ಒಡಿಶಾ: ವಾಯುಭಾರ ಕುಸಿತದಿಂದ ಪೂರ್ವ ಕರಾವಳಿ ರಾಜ್ಯಗಳಾದ ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳಕ್ಕೆ ಗುರುವಾರ ( ಅಕ್ಟೋಬರ್ 24 ) ರಾತ್ರಿ ದಾನಾ ಚಂಡಮಾರುತವು ಗಂಟೆಗೆ 110-120 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದೆ.
ಚಂಡಮಾರುತದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ, ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ದಾನಾ ಚಂಡಮಾರುತವು ಗಂಟೆಗೆ 110-120 ಕಿಲೋ ಮೀಟರ್ ವೇಗದಲ್ಲಿ ಒಡಿಸ್ಸಾ ಕರಾವಳಿಗೆ ಅಪ್ಪಳಿಸಿದ್ದು, ಅನೇಕ ಪೂರ್ವ ಕರಾವಳಿ ರಾಜ್ಯಗಳಲ್ಲಿ ಇದರ ಪ್ರಭಾವ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆ ಎಚ್ಚರಿಸಿದೆ.
ದಾನಾ ಚಂಡಮಾರುತದಿಂದ ಒಡಿಸ್ಸಾದ ಪುರಿ, ಪುರ್‌ದೀಪ್, ಧಮ್ರಾ, ಭುವನೇಶ್ವರ್ ಇನ್ನು ಅನೇಕ ಜಿಲ್ಲೆಗಳಲ್ಲಿ ತುಂಬಾ ಮಳೆಯಾಗುತ್ತಿದ್ದು ಭಾರಿ ಭೂ ಕುಸಿತದೊಂದಿಗೆ ಅನೇಕ ನಷ್ಟಗಳು ಸಂಭವಿಸಿದೆ. ಮೀನುಗಾರರಿಗೆ ಎರಡು ದಿನ ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರ ರಕ್ಷಣೆಗಾಗಿ ಒಡಿಸ್ಸಾ ಸರ್ಕಾರವು ಭಾರತೀಯ ಕರಾವಳಿ ಪಡೆ, ಎನ್‌ಡಿಆರ್‌ಎಫ್ ಮತ್ತು ಒಡಿಆರ್‌ಎಫ್ ತಂಡಗಳಿಗೆ ಸೂಚಿಸಿದೆ. ಹಾಗೆಯೇ ಸುಮಾರು 800ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಸಚಿವರು, ಶಾಸಕರು, ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಆಗತ್ಯ ಸಾಮಗ್ರಿಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲೂ ಹಾನಿ
ಡಾನಾ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, 300ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಚಂಡಮಾರುತದ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಸುಮಾರು 2,43,374 ಜನರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಜಾರ್ಖಂಡ್‌ನಲ್ಲಿ ಇದು ಪರಿಣಾಮ ಬೀರಿದ್ದು ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಮಾನ ಇಲಾಖೆ ಸೂಚಿಸಿದೆ.
ಮಾಧ್ಯಮವೊಂದರ ವರದಿ ಪ್ರಕಾರ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ತಮ್ಮ…
ಹದಿನೆಂಟರ ಹರೆಯದ ಭಾರತೀಯ ಕುವರ ಆದರೇನು ವಯಸ್ಸಿನಲ್ಲಿ ಕಿರಿಯ ಇತಿಹಾಸ ಸೃಷ್ಟಿಸಿದೆ ಮಹಾರಾಯ! ಚತುರಮತಿ ಚದುರಂಗದಾಟದಲಿ ವಿಶ್ವ ಚಾಂಪಿಯನ್ ಪಟ್ಟ…
ಮೈಸೂರು-ಚಾಮರಾಜನಗರ ನಡುವೆ ಸಂಚರಿಸುವ ರೈಲಿನಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ನಿತ್ಯ ಈ ರೈಲಿನಲ್ಲಿ ಮಹಿಳೆಯರು,…
ಮಲಯಾಳಂ-ತಮಿಳು-ಕನ್ನಡ-ತೆಲುಗು ಶಬ್ದಕೋಶ’ ಇದೊಂದು ಮಲಯಾಳಂನ ವಿಶಿಷ್ಟ ಶಬ್ದಕೋಶ. ಇದರಲ್ಲಿ ೧೬,೦೦೦ ಮಲಯಾಳಂ ಪದಗಳಿದ್ದು, ಅವುಗಳಿಗೆ ಮಲಯಾಳಂ ಸೇರಿ ಇತರ ಮೂರು…
ನವೀನ್ ಡಿಸೋಜ ಮೋಡಕವಿದ ವಾತಾವರಣ, ಬಿಸಿಲಿನ ಕೊರತೆಯಿಂದ ಸಂಕಷ್ಟ; ಆತಂಕದಲ್ಲೇ ಕೊಯ್ಲು ಪ್ರಕ್ರಿಯೆ ಪ್ರಾರಂಭ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹವಾಮಾನ…