ದೇಶ- ವಿದೇಶ

ಮೊಸರು, ಲಸ್ಸಿ, ಗೋಧಿ ಮೇಲಿನ ಜಿಎಸ್‌ಟಿ ಬಡವರಿಗೆ ಹೊರೆಯಾಗುವುದಿಲ್ಲ : ನಿರ್ಮಲಾ ಸೀತಾರಾಮನ್‌

ನವದೆಹಲಿ : ಮೊಸರು, ಲಸ್ಸಿ ಹಾಗೂ ಗೋಧಿಯಂತಹ ಆಹಾರ ಪದಾರ್ಥಗಳ ಮೇಲೆ  ಸರಕು ಹಾಗೂ ಸೇವಾ ತೆರಿಗೆ (GST) ವಿಧಿಸೋದ್ರಿಂದ ಬಡ ಜನರ ಮೇಲೆ ಯಾವುದೇ ಹೊರೆಯಾಗೋದಿಲ್ಲ ಎಂಬ ಅಭಿಪ್ರಾಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಜಿಎಸ್ ಟಿ ಮಂಡಳಿ  ತೆಗೆದುಕೊಂಡ ನಿರ್ಧಾರಕ್ಕೆ ನರೇಂದ್ರ ಮೋದಿ ಆಡಳಿತ ತೆರಿಗೆಗಳನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳನ್ನು ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ ಸದಸ್ಯರ ಚರ್ಚೆ ಬೆಲೆಯೇರಿಕೆಗೆ ಸಂಬಂಧಿಸಿದ ನಿಜವಾದ ಕಾಳಜಿಯ ಬದಲು ರಾಜಕೀಯ ಆಯಾಮಗಳನ್ನು ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ಲೇಷಿಸಿದ್ದರು. ಇನ್ನು ಇದಕ್ಕೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ವಿತ್ತ ಸಚಿವೆಯ ಉತ್ತರದಿಂದ ಕೋಪಗೊಂಡ ಕಾಂಗ್ರೆಸ್ ಸದಸ್ಯರು ಅರ್ಧದಲ್ಲೇ ಸದನದಿಂದ ಹೊರನಡೆದರು. ಇನ್ನು ಡಿಎಂಕೆ ಎಂಪಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರ್ಮಲಾ ಸೀತಾರಾಮನ್ ತಮಿಳಿನಲ್ಲಿ ಮಾತನಾಡಿದ ಪ್ರಸಂಗವೂ ನಡೆಯಿತು.

ಕೋವಿಡ್ -19 ಪೆಂಡಾಮಿಕ್ ಹಾಗೂ ಅದರ ಅನೇಕ ಅಲೆಗಳು, ಉಕ್ರೇನ್-ರಷ್ಯಾ ಯುದ್ಧ, ಚೀನಾದ ಕೆಲವು ಭಾಗಗಳಲ್ಲಿನ ಲಾಕ್ ಡೌನ್ ನಿಂದ ಪೂರೈಕೆ ಸರಪಳಿ ವ್ಯವಸ್ಥೆಯಲ್ಲಿ ವ್ಯತ್ಯಯ ಮುಂತಾದ ಅನೇಕ ಸಮಸ್ಯೆಗಳ ನಡುವೆಯೂ ಸರ್ಕಾರ ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿಟ್ಟಿದೆ ಎಂದು ಸಚಿವೆ ಹೇಳಿದರು. ಬೆಲೆಯೇರಿಕೆಯನ್ನು ಇನ್ನಷ್ಟು ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

‘ಜನರ ನಿರೀಕ್ಷೆಗಳಿಗೆ ತಕ್ಕಂತೆ ನಾವು ಕಾರ್ಯನಿರ್ವಹಿಸುತ್ತಿದ್ದು, ಹಣದುಬ್ಬರ ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಕೂಡ ಜಾಗತಿಕ ವ್ಯಾಪಾರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಇಂಥ ಸಂದರ್ಭದಲ್ಲಿ ನಾವು ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕೆಳಗಿರಿಸುವಲ್ಲಿ ಸಫಲರಾಗಿದ್ದೇವೆ. ನಾವೀಗ ಶೇ.7ರಲ್ಲಿದ್ದು, ಇನ್ನಷ್ಟು ಕೆಳಗೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೂ ಹಣದುಬ್ಬರ ತಗ್ಗಿಸಲು ನೀವೇನು ಮಾಡಿದ್ದೀರಿ ಎಂಬ ಪ್ರಶ್ನೆಗಳನ್ನು ನಮಗೆ ಕೇಳಲಾಗುತ್ತಿದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.ಪ್ರಸ್ತುತ ದೇಶದಲ್ಲಿರುವ ಹಣದುಬ್ಬರವನ್ನು ಯುಪಿಎ ಆಡಳಿತಾವಧಿಯಲ್ಲಿನ ರಿಟೇಲ್ ಹಣದುಬ್ಬರದ ಜೊತೆಗೆ ನಿರ್ಮಲಾ ಸೀತಾರಾಮನ್ ಹೋಲಿಕೆ ಮಾಡಿದರು.

‘ಪ್ರೀಪ್ಯಾಕ್ಡ್ ಹಾಗೂ ಪ್ರೀ ಲೇಬಲ್ಡ್ ಸರಕುಗಳ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಬಡ ಜನರ ಮೇಲೆ ಇದ್ರಿಂದ ಯಾವುದೇ ಪರಿಣಾಮ ಉಂಟಾಗೋದಿಲ್ಲ. ಹಾಗೆಯೇ 25ಕೆಜಿಗಿಂತ ಅಧಿಕ ತೂಕದ ಪ್ಯಾಕ್ ಗಳ ಮೇಲೆ ಕೂಡ ನಾವು ತೆರಿಗೆ ವಿಧಿಸುತ್ತಿಲ್ಲ. ಏಕೆಂದ್ರೆ ಇದ್ರಿಂದ ಸಗಟು ವ್ಯಾಪಾರಿಗಳು ತೆರಿಗೆಯಿಲ್ಲದೆ ಕಿರಾಣಿ ಅಂಗಡಿಗಳಿಗೆ ಪೂರೈಕೆ ಮಾಡಬಹುದು. ಬಡವರನ್ನು ಗಮನದಲ್ಲಿಟ್ಟುಕೊಂಡು ಬಿಡಿಯಾಗಿ ಮಾರಾಟ ಮಾಡುವ ಯಾವುದೇ ವಸ್ತುವಿಗೂ ತೆರಿಗೆ ವಿಧಿಸುತ್ತಿಲ್ಲ’ ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು.

ಇನ್ನು ತಮಿಳುನಾಡು, ತೆಲಂಗಣ, ಪಂಜಾಬ್, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳು ಜಿಎಸ್ ಟಿ ಜಾರಿಗೂ ಮುನ್ನ ಗೋಧಿ ಹಿಟ್ಟು, ಬೇಳೆಕಾಳು, ಗೋಧಿ, ಅಕ್ಕಿ, ಕಡ್ಲೆಹಿಟ್ಟು ಹಾಗೂ ಪನ್ನೀರು ಸೇರಿದಂತೆ ಕೆಲವು ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಲೇ ಬಂದಿವೆ ಎಂಬ ವಿಚಾರವನ್ನು ಈ ಸಂದರ್ಭದಲ್ಲಿ ವಿತ್ತ ಸಚಿವೆ ನೆನಪಿಸಿದರು.

ಇಂಧನ ವಲಯದ ಬಾಕಿ ಪಾವತಿಸಿ
ರಾಜ್ಯ ಸರ್ಕಾರಗಳು ತಮ್ಮ ವಿದ್ಯುತ್ ಉತ್ಪಾದನಾ ಕೇಂದ್ರ ಗಳು ಹಾಗೂ ಡಿಸ್ಕಾಂಗಳಿಗೆ ನೀಡಬೇಕಿರುವ ಬಾಕಿಯನ್ನು ತಕ್ಷಣ ಪಾವತಿಸಬೇಕು. ಇಲ್ಲವಾದ್ರೆ ಅವು ಜನರಿಗೆ ವಿದ್ಯುತ್ ಉತ್ಪಾದನೆ ಮಾಡೋದು ಹೇಗೆ? ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

andolana

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

12 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

13 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

13 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

16 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

16 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

16 hours ago