big shocking for ksrtc transport unions
ಬೆಂಗಳೂರು: ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯದ ಬಸ್ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟಿದೆ. ನವೆಂಬರ್ 4ರ ಮಧ್ಯರಾತ್ರಿಯಿಂದ ಹೊಸ ಬಸ್ ಪ್ರಯಾಣ ದರ ಜಾರಿಗೆ ಬರಲಿದೆ.
ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಗರಿಷ್ಠ 9 ರೂಪಾಯಿ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಬಿಎಂಟಿಸಿಯ ಪ್ರತಿ ಸ್ಟೇಜ್ನ ದರ 6 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಲಿದೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ಹೊಸ ದರವನ್ನು ಪ್ರಕಟಿಸಿದ್ದಾರೆ.
ಡೀಸೆಲ್ ಬೆಲೆ ಮತ್ತು ಬಸ್ಗಳ ನಿರ್ವಹಣಾ ವೆಚ್ಚ ಹೆಚ್ಚಿರುವುದರಿಂದ ಸಾರಿಗೆ ನಿಗಮಗಳ ಮೇಲಿನ ಹೊರೆ ಹೆಚ್ಚಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಹಿಳೆಯರ ಉಚಿತ ಬಸ್ ಪ್ರಯಾಣದ ಟಿಕೆಟ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತಿಲ್ಲ ಎಂದೂ ಸಚಿವರು ಹೇಳಿದ್ದಾರೆ.
ಭಲೇ ಬೆಳಗಾವಿ! ಭಲೆ ಭಲೇ ಬೆಳಗಾವಿ! ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ ಕನ್ನಡಮ್ಮನ ತೇರು ಎಳೆಯಲು! ನಾಡು-ನುಡಿ ಪ್ರೇಮದ ಪ್ರತೀಕವಿದು…
ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್…
ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು…
ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ಹೊರಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಪ್ರತಿನಿತ್ಯ ಕಾಲೇಜಿಗೆ ತೆರಳಲು…
ಪ್ರೊ. ಎಂ. ಕೃಷ್ಣೇಗೌಡ, ಮೈಸೂರು ಘನ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನವೆಂಬರ್ ಒಂದನೇ ತಾರೀಕು ಕನ್ನಡ ಧ್ವಜವನ್ನು ಮಾತ್ರವಲ್ಲದೆ…
ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಸಸ್ಯಶಾಸ್ತ್ರದಲ್ಲಿ ಗಿಡ, ಮರ ಮತ್ತು ಹೂಗಳ ಹೆಸರುಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಆನೇಕ…