ನಾ ದಿವಾಕರ
ಕಾಲ ಕಾಲಕ್ಕೆ, ಐದು ವರ್ಷಗಳಿಗೊಮ್ಮೆ ಅಥವಾ ಪಕ್ಷಾಂತರ, ಆಪರೇಷನ್ ಕಮಲ ಮುಂತಾದ ಕಾರಣಗಳಿಂದ ಶಾಸನ ಸಭೆಯ ಅವಽ ಮುಗಿಯುವ ಮುನ್ನವೇ ನಡೆಯುವ ಚುನಾವಣೆಗಳು ಭಾರತದ ಪ್ರಜಾಪ್ರಭುತ್ವಕ್ಕೆ ಪುಷ್ಟಿ ನೀಡುವಂತಹ ಸಾಂವಿಧಾನಿಕ ಪ್ರಕ್ರಿಯೆ. ಚುನಾವಣಾ ಆಯೋಗ ತನ್ನ ನೂತನ ಅವತಾರದಲ್ಲಿ ಹಿಂದಿನ ಹಲವಾರು ಲಕ್ಷಣಗಳನ್ನು ಕಳೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್‌ರವರಂತಹವರು ಬಯಸಿದಂತಹ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಚುನಾವಣಾ ಆಯೋಗ ಇಂದು ಕಾಣುತ್ತಿಲ್ಲ.
ಚುನಾವಣೆಗಳ ಮೂಲಕ ನಿಷ್ಕರ್ಷೆಯಾಗುವ ಆಡಳಿತ ಪಕ್ಷ -ವಿರೋಧ ಪಕ್ಷ ಅಥವಾ ಗುಂಪುಗಳಿಗೆ ಸಮಾನ ಹೊಣೆಗಾರಿಕೆ, ಮಾನ್ಯತೆ ಹಾಗೂ ವಿಶ್ವಾಸಾರ್ಹತೆ ಇರಬೇಕಾದ್ದು ಅತ್ಯವಶ್ಯ. ಆಡಳಿತಾರೂಢ ಪಕ್ಷಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿರುತ್ತದೆ. ಆಡಳಿತಾರೂಢ ಪಕ್ಷಗಳೂ ವಿರೋಧ ಪಕ್ಷಗಳನ್ನು ಅಕ್ಷರಶಃ ವಿರೋಽ ನೆಲೆಯಲ್ಲೇ ಕಾಣದೆ ಉತ್ತಮ ಆಡಳಿತ ನೀಡುವಲ್ಲಿ ಸಹಭಾಗಿತ್ವ ವಹಿಸುವ ಪಕ್ಷಗಳೆಂದು ಮಾನ್ಯತೆ ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವುದೇ ದೇಶದ್ರೋಹಕ್ಕೆ ಸಮಾನ ಎಂಬಂತಹ ವಾತಾವರಣ ಸೃಷ್ಟಿಯಾಗುತ್ತಿದ್ದು, ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸುವ ಪರಂಪರೆ ಅತಿರೇಕಕ್ಕೆ ಹೋಗುತ್ತಿದೆ.
1970ರ ನಂತರದ ರಾಜಕಾರಣದಲ್ಲಿ ಆರಂಭವಾದ ಈ ಪ್ರವೃತ್ತಿಗೆ ಈಗ ಪ್ರಜ್ಞಾವಂತ ಸಮಾಜದ ನಡುವೆಯೂ ಮೌನ ಸಮ್ಮತಿ ದೊರೆತಿರುವುದರಿಂದ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಪ್ರಹಾರ ನಡೆಸುವುದು ಸುಲಭವೂ ಆಗಿದೆ. ರಾಜಕೀಯ ವಿರೋಧಕ್ಕೂ, ರಾಜಕೀಯ ದ್ವೇಷಕ್ಕೂ ಇರುವ ಅಂತರವೂ ಕಡಿಮೆಯಾಗುತ್ತಿರುವುದನ್ನು ಇತ್ತೀಚಿನ ಬೆಳವಣಿಗೆಗಳಲ್ಲಿ ಗಮನಿಸಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಆಧಾರ ಸ್ತಂಭಗಳಾಗಿಯೇ ಪರಿಗಣಿಸಲ್ಪಟ್ಟಿವೆ. ಸಾಮಾನ್ಯವಾಗಿ ಮಾಧ್ಯಮವನ್ನು ನಾಲ್ಕನೆಯ ಸ್ತಂಭ ಎಂದು ಭಾವಿಸುವುದು ಸಹಜವೇ ಆದರೂ, ಮೂಲತಃ ನಾಲ್ಕನೆಯ ಸ್ತಂಭವಾಗಿ ಕಾರ್ಯನಿರ್ವಹಿಸುವುದು ಸಂವಿಧಾನದ ಅಡಿಯಲ್ಲೇ ಸ್ಥಾಪಿತವಾಗಿರುವ ಸಾರ್ವಜನಿಕ ಸಂಸ್ಥೆಗಳು. ದುರದೃಷ್ಟವಶಾತ್ ಈ ಸಾರ್ವಜನಿಕ ಸಂಸ್ಥೆಗಳು ಕ್ರಮೇಣ ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು, ಅಽಕಾರಾರೂಢ ಸರ್ಕಾರಗಳ ಕೈಗೊಂಬೆಗಳಂತೆ ಕಾರ್ಯ ನಿರ್ವಹಿಸುತ್ತವೆ. ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಮುಂತಾದ ಬಿಜೆಪಿ ನಾಯಕರು, ಸಿಬಿಐ ಮತ್ತಿತರ ಸಂಸ್ಥೆಗಳನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ, ಸಿಬಿಐ ಸರ್ಕಾರದ ಕೈಗೊಂಬೆಯಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದುದನ್ನು ಇಂದು ಸ್ಮರಿಸಲೇಬೇಕಿದೆ.
