ಮೈಸೂರು ನಗರ

ಉತ್ಪನ್ನಗಳಲ್ಲಿ ಗುಣಮಟ್ಟ ಮುಖ್ಯ: ಡಾ.ಪಿ.ಶಿವರಾಜು

 

ಮೈಸೂರು: ನಾವು ಯಾವುದೇ ಉತ್ಪನಗಳನ್ನು ಮಾರಾಟ ಮಾಡಬೇಕಾದರೆ ಗುಣಮಟ್ಟ ಎಂಬುದು ಬಹಳ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ.ಶಿವರಾಜು ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಮಾನಕ ಬ್ಯೂರೋ ಬೆಂಗಳೂರು ಶಾಖಾ ಕಾರ್ಯಾಲಯ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಭಾರತ ಸರ್ಕಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ.ಎಲ್.ಓ ಸಂವೇಧನಶೀಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಗಾರಾದ ಉದ್ದೇಶ ನಾವು ಉತ್ಪನ್ನಗಳನ್ನು ಖರೀದಿ ಮಾಡಬೇಕಾದರೆ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದೆಯೇ ಅಥವಾ ಕಳಪೆಯಿಂದ ಕೂಡಿದೆಯೇ ಅದನ್ನು ನಾವು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ತಿಳಿಸುವುದಾಗಿದೆ. ಈ ಕಾರ್ಯಗಾರದ ಸದುಪಯೋಗವನ್ನು ಪ್ರತಿಯೊಂದು ಇಲಾಖೆಯವರು ಪಡೆದುಕೊಂಡು ನಿಮ್ಮ ಇಲಾಖೆಯವರಿಗೂ ಇದೇ ರೀತಿಯಾದಂತಹ ಮಾಹಿತಿಯನ್ನು ತಿಳಿಸಬೇಕು ಎಂದು ತಿಳಿಸಿದರು.

ಸರ್ಕಾರ ಕುಡಿಯುವ ನೀರಿನಿಂದ ಹಿಡಿದು ಚಿನ್ನದ ಹೂಡಿಕೆಯವರೆಗೂ ಪ್ರತಿಯೊಂದು ಮಾನದಂಡಗಳನ್ನು ವಿಧಿಸಿರುವುದರಿಂದ ಯಾವುದೇ ಉತ್ಪನವನ್ನು ಏನಾದರೂ ಮಾಡಬಹುದು ಎಂಬ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲ ಎಂದರು.

ಕೆಲವರು ನಕಲಿ ಉತ್ಪನ್ನಗಳಿಗೆ ಸರ್ಕಾರದ ಮಾರ್ಕ್‌ ಅಳವಡಿಸಿ ಮಾರಾಟ ಮಾಡುತ್ತಿದ್ದಾರೆ. ಅಂತಹವುಗಳನ್ನು ಹೇಗೆ ಕಂಡು ಹಿಡಿಯುವುದು ಎಂಬುದು ಸಹ ಈ ಕಾರ್ಯಾಗಾರದಲ್ಲಿ ತಿಳಿಯುತ್ತದೆ. ಈ ಕಾರ್ಯಗಾರವು ಆಸಕ್ತಿದಾಯಕವಾದಂತಹ ವಿಷಯವನ್ನು ತಿಳಿಸುವುದರ ಜೊತೆಗೆ ಜ್ಞಾನವನ್ನು ನೀಡುತ್ತದೆ ಎಂದು ಹೇಳಿದರು.

ಭಾರತೀಯ ಮಾನಕ ಬ್ಯೂರೋ ನಿರ್ದೇಶಕರಾದ ನರೇಂದ್ರ ರೆಡ್ಡಿ ಬೀಸು ಅವರು ಮಾತನಾಡಿ, ಗ್ರಾಹಕರು ಪ್ರತಿಯೊಂದು ಉತ್ಪನ್ನಗಳನ್ನು ಖರೀದಿಸುವುದರಿಂದ ಉತ್ಪನ್ನಗಳ ಮೇಲೆ ಹೆಚ್ಚು ಗಮನ ವಹಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಉತ್ಪನ್ನಗಳಿಗೂ ಸರ್ಕಾರದಿಂದ ಅದರದೇ ಆದಂತಹ ಮಾರ್ಕ್‌ಗಳು ಇರುವುದರಿಂದ ಪ್ರತಿ ಇಲಾಖೆಯು ಅದರ ಬಗ್ಗೆ ಹೆಚ್ಚು ಗಮನವಹಿಸಿ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದರು.

