ವಾಷಿಂಗ್ಟನ್ : ಅಮೆರಿಕ ತನ್ನ ಮೇಲೆ ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಬಲವಾದ ಪ್ರತಿದಾಳಿ ನಡೆಸುತ್ತಿದೆ.
ಈ ಹಿನ್ನಲೆ ಯುದ್ಧದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು, ಈಗ ಅಮೆರಿಕ ತನ್ನ ಮಿಲಿಟರಿ ಕಾರ್ಯತಂತ್ರವನ್ನು ಹೆಚ್ಚು ಆಕ್ರಮಣಕಾರಿಯನ್ನಾಗಿ ಮಾಡಿಕೊಳ್ಳುತ್ತಿದೆ.
ಭೂ ದಾಳಿ, ವಾಯು ದಾಳಿ ಹಾಗೂ ಸಮುದ್ರ ದಾಳಿಗೂ ಸಿದ್ಧವಾಗಿರುವ ಅಮೆರಿಕ, ಇದರ ಭಾಗವಾಗಿ ಅಮೆರಿಕ ತನ್ನ ಬೃಹತ್ ಯುದ್ಧನೌಕೆ ಯುಎಸ್‌ಎಸ್ ಟ್ರಿಪೋಲಿಯನ್ನು ನಿಯೋಜಿಸಿದೆ.
ಹೀಗೆ ಇರಾನ್ ಮೇಲಿನ ದಾಳಿಗೆ ಅಮೆರಿಕ ಬೃಹತ್ ಯುದ್ಧನೌಕೆ ಯುಎಸ್‌ಎಸ್ ಟ್ರಿಪೋಲಿಯನ್ನು ಸಹ ನಿಯೋಜಿಸಿದೆ. ಸುಮಾರು 3,500 ನೌಕಾಪಡೆಗಳೊಂದಿಗೆ ಯುಎಸ್ ಸೆಂಟ್ರಲ್ ಕಮಾಂಡ್ ಪ್ರದೇಶಕ್ಕೆ ಆಗಮಿಸಿದೆ.
ಜತೆಗೆ ಇರಾನ್ ಮೇಲಿನ ಭೂದಾಳಿಗೂ ಅಮೆರಿಕದ ಭೂ ಸೇನೆಯ 17 ಸಾವಿರ ತುಕಡಿಗಳು ಸಜ್ಜಾಗಿವೆ. ಅಮೆರಿಕ ಅಧ್ಯಕ್ಷರ ಅಂತಿಮ ಅನುಮೋದನೆಗೆ ಕಾಯುತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಪ್ರಬಲ ಭೂ ಸೇನೆ ಹೊಂದಿರುವ ಇರಾನ್ ವಿರುದ್ಧ ಭೂದಾಳಿ ಅಪಾಯಕಾರಿ ಎಂಬುದು ಟ್ರಂಪ್ ಆಡಳಿತಕ್ಕೆ ಅರಿವಿದೆ. 6 ಲಕ್ಷ ಯೋಧರು, 3.50 ಲಕ್ಷ ಸೇನಾ ತುಕಡಿಗಳು, 1.90 ಲಕ್ಷ ಐಆರ್‌ಜಿಸಿ ಯೋಧರ ಪಡೆ ಹೊಂದಿರುವ ಇರಾನ್, ಭೂದಾಳಿಗೆ ಪ್ರಬಲ ಪ್ರತಿರೋಧ ತೋರುವ ಸಾಧ್ಯತೆಗಳಿವೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…