ಮೈಸೂರು ನಗರ

ಮೈಸೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಮೈಸೂರು: ಹಾಡು ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣ ಎದುರಿನ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕ್ಯಾತಮಾರನಹಳ್ಳಿಯ ವೆಂಕಟೇಶ್‌ ಅಲಿಯಾಸ್ ಗಿಲ್ಕಿ ವೆಂಕಟೇಶ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.

ಸ್ವೀಫ್ಟ್ ಕಾರಿನಲ್ಲಿ ತೆರಳುತ್ತಿದ್ದ ವೆಂಕಟೇಶ್‌ ಮೇಲೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆಯಾದ ಗಿಲ್ಕಿ ವೆಂಕಟೇಶ್, ಈ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಜೊತೆಗಿದ್ದ. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಕೊಲೆಯಾದ ಸ್ಥಳದಲ್ಲಿ ವೆಂಕಟೇಶ್‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಆಂದೋಲನ ಡೆಸ್ಕ್

Recent Posts

ಗೂಗಲ್ ಮಹಾತ್ಮೆ: ಗೂಗಲ್ ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯ?

ರಮಾನಂದ ಶರ್ಮ ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟೆಕ್ಕಿಯೊಬ್ಬರು ವೈದ್ಯರ ಬಳಿ ಹೋಗಿದ್ದರಂತೆ. ವೈದ್ಯರು ಅವರನ್ನು ಸ್ಥೂಲವಾಗಿ ಪರೀಕ್ಷಿಸಿ, ಮೂರು…

39 seconds ago

ಕೆಎಸ್‌ಐಸಿ: ೧೫ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯ

ತಿ.ನರಸೀಪುರ: ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಽಸಿ ಕಳೆದ ೧೫ ದಿನಗಳಿಂದ ವಿವಿಧ ಸಂಘಟನೆಗಳವರು ನಡೆಸುತ್ತಿದ್ದ ಪ್ರತಿಭಟನೆ…

5 mins ago

28 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ; ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ೬,೧೮೩ ವಿದ್ಯಾರ್ಥಿಗಳು ಮಡಿಕೇರಿ: ಮಾ.೧೮ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗ…

9 mins ago

ರಾಗಿ ಖರೀದಿ ಕೇಂದ್ರದಲ್ಲಿ ಹೆಚ್ಚುತ್ತಿರುವ ಅಕ್ರಮ: ಆರೋಪ

ನವೀನ್ ಕುಮಾರ್ ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿರುವುದರಿಂದ ನಷ್ಟ ಎಂಬುದು ರೈತರ ಅಳಲು ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಗಳಲ್ಲಿ…

14 mins ago

ಇರಾನ್ ಮಹಿಳಾ ಫುಟ್ಬಾಲ್ ತಂಡಕ್ಕೆ ಹೆಚ್ಚುತ್ತಿರುವ ಭಯ ; ಆಸ್ಟ್ರೇಲಿಯಾದಲ್ಲಿ ಆಶ್ರಯಕ್ಕೆ ಹೆಚ್ಚುತ್ತಿರುವ ಕರೆ!

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) :  ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…

10 hours ago

ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ; ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದ ತೈಲ ಬೆಲೆ

ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…

10 hours ago