ದೇಶ- ವಿದೇಶ

ವಿಶ್ವದ ಅತ್ಯಂತ ದುಬಾರಿ ಮರವಿದು: ಇದ್ರಿಂದಾನೇ ತಯಾರಾಗುತ್ತೆ ಐಶಾರಾಮಿ ಸುಗಂಧ ದ್ರವ್ಯಗಳು

ನವದೆಹಲಿ: ವಿಶ್ವದಲ್ಲಿ ಅತ್ಯಂತ ದುಬಾರಿ ಮರವೊಂದಿದೆ. ಅದನ್ನು ಬೇರೆ ದುಬಾರಿ ಮರಗಳಂತೆ ಫರ್ನಿಚರ್‌ ಅಥವಾ ಮತ್ತೇನೋ ಮಾಡಲು ಬಳಸಲ್ಲ. ಬದಲಿಗೆ ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸುತ್ತಾರೆ.

ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಬಳಸುವ ಆ ದುಬಾರಿ ಮರ ಬೇರಾವುದು ಅಲ್ಲ. ಅದುವೇ ಅಕ್ವಿಲೇರಿಯಾ. ಇದನ್ನು ವುಡ್‌ ಆಫ್‌ ದಿ ಗಾಡ್ಸ್‌ ಎಂದೂ ಸಹ ಕರೆಯಲಾಗುತ್ತದೆ. ಸುಗಂಧ ದ್ರವ್ಯ ಉದ್ಯಮದಲ್ಲಿ ಇದನ್ನು ದ್ರವಚಿನ್ನ ಅಂತಲೂ ಕರೆಯಲಾಗುತ್ತದೆ.

ಈ ಮರವನ್ನು ಶತಮಾನಗಳಿಂದ ವಿಶಿಷ್ಟ ಸುಗಂಧಕ್ಕಾಗಿ ಬಳಸಲಾಗುತ್ತದೆ. ಈ ಅಮೂಲ್ಯವಾದ ಮರವು ಆಗ್ನೇಯ ಏಷ್ಯಾದ ದಟ್ಟವಾದ ಮಳೆ ಕಾಡುಗಳಿಗೆ ಸ್ಥಳೀಯವಾದ ಮರವಾಗಿದೆ. ಈ ಮರಗಳಿಗೆ ನಿರ್ದಿಷ್ಟ ಅಚ್ಚು ಬಿದ್ದು ಅದಕ್ಕೆ ಸೋಂಕಿನ ರೀತಿ ಆಗುತ್ತದೆ.

ಈ ಸೋಂಕು ಉಂಟಾದಾಗ ಅಲ್ಲಿಂದ ಮರದಲ್ಲಿ ಒಂದು ರೀತಿಯ ಸ್ರಾವ ಹೊರಬರುತ್ತದೆ. ಅದಕ್ಕೆ ಔದ್‌ ಎನ್ನಲಾಗುತ್ತದೆ. ಇದು ಅದ್ಬುತ ಸುವಾಸನೆಯನ್ನು ಹೊರ ಸೂಸುತ್ತದೆ. ಇದೇ ಕೊನೆಯ ಸುಗಂಧ ತಯಾರಿಕೆಗೆ ಕಾರಣವಾಗುತ್ತದೆ. ಈ ಮರಗಳಲ್ಲಿ ಔದ್‌ ಸೃಷ್ಟಿಯಾಗೋದು ಸಂಪೂರ್ಣವಾಗಿ ನೈಸರ್ಗಿಕ ರೀತಿಯಲ್ಲೇ.

ಅಪರೂಪದ ಸಂಗತಿಯೆಂದರೆ ಈ ಮರಗಳ ಒಂದು ಭಾಗ ಮಾತ್ರ ರಾಳವನ್ನು ಉತ್ಪಾದಿಸುತ್ತದೆ. ನಂತರ ಇದು ಸಂಗ್ರಹವಾಗಲು ದಶಕಗಳನ್ನೇ ತೆಗೆದುಕೊಳ್ಳಬಹುದು. ಈ ಸ್ರಾವದ ಬೆಲೆ ಪ್ರತಿ ಕಿಲೋ ಗ್ರಾಂಗೆ ಚಿನ್ನಕ್ಕಿಂತ ದುಬಾರಿಯಾಗಿದೆ.

ಪ್ರಸ್ತುತ ಔದ್‌ನ ಬೇಡಿಕೆ ಹೆಚ್ಚಿದ್ದು, ಜನಪ್ರಿಯತೆಯ ಉಲ್ಬಣವು ಅಕ್ವಿಲೇರಿಯಾ ಮರಗಳ ಅಪಾಯಕ್ಕೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸುಗಂಧ ದ್ರವ್ಯ ಉದ್ಯಮದಲ್ಲಿ ಔದ್‌ ಭಾರೀ ಜನಪ್ರಿಯವಾಗಿದೆ. ಪಾಶ್ಚಿಮಾತ್ಯ ಸುಗಂಧ ದ್ರವ್ಯದಲ್ಲಿ ಈ ಅಂಶ ಇರುವಂತೆ ಉತ್ಪಾದಿಸಲಾಗುತ್ತಿದೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ

ಮೈಸೂರು: ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…

57 mins ago

ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್‌ ಒಡೆಯರ್‌

ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್  ಒಡೆಯರ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…

3 hours ago

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 12ರಂದು ದೆಹಲಿಗೆ…

3 hours ago

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

8 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

8 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

8 hours ago