ಮೈಸೂರು: ಮುಡಾ ಹಗರಣದಲ್ಲಿ ಸಚಿವ ಭೈರತಿ ಸುರೇಶ್ ಕೈವಾಡವಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಇಷ್ಟೊಂದು ದೊಡ್ಡ ಹಗರಣವಾಗಿದ್ದರೂ ಮಾಜಿ ಆಯುಕ್ತರ ವಿರುದ್ಧ ಕ್ರಮ ಏಕೆ ಆಗಿಲ್ಲ ಎಂದು ಪ್ರಶ್ನೆ ಮಾಡಿದರು.
ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಪಡುವಾರಹಳ್ಳಿ ನಾಗರಾಜುಗೆ 53 ಸೈಟ್ ನೀಡಿರುವುದೇ ಕಾರಣ ಎಂದು ಆರೋಪ ಮಾಡಿದರು.
ಮುಡಾದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಅಮಾಯಕನಿಗೆ ಸೈಟ್ ಇರುವುದೇ ಗೊತ್ತಿಲ್ಲ. ಚಾಮುಂಡೇಶ್ವರಿ ಸೌಹಾರ್ದ ಸಮಿತಿಯ 48 ಸೈಟ್ ವಾಪಸ್ ಪಡೆದಿದ್ದಾರೆ. ಸಿಎಂ ಪತ್ನಿ 14 ಸೈಟ್ ನೀಡಿದ್ದಾರೆ. ಉಳಿದ ಸೈಟ್‌ಗಳ ವಾಪಸ್ಸಾತಿ ಯಾವಾಗ ಎಂದು ಪ್ರಶ್ನೆ ಮಾಡಿದರು.
928 ಸೈಟ್‌ಗಳ ವರದಿ ಈಗಾಗಲೇ ಬಂದಿದೆ. ಯಾಕೆ ಇನ್ನು 928 ಸೈಟ್‌ಗಳನ್ನು ವಾಪಸ್ ಪಡೆದುಕೊಂಡಿಲ್ಲ. ಒಬ್ಬೊಬ್ಬರ ಹೆಸರಿನಲ್ಲಿ ಹಲವು ಸೈಟ್‌ಗಳನ್ನು ನೀಡಲಾಗಿದೆ. ಕೇವಲ 48 ಸೈಟ್‌ಗಳನ್ನು ರದ್ದು ಮಾಡಿ ಸತ್ಯ ಸಂತರು ಎಂದು ಹೇಳಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮುಂಬೈ : ಬಿಸಿಸಿಐ ಮಾರ್ಚ್ 26ರ ಗುರುವಾರದಂದು ಬಹುನಿರೀಕ್ಷಿತ 19 ನೇ ಸೀಸನ್ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.…
ಮೈಸೂರು ವಿವಿಯಲ್ಲಿ ಆರ್ಥಿಕ ಶಿಸ್ತು ಇಲ್ಲ ; ಕೋವಿಡ್ ನಂತರದಲ್ಲಿ ಅನುದಾನದ ಕೊರತೆ : ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮೈಸೂರು :…
ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…
ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…
ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…