ಮೈಸೂರು ನಗರ

ಶಕ್ತಿಧಾಮ ಆಶ್ರಮದ ಮಕ್ಕಳ ಜೊತೆ ಸಂಜು ವೆಡ್ಸ್‌ ಗೀತಾ-2 ಚಿತ್ರ ವೀಕ್ಷಿಸಿದ ಶಿವರಾಜ್‌ ಕುಮಾರ್‌

ಮೈಸೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರಿಂದು ಶಕ್ತಿಧಾಮ ಆಶ್ರಮದ ಮಕ್ಕಳ ಜೊತೆ ಸಂಜು ವೆಡ್ಸ್‌ ಗೀತಾ-2 ಸಿನಿಮಾ ವೀಕ್ಷಿಸಿ ಖುಷಿಪಟ್ಟರು.

ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ಪತ್ನಿ ಗೀತಾ ಜೊತೆ ಶಿವರಾಜ್‌ ಕುಮಾರ್‌ ಅವರು ಸಂಜು ವೆಡ್ಸ್‌ ಗೀತಾ-2 ಸಿನಿಮಾ ವೀಕ್ಷಿಸಿದರು.

ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್‌ ಕುಮಾರ್‌ ಅವರು, ಶಕ್ತಿಧಾಮದ ಮಕ್ಕಳ ಜೊತೆ ಸಿನಿಮಾ ನೋಡಿ ಖುಷಿ ಆಗಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಗೀತಾ ಹೆಸರಲ್ಲಿ ಒಂದು ಶಕ್ತಿಯಿದೆ. ಈ ಹಿಂದೆ ಅನೇಕ ಸಿನಿಮಾಗಳು ಗೀತಾ ಹೆಸರಿನಲ್ಲಿ ಬಂದು ಹಿಟ್ ಆಗಿವೆ. ಈ ಸಿನಿಮಾವು ಹಿಟ್ ಆಗುತ್ತದೆ. ನಾಗಶೇಖರ್ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನನಗೂ ಒಂದು ಸಿನಿಮಾ ಡೈರೆಕ್ಟ್ ಮಾಡ್ತೀನಿ ಎಂದು ಈ ಹಿಂದೆ ಹೇಳಿದ್ದರು. ಅದಕ್ಕಾಗಿ ನಾನು ಕೂಡ ಕಾಯ್ತಾ ಇದ್ದೀನಿ ಎಂದರು.

ಇನ್ನು ಮಲ್ಟಿಫ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗೆ ಸ್ಕ್ರೀನ್ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲದಕ್ಕೂ ನಮ್ಮನ್ನ ಕೇಳಿದ್ರೆ ಹೇಗೆ? ನೀವು ಕೂಡ ನಮ್ಮ ಜೊತೆ ಕೈಜೋಡಿಸಿ
ಮಾಧ್ಯಮದವರು ನಮ್ಮ ಜೊತೆ ಕೈಜೋಡಿಸಿ. ಯಾಕೆ ಕನ್ನಡ ಸಿನಿಮಾಗೆ ಸ್ಕ್ರೀನ್ ಸಿಗಲ್ಲ ನೋಡೋಣ ಎಂದರು.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

21 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

22 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

22 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

22 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

22 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

22 hours ago