ಐಸಿಎಆರ್ ಆಡಳಿತ ಮಂಡಳಿ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಹೊಸದಿಲ್ಲಿ : ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಸೋಮವಾರ ದೆಹಲಿಯಲ್ಲಿ ನಡೆದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ಕೃಷಿ ವಲಯವನ್ನು ಬಲಪಡಿಸುವ ದೂರದೃಷ್ಟಿಯ ಹಲವು ಯೋಜನೆಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕರ್ನಾಟಕವು ಕೃಷಿ ನಾವೀನ್ಯತೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ರೈತರ ಕಲ್ಯಾಣಕ್ಕಾಗಿ ನವೀನ ಯೋಜನೆಗಳನ್ನು ರೂಪಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ. ರೈತ ಕೇಂದ್ರಿತ, ಆಧುನಿಕ ಮತ್ತು ಹವಾಮಾನ-ತಡೆಗಟ್ಟುವ ಕೃಷಿ ವ್ಯವಸ್ಥೆಯನ್ನು ರೂಪಿಸಲು ಐಸಿಎಆರ್ ಸಹಕಾರ ಬಹುಮುಖ್ಯ” ಎಂದು ಹೇಳಿದರು.
ರಾಗಿ, ರಬಿ, ಜೋಳ ಮತ್ತು ತೊಗರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಇ-ನಾಮ್ ಮೂಲಕ ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಮಾರುಕಟ್ಟೆ ಸಂಪರ್ಕ, ರಾಗಿ, ಒಣ ಬೇಸಾಯ, ತೋಟಗಾರಿಕೆ, ಔಷಧೀಯ ಸಸ್ಯಗಳು ಮತ್ತು ಆಹಾರ ಸಂಸ್ಕರಣೆಗೆ ಐಸಿಎಆರ್-ರಾಜ್ಯ ಸಹಭಾಗಿತ್ವದ ವಿಶೇಷ ಸಂಶೋಧನಾ ಸಂಸ್ಥೆಗಳ ಸ್ಥಾಪನೆಯನ್ನು ಪ್ರಸ್ತಾಪಿಸಿದರು.
ಕೃಷಿ ವಿಶ್ವವಿದ್ಯಾಲಯಗಳಿಗೆ ಖಾಸಗಿ ಧನಸಹಾಯದ ಮೇಲೆ ಜಿಎಸ್‌ಟಿ ವಿನಾಯಿತಿ, ಕೃಷಿ ಸ್ಟಾರ್ಟ್‌ಅಪ್‌ಗಳಿಗೆ ಬೀಜ ನಿಧಿ, ಇನ್‌ಕ್ಯುಬೇಶನ್ ಮತ್ತು ಉದ್ಯಮಶೀಲತೆ ಕೇಂದ್ರಗಳ ಸ್ಥಾಪನೆ, ಹಾಸ್ಟೆಲ್, ಪ್ರಯೋಗಾಲಯಗಳಿಗೆ ಹೆಚ್ಚಿನ ಅನುದಾನ, ಡಿಜಿಟಲ್ ಕ್ಲಾಸ್‌ರೂಮ್‌ಗಳು, ಎಆರ್/ವಿಆರ್ ಉಪಕರಣಗಳು ಮತ್ತು ಐಒಟಿ-ಸಕ್ರಿಯ ಸ್ಮಾರ್ಟ್ ಲ್ಯಾಬ್‌ಗಳ ಮೂಲಕ ಆಧುನಿಕ ಸಂಶೋಧನೆ, ಹಾಗೂ ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೇಂದ್ರದ ಬೆಂಬಲವನ್ನು ಕೋರಿದರು.
ಇದರ ಜೊತೆಗೆ, ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ವಿಷಯ ತಜ್ಞರ (ಎಸ್‌ಎಂಎಸ್) ಹುದ್ದೆಗಳನ್ನು ಸಹಾಯಕ ಪ್ರಾಧ್ಯಾಪಕರಿಗೆ ಸಮಾನಗೊಳಿಸುವ ಪ್ರಸ್ತಾವವನ್ನು ಮಂಡಿಸಿದರು, ಇದರಿಂದ ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಒತ್ತಡ ಕಡಿಮೆಯಾಗಲಿದೆ ಎಂದರು.
ಕರ್ನಾಟಕದ ಮಣ್ಣಿನ ಆರೋಗ್ಯಕ್ಕಾಗಿ ಐಸಿಎಆರ್ ಟಾಸ್ಕ್ ಫೋರ್ಸ್ ಮತ್ತು ನಿಧಿ, ಸಾವಯವ ಹಾಗೂ ಸಿರಿಧಾನ್ಯ ಅಭಿಯಾನಕ್ಕೆ ರಾಷ್ಟ್ರೀಯ ಮನ್ನಣೆ, ಕೃಷಿ ಭಾಗ್ಯ ಮತ್ತು ರೈತ ಸಿರಿ ಯೋಜನೆಗಳೊಂದಿಗೆ ಐಸಿಎಆರ್ ಯೋಜನೆಗಳ ಸಮನ್ವಯ, ಮತ್ತು ಪಿಎಂಎಫ್‌ಎಂಇ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಕ್ಲಸ್ಟರ್‌ಗೆ ಕೇಂದ್ರದ ನೆರವನ್ನು ಸಚಿವರು ಕೋರಿದರು. ಇದೇ ವೇಳೆ, ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಕರ್ನಾಟಕದ ಸಾಂಪ್ರದಾಯಿಕ ಮೈಸೂರು ಪಾಕ್, ರೇಶ್ಮೆ ಶಾಲು, ಸೀರೆ ಮತ್ತು ನೇಗಿಲುಗಳನ್ನು ನೀಡಿ ಗೌರವಿಸಿದರು.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…