ದೇಶ- ವಿದೇಶ

ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ; ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದ ತೈಲ ಬೆಲೆ

ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಉಂಟಾಗಿದ್ದು, ಯುದ್ಧ ದಾಳಿಗೆ ತೈಲ ಸಂಗ್ರಹಗಾರಗಳೇ (Oil tanks) ಪ್ರಮುಖ ಟಾರ್ಗೆಟ್ ಆಗಿವೆ. ಯುದ್ಧದ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟ ಸಂಪೂರ್ಣ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು ಬ್ಯಾರೆಲ್‌ಗೆ 120 ಡಾಲರ್ ಮಟ್ಟ ತಲುಪಿದೆ. ಇದು 2022ರ ರಷ್ಯಾ-ಉಕ್ರೇನ್ ಯುದ್ಧದ ನಂತರದ ಅತಿದೊಡ್ಡ ಏರಿಕೆಯಾಗಿದೆ.

ಇರಾನ್‌ನಲ್ಲಿ ಸುಪ್ರೀಂ ಲೀಡರ್ ಅಲಿ ಖಾಮೆನೆಯಿ ಸಾವಿನ ನಂತರ ಮೊಜ್ತಬಾ ಖಾಮೆನೆಯಿ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಇದರ ಜೊತೆಗೆ ಇಸ್ರೇಲ್-ಅಮೆರಿಕಾ ದಾಳಿಗಳು ತೈಲ ಡಿಪೋಗಳು, ಟ್ಯಾಂಕರ್‌ಗಳು ಮತ್ತು ಸಾಗಾಟ ಮಾರ್ಗಗಳ ಮೇಲೆ ಪರಿಣಾಮ ಬೀರಿವೆ. ಜಾಗತಿಕ ತೈಲ ಸಾಗಾಟದ 20-30% ಹಾದುಹೋಗುವ ಹೊರ್ಮುಜ್ ಜಲಸಂಧಿ ಸಂಪೂರ್ಣ ಅಡಚಣೆಗೊಳಗಾಗಿದೆ. ಇರಾಕ್, ಕುವೈತ್ ಸೇರಿದಂತೆ ಮಧ್ಯಪ್ರಾಚ್ಯ ಉತ್ಪಾದಕರು ಉತ್ಪಾದನೆ ಕಡಿತಗೊಳಿಸಿದ್ದಾರೆ. ಇದರಿಂದ ಜಾಗತಿಕ ಶೇರು ಮಾರುಕಟ್ಟೆಗಳು ಸಹ ಕುಸಿದಿವೆ. ಜಾಗತಿಕ ತೈಲ ಸಾಗಾಟದ 20–30% ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಇರಾನ್ ದಾಳಿಗಳ ನಂತರ ಟ್ಯಾಂಕರ್‌ಗಳ ಮೇಲೆ ಡ್ರೋನ್ ಹಲ್ಲೆಗಳು ನಡೆದಿವೆ. ಇರಾಕ್ 15 ಲಕ್ಷ ಬ್ಯಾರೆಲ್ ಉತ್ಪಾದನೆ ಕಡಿತಗೊಳಿಸಿದೆ. ಇದರಿಂದ ಜಿ-7 ದೇಶಗಳು ತುರ್ತು ದಾಸ್ತಾನು ಬಿಡುಗಡೆ ಮಾಡುವ ಸಾಧ್ಯತೆಯನ್ನು ಪರಿಗಣಿಸುತ್ತಿವೆ

“ಸಂಘರ್ಷ ತ್ವರಿತವಾಗಿ ಕೊನೆಗೊಂಡರೆ ಬೆಲೆಗಳು ಕುಸಿಯುತ್ತವೆ. ಆದರೆ ಉದ್ದಕ್ಕೆ ಎಳೆದರೆ 150 ಡಾಲರ್ ತಲುಪುವ ಸಾಧ್ಯತೆ ಇದೆ” ಎಂದು ತೈಲ ವಿಶ್ಲೇಷಕರು ಹೇಳಿದ್ದಾರೆ.

ಕಚ್ಛಾ ತೈಲ ಬೆಲೆ ದುಬಾರಿಯಾದರೆ ಭಾರತದ ಮೇಲೇನು ಪರಿಣಾಮ?
ಆರ್ಥಿಕತೆಗೆ ಹಿನ್ನಡೆ : ತಜ್ಞರ ಪ್ರಕಾರ ಬ್ಯಾರಲ್​ಗೆ 10 ಡಾಲರ್​ನಷ್ಟು ಬೆಲೆ ಏರಿಕೆಯಾದರೆ, ಭಾರತದ ಜಿಡಿಪಿ ಬೆಳವಣಿಗೆ 50 ಮೂಲಾಂಕಗಳಷ್ಟು (ಶೇ. 0.5) ಹಿನ್ನಡೆ ಹೊಂದುತ್ತದೆ.
ಹಣದುಬ್ಬರ ಏರಿಕೆ : ಕಚ್ಚಾ ತೈಲ ಬೆಲೆ ಏರಿಕೆಯಾದರೆ ಪೆಟ್ರೋಲ್, ಡೀಸಲ್, ಎಲ್​ಪಿಜಿ, ಎಲ್​ಎನ್​ಜಿ, ಪಿಎನ್​ಜಿ ಇತ್ಯಾದಿ ಬೆಲೆಗಳೆಲ್ಲವೂ ಏರುತ್ತವೆ. ಇದರಿಂದಾಗಿ ಇತರ ಹಲವು ಸರಕುಗಳ ಬೆಲೆ ಏರುತ್ತದೆ. ಪರಿಣಾಮವಾಗಿ, ಹಣದುಬ್ಬರ ಹೆಚ್ಚುತ್ತದೆ.
ಕರೆಂಟ್ ಅಕೌಂಟ್ ಡೆಫಿಸಿಟ್ ಏರಿಕೆ : ದುಬಾರಿ ಬೆಲೆಗೆ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತ ಹೆಚ್ಚು ಡಾಲರ್​ಗಳನ್ನು ವ್ಯಯಿಸಬೇಕು. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್ ಉಂಟಾಗುತ್ತದೆ. ಡಾಲರ್ ಎದುರು ರುಪಾಯಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದರಿಂದ ಆಮದು ವೆಚ್ಚ ಮತ್ತಷ್ಟು ಹೆಚ್ಚುತ್ತದೆ. ಇದು ಹಣದುಬ್ಬರ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ.

ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಸ್ಥಿರ!
ಭಾರತ ತನ್ನ 80% ತೈಲ ಅಗತ್ಯತೆಯನ್ನು ಆಮದು ಮಾಡುತ್ತದೆ. ಆದರೂ “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವುದಿಲ್ಲ”. ದೇಶದಲ್ಲಿ ಸುಮಾರು 25 ದಿನಗಳ ತೈಲ ದಾಸ್ತಾನು ಇದೆ. ಹೊರ್ಮುಜ್ ಅವಲಂಬನೆ ಕಡಿಮೆ ಮಾಡಿ ಬೇರೆ ಮೂಲಗಳಿಂದ (ರಷ್ಯಾ, ಸೌದಿ, ಅಮೆರಿಕಾ) ಆಮದು ಹೆಚ್ಚಿಸಲಾಗುತ್ತಿದೆ. ಹಣದುಬ್ಬರದ ಮೇಲೆ ದೊಡ್ಡ ಪರಿಣಾಮ ಬೀಳುವುದಿಲ್ಲ ಎಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಸಂಘರ್ಷ ದೀರ್ಘಕಾಲ ಮುಂದುವರಿದರೆ ಸಾರಿಗೆ, ಅಡುಗೆ ಎಣ್ಣೆ ಹಾಗೂ ಇತರ ಸರಕುಗಳ ಬೆಲೆ ಏರಬಹುದು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

4 mins ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

6 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

6 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

7 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

8 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

14 hours ago