ಓದುಗರ ಪತ್ರ
ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು ರೈತರಿಗೆ ನೀಡುವುದಾಗಿ ಹೇಳಿದೆ. ಪ್ರತಿ ಲೀಟರ್ ಹಾಲಿನ ಬೆಲೆ ಇಷ್ಟು ಹೆಚ್ಚಾಗಿರುವುದು ರಾಜ್ಯದ ಇತಿಹಾಸದ ಮೊದಲ ಬಾರಿಗೆ, ಅದರೂ ರೈತರಿಗೆ ಅನುಕೂಲವಾಗಬಹುದು ಎಂಬ ಒಂದೇ ಕಾರಣಕ್ಕೆ ಗ್ರಾಹಕರಾರೂ ಪ್ರತಿರೋಧ ವ್ಯಕ್ತಪಡಿಸಲಿಲ್ಲ, ಆದರೆ ಇದು ಹೆಚ್ಚು ಅನುಕೂಲವಾಗಿರುವುದು ಹೋಟೆಲ್ ನಡೆಸುವವರಿಗೆ.
ಒಂದು ಲೀಟರ್ ಹಾಲಿನಲ್ಲಿ ಕನಿಷ್ಠ ೧೦ ರಿಂದ ೧೨ ಲೋಟ ಕಾಫಿ/ಟೀ ಮಾಡಬಹುದು.ನವೆಂಬರ್ ಒಂದರಿಂದಲೇ ಸಣ್ಣಪುಟ್ಟ ಹೊಟೇಲ್‌ಗಳು ಸೇರಿದಂತೆ ಎಲ್ಲ ರೀತಿಯ ಹೋಟೆಲ್ ಮಾಲೀಕರು, ಒಂದು ಲೋಟ ಕಾಫಿ/ಟೀ ಬೆಲೆಯನ್ನು ಐದು ರೂಪಾಯಿಗೆ ಹೆಚ್ಚಿಸುವ ಮೂಲಕ ಕಾಫಿ/ ಟೀ ಪ್ರಿಯರಿಗೆ ಬರೆಹಾಕಿದ್ದಾರೆ.
ಇದೊಂದು ಹೋಟೆಲ್ ಮಾಲೀಕರ ಹಗಲು ದರೋಡೆ ಎನ್ನದೇ ವಿಧಿಯಿಲ್ಲ. ಹಾಲಿನ ಬೆಲೆಯೊಂದನ್ನೇ ಬಂಡವಾಳ ಮಾಡಿಕೊಂಡು ಪ್ರತಿ ಲೋಟ ಕಾಫಿ /ಟೀ ಗೆ, ಐದು ರೂಪಾಯಿ ಹೆಚ್ಚು ಮಾಡಿರುವುದು ಒಂದು ರೀತಿಯಲ್ಲಿ ಗ್ರಾಹಕರನ್ನು ಶೋಷಣೆ ಮಾಡಿದಂತೆ. ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ಮಾಲೀಕರು ಇದನ್ನು ಪರಿಷ್ಕರಿಸಬೇಕು, ಯಾವುದೇ ಬೆಲೆ ಏರಿಕೆಯ, ಬಿಸಿ ತಕ್ಷಣವೇ ತಟ್ಟುವುದು ಮಧ್ಯಮ ವರ್ಗದ ಜನರಿಗೆ ಅಲ್ಲವೇ?
-ಬೂಕನಕೆರೆ ವಿಜೇಂದ್ರ, ಮೈಸೂರು
ಭಲೇ ಬೆಳಗಾವಿ! ಭಲೆ ಭಲೇ ಬೆಳಗಾವಿ! ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ ಕನ್ನಡಮ್ಮನ ತೇರು ಎಳೆಯಲು! ನಾಡು-ನುಡಿ ಪ್ರೇಮದ ಪ್ರತೀಕವಿದು…
ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್…
ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ಹೊರಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಪ್ರತಿನಿತ್ಯ ಕಾಲೇಜಿಗೆ ತೆರಳಲು…
ಪ್ರೊ. ಎಂ. ಕೃಷ್ಣೇಗೌಡ, ಮೈಸೂರು ಘನ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನವೆಂಬರ್ ಒಂದನೇ ತಾರೀಕು ಕನ್ನಡ ಧ್ವಜವನ್ನು ಮಾತ್ರವಲ್ಲದೆ…
ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಸಸ್ಯಶಾಸ್ತ್ರದಲ್ಲಿ ಗಿಡ, ಮರ ಮತ್ತು ಹೂಗಳ ಹೆಸರುಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಆನೇಕ…
ಕೆ.ಬಿ.ರಮೇಶನಾಯಕ ಜನವರಿ ತಿಂಗಳ ಮಧ್ಯದಲ್ಲಿ ಚುನಾವಣೆ ನಿಗದಿಗೆ ಸಚಿವರ ನಿರ್ಧಾರ ಮೈಸೂರು: ರಾಜ್ಯ ರಾಜಕಾರಣದಲ್ಲಿ ಎರಡನೇ ಶಕ್ತಿ ಕೇಂದ್ರ ಎಂದೇ…