ಪ್ರತಿಯೊಂದು ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಉತ್ಪನ್ನಗಳ ವೆಬ್‌ ಸೈಟ್: www.bis.gov.in ಹಾಗೂ ಇ- ಮೇಲ್ bnbo@bis.gov.in ನ್ನು ಸಂಪರ್ಕಿಸಬಹುದು ಎಂದು ಕಾರ್ಯಗಾರದಲ್ಲಿ ಭಾಗಿಯಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಗಾರದಲ್ಲಿ ಭಾರತೀಯ ಮಾನಕ ಬ್ಯೂರೋ ಸದಸ್ಯರಾದ ಶಿವಕುಮಾರ್. ಎಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಾಗೂರು ಅಣೆಕಟ್ಟೆಗೆ ನೀರು ತುಂಬಿಸಿ

ನಂಜನಗೂಡು ತಾಲ್ಲೂಕು ಬಾಗೂರು ಅಣೆಕಟ್ಟೆ ದೊಡ್ಡ ಅಣೆಕಟ್ಟೆಯಾಗಿದೆ. ಹಿಂದೆ ಅನೇಕ ಹಳ್ಳಿಗಳಿಗೆ ಕೋಡಿ ತುಂಬಿ ಯಥೇಚ್ಛವಾಗಿ ಇದರಿಂದ ನೀರು ಹರಿದು…

2 hours ago

ಓದುಗರ ಪತ್ರ: ಈ ‘ಕೆಲಸ’ ಮುಂಚೆಯೇ ಆಗಬೇಕಿತ್ತು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ…

2 hours ago

ಓದುಗರ ಪತ್ರ: ದಂಡ ವಸೂಲಿಯೇ ಪೊಲೀಸರ ಆದ್ಯತೆ ಆಗಬಾರದು

ಸಾಂಸ್ಕೃತಿಕ ನಗರಿ, ಅರೆಮನೆ ನಗರಿ, ಸ್ವಚ್ಛನಗರಿ, ಹಿರಿಯ ನಾಗರಿಕರ ಸ್ವರ್ಗ ಎಂದೆಲ್ಲಾ ಹೆಸರುವಾಸಿಯಾಗಿರುವ ಮೈಸೂರಿನಲ್ಲೂ ಈಗಿನ ಕಾನೂನು ವ್ಯವಸ್ಥೆಯ ಬಗ್ಗೆ…

2 hours ago

ವ್ಯವಸ್ಥೆಯನ್ನು ಪ್ರಶ್ನಿಸುವವರು ದಿಮಾಗಿ ನಕ್ಸಲರೇ?

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ದೇವರು, ಧರ್ಮ ಮತ್ತು ಪುರಾಣಗಳ ಗೊತ್ತಿಲ್ಲದ ಮತ್ತು ಅನುಮಾನಗೊಂಡ ಹಾಗೂ ಅರ್ಥವಾಗದ ವಿಷಯಗಳ…

2 hours ago

ಅಸಂಗತ ಜಾತ್ರೆಯಲ್ಲಿ ಅಪರೂಪದ ಯಾತ್ರಿಕ

ರಾಮನಾಥ ಎಸ್. ಹೆಚ್.ಕೆ.ದ್ವಾರಕಾನಾಥ್, ಕರ್ನಾಟಕ ರಂಗಭೂಮಿಗೆ ರಂಗಭೀಷ್ಮ ಬಿ.ವಿ.ಕಾರಂತರಿತ್ತ ಕೊಡುಗೆ. ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಓದುತ್ತಾ, ಬದುಕಿಗಾಗಿ ಬವಣೆಪಡುತ್ತಾ,…

2 hours ago

ಗಲಿವರನ ಕಥೆಯಲ್ಲಿ ಕಂಡ ಜಂತರ್ ಮಂತರ್ ಹುಡುಗಿ

ಶೇಷಾದ್ರಿ ಗಂಜೂರು ದೆಹಲಿಯ ಜಂತರ್ ಮಂತರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಬಳಕೆ ಯಾದ ‘ಅಸಭ್ಯ ಭಾಷೆ’ ಅದರಲ್ಲೂ ಹುಡುಗಿಯರು…

2 hours ago