ಅಽಕೃತ ಅಂಕಿ-ಅಂಶಗಳ ಪ್ರಕಾರ 2014-ರಿಂದ222ರವರೆಗಿನ ಎನ್‌ಡಿಎ ಆಳ್ವಿಕೆಯಲ್ಲಿ ಜಾರಿ ನಿರ್ದೇಶನಾಲಯವು ನಡೆಸಿರುವ ದಾಳಿಯ ಸಂಖ್ಯೆ ೨೭ ಪಟ್ಟು ಹೆಚ್ಚಾಗಿದೆ. 2004 ರಿಂದ 2014ರ ವರೆಗಿನ ಅವಽಯಲ್ಲಿ 112 ದಾಳಿಗಳನ್ನು ನಡೆಸಿದ್ದರೆ, ಕಳೆದ ಎಂಟು ವರ್ಷಗಳಲ್ಲಿ ೩೦೧೦ ದಾಳಿಗಳನ್ನು ನಡೆಸಲಾಗಿದೆ. ಪಿಎಮ್‌ಎಲ್‌ಎ ಕಾಯ್ದೆಯಡಿ 2011 ರಿಂದ 2020ರ ವರೆಗಿನ ಅವಽಯಲ್ಲಿ 1569 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕೇವಲ ಒಂಬತ್ತು ಪ್ರಕರಣಗಳಲ್ಲಿ ಶಿಕ್ಷೆ ನೀಡಲಾಗಿದೆ. ಎನ್‌ಡಿಎ ಆಳ್ವಿಕೆಯ ಎಂಟು ವರ್ಷಗಳ ಅವಽಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದಾಳಿಗೆ ತುತ್ತಾದವರ ಪೈಕಿ ಶೇ.೯೫ರಷ್ಟು ವಿರೋಧ ಪಕ್ಷದವರೇ ಇದ್ದಾರೆ. ಯುಪಿಎ ಅವಧಿಯಲ್ಲಿ ಶೇ.54ರಷ್ಟು ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಎನ್‌ಡಿಎ ಅವಽಯಲ್ಲಿ ಜಾರಿ ನಿರ್ದೇಶನಾಲಯದ ಜಾಲಕ್ಕೆ ಸಿಲುಕಿದ 121 ಪ್ರಮುಖ ರಾಜಕಾರಣಿಗಳ ಪೈಕಿ 115 ವಿರೋಧ ಪಕ್ಷದವರಿದ್ದಾರೆ. ಯುಪಿಎ ಅವಽಯಲ್ಲಿ 26 ಆರೋಪಿಗಳ ಪೈಕಿ 14 ವಿರೋಧ ಪಕ್ಷದ ನಾಯಕರಿದ್ದರು. ಒಟ್ಟಾರೆಯಾಗಿ ನೋಡಿದರೆ 2004-2022ರ ವರೆಗಿನ ಅವಽಯ ಯುಪಿಎ-ಎನ್‌ಡಿಎ ಆಡಳಿತಾವಽಯಲ್ಲಿ ಸಿಬಿಐ ಮತ್ತಿತರ ಸಂಸ್ಥೆಗಳ ದಾಳಿಗೆ ಸಿಲುಕಿದ ೧೪೭ ರಾಜಕೀಯ ನಾಯಕರ ಪೈಕಿ ಶೇ.೮೫ರಷ್ಟು ವಿರೋಧ ಪಕ್ಷದವರೇ ಆಗಿದ್ದಾರೆ. (ಇಂಡಿಯನ್ ಎಕ್ಸ್‌ಪ್ರೆಸ್, ೨೧ ಸೆಪ್ಟೆಂಬರ್ ೨೦೨೨).
ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಸಾಂವಿಧಾನಿಕ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದು ಅತ್ಯವಶ್ಯ. ಮತ ಚಲಾಯಿಸುವ ಪ್ರತಿಯೊಬ್ಬ ಪ್ರಜೆಗೂ ಈ ಕಾಳಜಿ ಇರುವುದು ವರ್ತಮಾನದ ತುರ್ತು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…