರಮನೆಯ ವಾಸದ ಭಾಗದ ಕುರಿತು ಸಚಿವ ಯತೀಂದ್ರ ನೀಡಿದ್ದ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿರುಗೇಟು ನೀಡಿದ್ದಾರೆ. ರಾಜಮನೆತನಕ್ಕೆ…
ಬೆಂಗಳೂರು: ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯದ ಬಸ್ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟಿದೆ. ನವೆಂಬರ್ 4ರ…
ಭಲೇ ಬೆಳಗಾವಿ! ಭಲೆ ಭಲೇ ಬೆಳಗಾವಿ! ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ ಕನ್ನಡಮ್ಮನ ತೇರು ಎಳೆಯಲು! ನಾಡು-ನುಡಿ ಪ್ರೇಮದ ಪ್ರತೀಕವಿದು…
ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್…
ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು…