ಮೈಸೂರು: ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು 500 ರೂ. ಮುಖಬೆಲೆಯ 1.3ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ವಂಚನೆ ಪ್ರಕರಣದ ಪ್ರಮುಖ ವಿಶೇಷವೆಂದರೆ ವ್ಯಾಪಾರಸ್ಥರಿಗೆ ವಂಚಕರು ನೀಡಿದ್ದ 500 ರೂ. ಮುಖಬೆಲೆಯ 1.3ಕೋಟಿ ಮೌಲ್ಯದ ನಕಲಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರದೇ ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರವಿದೆ. ಸದ್ಯ, ಈ ನೋಟುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಚಿನ್ನಾಭರಣ ವ್ಯಾಪಾರಸ್ಥರ ಹತ್ತಿರ 2 ಕೆ.ಜಿ.ಚಿನ್ನ ಖರೀದಿ ಒಪ್ಪಂದ ಮಾಡಿಕೊಂಡಿದ್ದ ವಂಚಕರು 1.3 ಕೋಟಿ ರೂ. ನಗದು ಹಣ ಇದೆ ಎಂದು ಹೇಳಿ ಹಣದ ಬ್ಯಾಗ್‌ನ್ನು ನೀಡಲು ಬಂದಿದ್ದರು. ಆದರೆ ವಂಚಕರು ನಕಲಿ ನೋಟುಗಳ ಜೊತೆಗೆ ಅನೇಕ ಅಸಲಿ ನೋಟುಗಳನ್ನು ಮೇಲ್ಭಾಗ ತೋರಿಕೆಗಾಗಿ ಇಟ್ಟಿದ್ದರು. ಇದೇ ವೇಳೆಗೆ ವ್ಯಾಪಾರಸ್ಥರ ನಂಬಿಕೆಗಳಿಸಿದ್ದ ವಂಚಕರು ಇನ್ನೊಂದು ಅಂಗಡಿ ಹತ್ತಿರ ಚಿನ್ನ ಖರೀದಿಸಬೇಕಿದೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬ್ಯಾಗ್‌ನಲ್ಲಿದ್ದ ಹಣವನ್ನು ತಕ್ಷಣವೇ ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಮುಖಬೆಲೆಯ ನೋಟುಗಳನ್ನು ಇಡಲಾಗಿದೆ ಎಂಬ ಅಸಲಿ ಸತ್ಯ ಗೊತ್ತಾಗಿ ಆಶ್ಚರ್ಯಗೊಂಡ ವ್ಯಾಪಾರಸ್ಥನು, ನವರಂಗ್‌ಪುರ ಪೊಲೀಸ್ ಠಾಣೆಗೆ ವಂಚಕರ ವಿರುದ್ಧ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ವಂಚಕರ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.
ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…
ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…
‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…
ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…
ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…