ಮೈಸೂರು ನಗರ

ಪ್ರಯತ್ನ ಬಿಡದೆ ಶ್ರಮ ಪಟ್ಟರೆ ಯಶಸ್ಸು ಸಾಧ್ಯ; ನವೀನ್‌ ಕುಮಾರ್‌

ಮೈಸೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯತ್ನ ಬಿಡದೆ ಶ್ರಮ ಪಟ್ಟರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎಸ್.ಕೆ. ನವೀನ್‌ಕುಮಾರ್ ಹೇಳಿದರು.

ಇಂದು ನಗರದ ಜ್ಞಾನಬುತ್ತಿ ಸಂಸ್ಥೆವತಿಯಿಂದ ಆಯೋಜಿಸಿದ್ದ ಪಿಸಿ-ಪಿ.ಎಸ್.ಐ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಮಾಡಿ ಮಾತನಾಡಿದರು.

ನಿಮ್ಮಲ್ಲಿ ಬಹುತೇಕ ದಲಿತ, ಹಿಂದುಳಿದ, ಗ್ರಾಮೀಣ ಮತ್ತು ನಗರದ ಬಡ-ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರಾಗಿದ್ದೀರಿ. ಹಾಗಾಗಿ ನಿಮ್ಮ ಕಣ್ಣುಗಳಲ್ಲಿ “ಬೆಂಕಿ ಮತ್ತು ಹಸಿವು” ನನಗೆ ಕಾಣಿಸುತ್ತಿದೆ. ನಾನು ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ಓದುತ್ತಿದ್ದಾಗ ಈಗ ನಿಮಗಿರುವ ಯಾವುದೇ ಸೌಕರ್ಯಗಳು ನನ್ನ ತಲೆಮಾರಿನವರಿಗೆ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದೇವೆ ಎಂದರೆ, ಈಗ ನಿಮಗಿದು ಆಶ್ಚರ್ಯ ಎನಿಸಬಹದು. ಆದರೆ ಅದು ಸತ್ಯ. ಸೋಲಿಗೆ ಅಂಜದಿರಿ. ಬಿದ್ದವನು ಇಂದಲ್ಲ ನಾಳೆ ಎದ್ದೇ ಏಳುತ್ತಾನೆ. ಭಯಬಿಟ್ಟಾಗಲೇ ನಿಜವಾದ ಬದುಕು ಆರಂಭವಾಗುವುದು. ಆತ್ಮವಿಶ್ವಾಸ ನಿಮ್ಮನ್ನು ಎಷ್ಟು ಎತ್ತಕ್ಕೆ ಬೇಕಾದರೂ ತೆಗೆದುಕೊಂಡು ಹೋಗುವ ಶಕ್ತಿ ಅದಕ್ಕಿದೆ ಎಂದರು.

ದಾನಗಳಲ್ಲೇ ಅನ್ನ ಮತ್ತು ಅಕ್ಷರ ದಾನ ಬಹುದೊಡ್ಡದು. ನಾಡಿನ ಹೆಸರಾಂತ ಸಿದ್ದಗಂಗಾ ಮಠ ಹೇಗೆ ನಿಸ್ವಾರ್ಥವಾಗಿ ಅನ್ನ ಮತ್ತು ಅಕ್ಷರ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆಯೋ ಅದೇ ಹಾದಿಯಲ್ಲಿ ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ನಡೆಯುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಜ್ಞಾನಬುತ್ತಿಯಿಂದ ನಿಮ್ಮ ಬದುಕಿನ ಬಾಳ ಬುತ್ತಿ ತುಂಬಲಿ. ನಿಮ್ಮಿಂದ ನಾಳಿನ ಸಮಾಜ ಬಹುನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದನ್ನು ಹುಸಿಗೊಳಿಸಬೇಡಿ. ಹಗಲು ರಾತ್ರಿ ಕಷ್ಟಪಡಲು ಸಿದ್ಧರಾದರೆ ರೆಡ್‌ಕಾರ್ಪೆಟ್‌ಸ್ವಾಗತ ನಿಮಗಾಗಿ ಕಾದಿರುತ್ತದೆ. ವಿದ್ಯೆಯೊಂದಿಗೆ ವಿನಯ ಮರೆಯಬೇಡಿ. ಮೊಬೈಲ್‌ಬಿಡಿ, ಪುಸ್ತಕ ಹಿಡಿದು ಸಾಧನೆಯತ್ತ ದಾಪುಗಾಲು ಹಾಕಿ ಎಂದರು. ಸಾಧ್ಯವಾದರೆ ಸಹಾಯ ಮಾಡಿ ಆದರೆ ತೊಂದರೆ ಮಾತ್ರ ಕೊಡಬೇಡಿ ಎಂದರು. ದೇಶ ಕಾಯುವ ಸೈನಿಕರಷ್ಟೇ ದೇಶದೊಳಗಿನ ಪೊಲೀಸರ ಸೇವೆ ಸರಿಸಮಾನವಾದುದು ಎಂದರು.

ಲಕ್ಷ್ಮಿಪುರಂ ಪೊಲೀಸ್‌ಠಾಣೆಯ ಇನ್‌ಸ್ಪೆಕ್ಟರ್‌ಆದ ರವಿಶಂಕರ್‌ಮಾತನಾಡಿ, ನಿಮಗೇನು ಬೇಕು ಎಂದು ಕೇಳಿಕೊಳ್ಳಿ, ಅದರಲ್ಲಿ ನಂಬಿಕೆಯಿಡಿ ಮತ್ತು ಸಾಧಿಸಿದ ನಂತರ ಅದಕ್ಕೆ ಕೃತಜ್ಞತೆ ಸಲ್ಲಿಸಿ. ಇದೇ ಯಶಸ್ಸಿನ ಗುಟ್ಟು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಹಕಾರಿಗಳಾದ ವೈ.ಎನ್.‌ಶಂಕರೇಗೌಡ ಅವರು ಮಾತನಾಡಿ ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದರು. ಸಮಾಜದಲ್ಲಿ ಆರಕ್ಷಕ ವೃತ್ತಿಗೆ ತನ್ನದೇ ಆದ ಮಹತ್ವ ಮತ್ತು ಜವಾಬ್ದಾರಿಯಿದೆ. ಖಾಕಿ ಧರಿಸುವ ಅವಕಾಶ ನಿಮಗೆ ಲಭಿಸಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್.‌ಬಾಲಕೃಷ್ಣ, ಪ್ರೊ. ಕೃ.ಪ. ಗಣೇಶ, ಡಾ. ಎಸ್.‌ಬಿ.ಎಂ. ಪ್ರಸನ್ನ, , ಪ್ರೊ. ಹೊನ್ನಯ್ಯ, ಪ್ರೊ. ಜಯಪ್ರಕಾಶ್‌, ಪ್ರೊ. ಈ. ಶಿವಪ್ರಸಾದ್‌, ಕೆ.ವೈ. ನಾಗೇಂದ್ರ, ಡಾ. ಕೃಷ್ಣಕುಮಾರ್‌, ಯು.ಎಂ. ಶರದರಾವ್‌, ರಾಜೀವ್‌ಶರ್ಮಾ, ಸಿ.ಕೆ. ಕಿರಣ್‌ಕೌಶಿಕ್‌ ಇದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

4 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

4 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

10 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

10 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

10 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

10 hours ago