ಹವಾನಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಕ್ಯೂಬಾ ದೇಶದ ವಿದೇಶಾಂಗ ಸಚಿವ ಕಾರ್ಲೋಸ್ ಫರ್ನಾಂಡಿಸ್ ಕೊಸಿಯೊ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಅಮೆರಿಕ ಯಾವುದೇ ದಾಳಿ ನಡೆಸಿದರು ನಾವು ಅದನ್ನು ಸರ್ವಶಕ್ತವಾಗಿ ಎದುರಿಸಲಿದ್ದೇವೆ. ನಾವು ಜಗ್ಗುವರಲ್ಲ. ಇತಿಹಾಸ ಇದನ್ನು ಪದೇ ಪದೇ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ಅಮೆರಿಕದೊಂದಿಗೆ ಗೌರವಯುತ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಆದರೆ, ಅಮೆರಿಕ ನಮ್ಮ ಮೇಲೆ ದಾಳಿ ಮಾಡಬಹುದು ಎಂಬುದನ್ನು ನಾವು ನಂಬಲ್ಲ. ಹಾಗಂತ ದಾಳಿ ವಿಚಾರದಲ್ಲಿ ಯುವುದೇ ರಾಜಿಯೂ ಇಲ್ಲ ಎಂದಿದ್ದಾರೆ.
ಟ್ರಂಪ್ ಹೇಳಿದ್ದೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾದ ಮೇಲೆ ನಾವು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದು, ಜತೆಗೆ ಅವರ ದೇಶದ ಮೇಲೆ ತಕ್ಷಣದ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದರು. ಈ ಬೆನ್ನಲ್ಲೇ ಕ್ಯೂಬಾದಿಂದ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಕ್ಯೂಬಾ ಸರ್ಕಾರವು ಡಾಲರ್ ರಹಿತ ವಹಿವಾಟು ಮತ್ತು ಚೀನಾದೊಂದಿಗಿನ ವ್ಯಾಪರ ಸೇರಿದಂತೆ ಮುಂತಾದ ಕಾರಣಗಳಿಂದ ಅಮೆರಿಕ ಕ್ಯೂಬಾ ದೇಶದ ಮೇಲೆ ತೈಲ ದಿಗ್ಬಂಧನ ವಿಧಿಸಿದೆ. ಈ ಹಿನ್ನೆಲೆ ಕ್ಯಾಬಾ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ ಎಂದು ವರದಿಗಳು ಹೇಳಿವೆ.
ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಗರಿಷ್ಟ ಮೊತ್ತ ೨೦೦ ರೂ. ಅಸಾಧ್ಯವೇ? ಕನ್ನಡ ಚಿತ್ರರಂಗ ಮತ್ತು…
ನಾ.ದಿವಾಕರ ಆದರ್ಶ ಮಾದರಿಗಳೇ ಕಾಣದ ದೇಶದಲ್ಲಿ ಯುವ ಜನಾಂಗಕ್ಕೆ ದಾರಿ ದೀವಿಗೆ ಯಾವುದು? ಇತ್ತೀಚಿನ ಜೆನ್ ಝಿ ಚಳುವಳಿಗಳು ಜಂತರ್…
ನವೀನ್ ಡಿಸೋಜ ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಪೂವಮ್ಮ ಸಾಧನೆ ಮಡಿಕೇರಿ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗು…
ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…
ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…