ಟೋಕಿಯೊ: ಸೋಮವಾರ ಜಪಾನ್ ಕೇಂದ್ರ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಟೋಕಿಯೊ ಸೇರಿದಂತೆ ಇತರೆ ನಗರಗಳಲ್ಲಿ ಕಂಪನದ ಅನುಭವವಾಗಿದೆ.
ಜಪಾನ್ ಕಾಲಮಾನ ಸಂಜೆ 5 ಗಂಟೆ ಸುಮಾರಿಗೆ ಆಗ್ನೇಯ ಭಾಗದ ಟೋಬಾದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಸಂಸ್ಥೆ ತಿಳಿಸಿದೆ. ಸಾರ್ವಜನಿಕ ಸುದ್ದಿವಾಹಿನಿ ಎನ್‌ಎಚ್‌ಕೆ ಪ್ರಕಾರ, ಫುಕುಶಿಮಾ ಪರಮಾಣು ಸ್ಥಾವರಗಳಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ವರದಿ ಆಗಿಲ್ಲ.ಅಮೆರಿಕದ ಭೌಗೋಳಿಕ ಸಮೀಕ್ಷಾ ಸಂಸ್ಥೆಯು ಸಹ 6.1 ತೀವ್ರತೆಯ ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿದೆ. ಭೂಕಂಪನದ ಕೇಂದ್ರದಿಂದ ನೂರಾರು ಕಿ.ಮೀ ದೂರದಲ್ಲಿದ್ದರೂ ಸಹ ಫುಕುಶಿಮಾ ಮತ್ತು ಇಬರಾಕಿ ಪ್ರಾಂತ್ಯಗಳು, ಉತ್ತರ ಟೋಕಿಯೊದಲ್ಲಿ ಭಾರಿ ಪ್ರಮಾಣದ ಅಲುಗಾಡಿದ ಅನುಭವವಾಗಿದೆ. ಆದರೆ, ಈವರೆಗೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಭೂಕಂಪದ ನಂತರ ಶಿಂಕನ್‌ಸೆನ್ ಬುಲೆಟ್ ರೈಲುಗಳು ಮತ್ತು ಟೋಕಿಯೊ ಮೆಟ್ರೋವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿ, ನಂತರ ಪುನರಾರಂಭಿಸಲಾಗಿದೆ.
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…