ಮೈಸೂರು ನಗರ

ಹನಗೋಡು ಸೊಸೈಟಿಯಲ್ಲಿ ನಾಲ್ಕು ಕೋಟಿ ಅವ್ಯವಹಾರ ನಡೆದಿದೆ: ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌

ಮೈಸೂರು: ಹನಗೋಡು ಸೊಸೈಟಿಯಲ್ಲಿ ನಾಲ್ಕು ಕೋಟಿ ಅವ್ಯವಹಾರ ನಡೆದಿದ್ದು, ರೈತರು ಕಟ್ಟಿರುವ ಹಣವನ್ನು ಅಲ್ಲಿನ ಕಾರ್ಯದರ್ಶಿ‌ ಕೊಂಡೊಯ್ದಿದ್ದಾನೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹನಗೋಡು ಸೊಸೈಟಿಯಲ್ಲಿ ಸತ್ತವರ ಹೆಸರಿನಲ್ಲೂ ಸಾಲ ಮಂಜೂರು ಮಾಡಿ ಹಣ ತಿಂದು ತಿಂದಿದ್ದಾರೆ. ಇದೀಗ ಸತ್ತವರ ಮಕ್ಕಳ ಕುಟುಂಬ ಸದಸ್ಯರಿಗೆ ನೋಟಿಸ್ ಬಂದಿವೆ ಎಂದು ಆರೋಪಿಸಿದರು.

ಇನ್ನು ಹುಣಸೂರಿನ ಹಾಲಿ ಶಾಸಕರು ನಿನ್ನೆ ಅನಗತ್ಯವಾಗಿ ನನ್ನನ್ನು ಎಳೆದು ತಂದಿದ್ದಾರೆ. ಅವರು ಎಲ್ಲಿಯೂ ನನ್ನ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಆದರೆ ಹದಿನೈದು ವರ್ಷ ಅಧಿಕಾರ ನಡೆಸಿದವರು ಎಂದು ಹೇಳಿದ್ದಾರೆ. ಹಾಗಾಗಿ ಬಹುತೇಕ ಮಾಧ್ಯಮಗಳಲ್ಲಿ ಮಾಜಿ ಶಾಸಕರ ಹೆಸರು ಹೇಳದೇ ಎಂದು ವರದಿಯಾಗಿದೆ. ನನ್ನ ಹದಿನೈದು ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದೇನೆ. 2008ರಲ್ಲಿ ಗೊಬ್ಬರಕ್ಕೆ ಅಭಾವ ಉಂಟಾದಾಗ ಹುಣಸೂರು ರೈತರಿಗೆ ವೈಯಕ್ತಿಕವಾಗಿ 36 ಲಕ್ಷ ರೂಪಾಯಿ ವೆಚ್ಚದಲ್ಲಿ 27 ಸೊಸೈಟಿಗಳಿಗೆ ಗೊಬ್ಬರ ಪೂರೈಕೆ ಮಾಡಿದೆ. ನಾನು ರೈತ ವಿರೋಧೀನಾ? ಎಂದು ಪ್ರಶ್ನೆ ಮಾಡಿದರು.

ಇನ್ನು ದೇವರಾಜ ಅರಸು ಅವರ ಕಾಲಿನ ಧೂಳಿಗೂ ನಾವು ಸಮವಲ್ಲ. ಅರಸುರವರು ಕ್ಷೇತ್ರಕ್ಕೆ 4 ಏತ ನೀರಾವರಿ ಯೋಜನೆ ತಂದಿದ್ದಾರೆ. ನಾನು 11 ಏತ ನೀರಾವರಿ ಯೋಜನೆ ಮಾಡಿದ್ದೇನೆ. 21 ಸಾವಿರ ಹೆಕ್ಟೇರ್‌ಗೆ ನೀರು ಕೊಟ್ಟಿದ್ದೇನೆ. ನಾಲೆಗಳ ಆಧುನೀಕರದ ಮೂಲಕ 38 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲ ಮಾಡಿದ್ದೇನೆ. ಉಂಡುವಾಡಿ ಯೋಜನೆ ತಂದಿದ್ದೇ ನಾನು. ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿದೆ. ರೈತರಿಗೋಸ್ಕರ ನಾನು ಇಷ್ಟೆಲ್ಲಾ ಮಾಡಿದ್ದೇನೆ. ಹಾಲಿ ಶಾಸಕರು ನಿನ್ನೆ ಧರ್ಮಾಪುರ ಮತ್ತು ಹೆಗ್ಗಂದೂರು ಸೊಸೈಟಿಗಳಿಗೋಸ್ಕರ ಹೋರಾಟ ಮಾಡಿದ್ದಾರೆ. ಆದರೆ ರೈತ ಕಟ್ಟಿದ ಹಣವನ್ನು ಸೆಕ್ರೆಟರಿಗಳು ತಿಂದುಕೊಂಡಿದ್ದಾರೆ. ಪರಿಣಾಮ ರೈತರು ಸಾಲ ತೀರಿಸಿದ್ದರೂ ಈಗ ಸಾಲ ಸಿಗುತ್ತಿಲ್ಲ‌. ಹಣ ಗುಳುಂ ಮಾಡಿರುವವರ ಪರವಾಗಿ ಇವರು ಹೋರಾಟ ಮಾಡಿದ್ದಾರೆ. ಸೆಕ್ರೆಟರಿಗಳನ್ನು ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ. ಇವರ ಹೋರಾಟ ರೈತರಿಗಾಗಿ ನಡೆದಿಲ್ಲ. ಕೇವಲ 91 ಜನರಿಗೋಸ್ಕರ ನಡೆದಿದೆ. ಧರ್ಮಾಪುರ ಸೊಸೈಟಿಯಲ್ಲಿ ಆಡಿಟ್ ನಡೆದಿಲ್ಲ‌. ಆಡಿಟ್ ನಡೆಯದೇ ಸಾಲ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

7 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

7 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

7 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

7 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

7 hours ago