ಮೈಸೂರು ನಗರ

ಪಡಿತರ ಅಕ್ಕಿ ಅಕ್ರಮ ಸಾಗಣೆ : ವಶ

ಮೈಸೂರು : ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ಯುವಕನನ್ನು ಬಂಧಿಸಿರುವ ಜಯಪುರ ಠಾಣಾ ಪೊಲೀಸರು, ಅವರಿಂದ 5.5 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಧನಗಳ್ಳಿ ಗ್ರಾಮದ ಬಳಿ ಯುವಕನೋರ್ವ ಪ್ಯಾಸೆಂಜರ್ ಆಟೋದಲ್ಲಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ. ಕೂಡಲೇ ಪೊಲಿಸರ ತಂಡ ಸ್ಥಳಕ್ಕೆ ತೆರಳಿದೆ. ಈ ವೇಳೆ ಪ್ಯಾಸೆಂಜರ್ ಆಟೋ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ಕಿಯನ್ನು ಸಾಗಿಸುತ್ತಿದ್ದ ಗೌಸಿಯಾನಗರ ನಿವಾಸಿ ಫರ‍್ಹಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಹಳ್ಳಿ ಹಳ್ಳಿಗೆ ತೆರಳಿ ಅಲ್ಲಿನ ಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಕರಣದಲ್ಲಿ ಬಾಗಿಯಾಗಿರುವ ಮತ್ತೊಬ್ಬ ಆರೋಪಿ ಗೌಸಿಯಾನಗರ ನಿವಾಸಿ ಮಯೂಬ್ ಎಂಬಾತನ ಪತ್ತೆಗೆ ಮುಂದಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

43 mins ago

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

4 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

4 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

5 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

5 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

5 hours ago