ಮೈಸೂರು ನಗರ

SIR ಮೂಲಕ ರಾಜ್ಯದ 86 ಲಕ್ಷ ಮತದಾರರ ಹಕ್ಕಿಗೆ ಕನ್ನ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪ

ಮೈಸೂರು: SIR ಮೂಲಕ ರಾಜ್ಯದ 86 ಲಕ್ಷ ಮತದಾರರ ಹಕ್ಕಿಗೆ ಕನ್ನ ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ನಂತರ ಕರ್ನಾಟಕವೇ ಟಾರ್ಗೆಟ್. ರಾಜ್ಯದಲ್ಲಿ 15 ದಿನಗಳ ಹಿಂದೆ SIR ಪ್ರಕ್ರಿಯೆ ಮುಗಿಸಿದ್ದಾರೆ. ರಾಜ್ಯದಲ್ಲಿ 5.5 ಕೋಟಿ ಮತದಾರರ ಸಂಖ್ಯೆ ಇದೆ. SIR ಪ್ರಕಾರ 15% ಜನರನ್ನ ಮ್ಯಾಪಿಂಗ್ ಮಾಡಿಲ್ಲ. ಅಂದರೆ 80 ಲಕ್ಷ ಮತದಾರರನ್ನ ಹೊರಗಿಡುವ ಕೆಲಸ ಮಾಡಿದ್ದಾರೆ. ನನ್ನ ಹೆಸರು ಮ್ಯಾಪಿಂಗ್ ಆಗಲಿಲ್ಲ ಎಂದಾದರೆ ನನ್ನ ಮಕ್ಕಳ ಹೆಸರು ಸೇರ್ಪಡೆ ಆಗಲ್ಲ. ಇದು ಬಿಜೆಪಿ ಎಲೆಕ್ಷನ್ ಮಾಸ್ಟರ್ ಗಳ ಕೈವಾಡ. SIR ಮೂಲಕವೇ ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ, ಬಿಹಾರ, ಪ. ಬಂಗಾಳಗಳಲ್ಲಿ ಮತಗಳನ್ನು ಲೂಟಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 27,99,744 ಮಂದಿ ಮತದಾರರಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71,512 ಮತದಾರರನ್ನು ತೆಗೆದಿದ್ದಾರೆ. ನರಸಿಂಹರಾಜ ಕ್ಷೇತ್ರ 59,749 ಮತದಾರರನ್ನು ಕಿತ್ತು ಹಾಕಿದ್ದಾರೆ. ಈ ಮೂಲಕ 2028ರ ಚುನಾವಣೆಗೆ ಬಿಜೆಪಿ ತಯಾರು ಮಾಡಿಕೊಳ್ಳುತ್ತಿದ್ದಾರೆ. SIR ಅಸ್ತ್ರ ಬಳಸಿಕೊಂಡು 86 ಲಕ್ಷ ಮತದಾರರನ್ನು ರಾಜ್ಯದಲ್ಲಿ ಕಿತ್ತು ಹಾಕಿದ್ದಾರೆ. ಮೈಸೂರಿನ ಎನ್ ಆರ್ ನಲ್ಲಿ 43 ಸಾವಿರ ಮುಸ್ಲಿಂ ಮತದಾರರನ್ನು ಕಿತ್ತು ಹಾಕಿದ್ದಾರೆ. ಮುಂದೆ ತನ್ವಿರ್ ಸೇಠ್ ಹೇಗೆ ಚುನಾವಣೆ ಎದುರಿಸಬೇಕು? ಮತದ ಹಕ್ಕಿನಿಂದ ತೀರಸ್ಕೃತರಾದವರ ಬಳಿ ದಾಖಲೆ ಸಲ್ಲಿಸಲು ಹೇಳಿದ್ದಾರೆ. ತಾತ, ಮುತ್ತಾತನ ಮಾಹಿತಿಯ ದಾಖಲೆಗಳನ್ನು ಹೇಗೆ ಕೊಡಲು ಸಾಧ್ಯ? ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುತೇಕ 86 ಲಕ್ಷ ಮಂದಿ ಮತದಾರರು ಮತದಾನದಿಂದ ದೂರವಿಡುವ ಸಂಚು ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಚಿನ್ನ ಖರೀದಿಸಬೇಡಿ ಎಂದು ಹೇಳಿ ಹೋಗಿದ್ದಾರೆ. ವಿದೇಶಕ್ಕೆ ಹೋಗಬೇಡಿ ಎಂದಿದ್ದಾರೆ. ಪೆಟ್ರೋಲ್ ಡೀಸೆಲ್ ಮಿತವಾಗಿ ಬಳಸಿ ಎಂದಿದ್ದಾರೆ.
ಇದು ದೇಶದ ಒಬ್ಬ ಪ್ರಧಾನಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಕನಾಮಿಕಲ್ ಎಮರ್ಜೆನ್ಸಿ ಇದೆ ಎಂದು ಮೋದಿ ಹೇಳಿ ಹೋಗಿದ್ದಾರೆ. ಗ್ಯಾಸ್ ಬೆಲೆ ಏರಿಕೆ ಹಾಗೂ ಇತರೆ ವಿಷಯಗಳು ದೇಶದಲ್ಲಿ ಚರ್ಚೆಗೆ ಬರುತ್ತಿಲ್ಲ. ಸಿದ್ದರಾಮಯ್ಯ ಕೂತರು, ನಿಂತರು ದಿನಪೂರ್ತಿ ಡಿಬೇಟ್ ಮಾಡುತ್ತಾರೆ. ಚಿನ್ನ ಖರೀದಿ ಮಾಡಬೇಡಿ ಎಂದಿರುವ ಬಗ್ಗೆ ಜೆಡಿಎಸ್ ಎಂ ಎಲ್ ಸಿ ಶರವಣ ಯಾಕೆ ಸೈಲೆಂಟ್ ಆಗಿದ್ದಾರೆ ಮಾತನಾಡಬೇಕಲ್ವಾ? ಎಂದು ಪ್ರಶ್ನೆ ಮಾಡಿದರು.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

9 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

10 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

12 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

15 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

20 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

28 mins ago