ಮೈಸೂರು ನಗರ

ಬಸವಣ್ಣನವರ ತತ್ವದಲ್ಲಿ ಲಿಂಗಭೇದ, ಜಾತಿಭೇದ, ಅಸಮಾನತೆ ಇರಲಿಲ್ಲ ; ಶಾಸಕ ತನ್ವೀರ್‌ ಸೇಠ್‌

ಮೈಸೂರು : 12ನೇ ಶತಮಾನದಲ್ಲಿ ಮಾನವಕುಲಕ್ಕೆ ಮಾರ್ಗದರ್ಶಕರಾಗಿದ್ದ ಬಸವಣ್ಣನವರ ತತ್ವಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ದೂರ ದೃಷ್ಟಿಯ ಆಲೋಚನೆಗಳು ಮತ್ತು ಸಮಾಜವನ್ನು ಯಾವ ರೀತಿ ಕಟ್ಟಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದುವಂತಹ ಬಸವಣ್ಣನವರ ತತ್ವದಲ್ಲಿ ಲಿಂಗಭೇದ ಜಾತಿಭೇದ ಅಸಮಾನತೆ ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಒಂದು ಪ್ರವೃತ್ತಿ ಬಸವಣ್ಣವರಲ್ಲಿ ಇತ್ತು ಎಂದು ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ತಿಳಿಸಿದರು.

ಕರ್ನಾಟಕ ಕಲಾಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ತತ್ವ ಆದರ್ಶಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾವ ಜಾತಿ ಯಾವ ಅಂತಸ್ತು ಎನ್ನುವ ಭೇದವಿಲ್ಲದೆ ಅವರು ಜೀವಿಸಿದರು ಎಂದು ತಿಳಿಸಿದರು.

ದಾಸರು ಮತ್ತು ಶರಣರು ನಮಗೆ ನೀಡಿರುವ ಒಳ್ಳೆಯ ಉಪಯುಕ್ತವಾದಂತಹ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಹೇಳಿರುವಂತಹ ವಚನಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಕೇವಲ ಇವ ಯಾರವಾ ಇವ ಯಾರವ ಇವ ನಮ್ಮವ ನಮ್ಮವ ಎನ್ನುವ ವಚನಗಳಿಗೆ ಸೀಮಿತವಾಗದೆ, ಎಲ್ಲರನ್ನೂ ಅಪ್ಪಿಕೊಂಡು ಎಲ್ಲರನ್ನೂ ಜೊತೆಗೂಡಿಸಿ ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕಬೇಕು ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ಮಾತನಾಡಿ, ಬಸವಣ್ಣನವರು ಮಾಡಿದಂತಹ ಅನೇಕ ಹೋರಾಟಗಳು, ಶ್ರಮಗಳು ಕಾರಣಕ್ಕೆ ಲಿಂಗ ಸಮಾಜ ಬಹಳ ಹಿಂದೆಯೇ ಸಮಾಜದಲ್ಲಿ ಇದ್ದ ಶೋಷಣೆಯ ವಿರುದ್ಧ ಧ್ವನಿಯನ್ನು ಎತ್ತಿತು. ಈಗಾಗಲೇ ಅವರೇ ಹೇಳಿರುವಂತೆ ಸ್ವಂತ ಸಹೋದರಿಗೆ ಲಿಂಗಧಾರಣೆಯನ್ನು ಮಾಡುವುದರ ಮುಖಾಂತರ ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂಬುವ ನಿಟ್ಟಿನಲ್ಲಿ ಬಸವಣ್ಣನವರ ಪ್ರಯತ್ನ ಸಾಕಷ್ಟು ಇದೆ ಎಂದು ಹೇಳಿದರು.

ಇವತ್ತು ವಚನಗಳು ಎಂದರೆ ಸಮಾಜದಲ್ಲಿ ಅಂಕುಡೊಂಕನ್ನು ತುಂಬಾ ಸರಳ ಭಾಷೆಯಲ್ಲಿ ಸರಳವಾದ ಕನ್ನಡದಲ್ಲಿ ನಮ್ಮೆಲ್ಲರಿಗೂ ಅರ್ಥವಾಗುವಂತ ರೀತಿಯಲ್ಲಿ ಬಸವಣ್ಣನವರು ವಚನಗಳು ತಿಳಿಸುತ್ತವೆ. ಇವರ ವಚನಗಳು ನಮಗೆ ಅನೇಕ ಸಂದರ್ಭದಲ್ಲಿ ಪ್ರೇರಣೆ ನೀಡುತ್ತವೆ ಎಂದರು.

ವಿಧಾನ ಪರಿಷತ್ತಿನ ಶಾಸಕರಾದ ಡಿ. ತಿಮ್ಮಯ್ಯ ಮಾತನಾಡಿ, ಬಸವಣ್ಣನವರು ಈ ರಾಷ್ಟ್ರಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಒಬ್ಬ ಮಹಾನ್ ಚೇತನ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ ವ್ಯಕ್ತಿ. ಸಮಾನತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ತಿಳಿಸಿಕೊಟ್ಟರು. ಸುಮಾರು 800 ವರ್ಷಗಳ ಹಿಂದೆ ಇದ್ದಂತಹ ಜಾತಿ ಪದ್ಧತಿಯನ್ನು ತೊಲಗಿಸಲು ಪಣತೊಟ್ಟು ಹೋರಾಡಿದವರು ಬಸವಣ್ಣನವರು ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

1 hour ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

2 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

2 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

2 hours ago