ಮೈಸೂರು: ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ರೆ, ನಾನು ಕಾಂಗ್ರೆಸ್ ಸೇರುತ್ತೇನೆ ಎಂದರ್ಥವಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ನಾನು ಒಮ್ಮೆ ಕಾರ್ಪೊರೇಷನ್‌ನಲ್ಲಿ ಕೇಳಿದಾಗ ಆ ರಸ್ತೆಗೆ ಹೆಸರಿಲ್ಲ ಅಂದ್ರು. ಹಾಗಾಗಿ ಸಿದ್ದರಾಮಯ್ಯ ಹೆಸರಿಡಲಿ ಬಿಡಿ ಎಂದು ನಾನು ಕೂಡ ಹೇಳಿದ್ದೆ. ಕರ್ನಾಟಕ ರಾಜ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಸಾಕಷ್ಟಿದೆ. ಅದನ್ನು ಯಾರೂ ಪ್ರಿನ್ಸೆಸ್ ರಸ್ತೆ ಅಂತ ಕರಿಯಲ್ಲ. ಆದ್ದರಿಂದ ನಾನು ಕೂಡ ಸಿದ್ದರಾಮಯ್ಯರ ಹೆಸರಿಡಿ ಎಂದು ಹೇಳಿದ್ದೆ. ಸಿದ್ದರಾಮಯ್ಯ ಪರ ಮಾತನಾಡಿದ್ರೆ, ನಾನು ಕಾಂಗ್ರೆಸ್ ಸೇರುತ್ತೇನೆ ಎಂದರ್ಥವಲ್ಲ ಎಂದು ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಳೆದ 11 ವರ್ಷದಿಂದ ಸಿದ್ದರಾಮಯ್ಯರನ್ನು ವಿರೋಧಿಸುತ್ತಿರುವವನು ಪ್ರತಾಪ್ ಸಿಂಹ ಒಬ್ಬನೇ. ಅವರ ಸಿದ್ದಾಂತ ವಿರೋಧಿ ನಾನು. ಇದೇ ಸಿದ್ದರಾಮಯ್ಯ ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಹೆಸರನ್ನು ಇಡಲು ಹೊರಟಿದ್ದರು. ಅದನ್ನು ಬೊಮ್ಮಾಯಿ ಅವರಿಗೆ ಹೇಳಿ ತಡೆದಿದ್ದು ನಾನು. ಇದಕ್ಕೆ ಮೈಸೂರು ಮಹಾರಾಣಿ ಅವರು ಕೂಡ ನನ್ನನ್ನು ಹೊಗಳಿದ್ರು. ಮೈಸೂರು ಬೆಂಗಳೂರು ನಡುವೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ಇತ್ತು. ಅದನ್ನು ಕೂಡ ಒಡೆಯರ್ ಎಕ್ಸ್‌ಪ್ರೆಸ್ಎಂದು ಬದಲಾಯಿಸಿದೆ. ಅಂದು ಕೂಡ ಪ್ರಮೋದಾದೇವಿ ನನ್ನ ಕಾರ್ಯಕ್ಕೆ ಶ್ಲಾಘಿಸಿದ್ದರು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…