ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 04 ರಿಂದ 10 ರವರೆಗೆ 7 ದಿನ ನಡೆಯಲಿರುವ ದಸರಾ ಚಲನ ಚಿತ್ರೋತ್ಸವದಲ್ಲಿ 112 ಸಿನಿಮಾಗಳು ಹುಣಸೂರು ರಸ್ತೆಯಲ್ಲಿರುವ ಡಿಆರ್‌ಸಿಯ ಒಂದು ಪರದೆ ಮತ್ತು ಮೈಸೂರಿನಲ್ಲಿರುವ ಐನಾಕ್ಸ್‌ನ ಮೂರು ಪರದೆಗಳಲ್ಲಿ ಪ್ರದರ್ಶನವಾಗಲಿವೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮುಡಾ ಅಧ್ಯಕ್ಷರಾದ ಕೆ. ಮರಿಗೌಡ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ : ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್…
ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…
‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮನದಾಳದ ಮಾತು ಇಲ್ಲಿದೆ ನಿರೂಪಣೆ.. ಆರ್.ಟಿ.ವಿಠ್ಠಲಮೂರ್ತಿ ನಾನು…
ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…
ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…
ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು…