ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ!
ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿದ್ದು, ಪ್ರಾಯೋಗಿಕವಾಗಿ ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್‌ಗೆ ರಿಫ್ಲಕ್ಷನ್ ಕನ್ನಡಿ ಅಳವಡಿಸಲಾಗಿದೆ.
80 ಮೀಟರ್ ಕಾಂಪೌಂಡ್‌ಗೆ ಸ್ಟೇನ್ ಲೆಸ್ ಸ್ಟೀಲ್ ರಿಫ್ಲೆಕ್ಷನ್ ಅಳವಡಿಸಿದ್ದು ಸ್ಟೇನ್ ಲೆಸ್ ಸ್ಟೀಲ್ ಮೂಲಕ ಕನ್ನಡಿಯ ಮಾದರಿ ಪ್ರತಿಬಿಂಬ ಕಾಣುವಂತೆ ಉಪಾಯ ಮಾಡಲಾಗಿದೆ.
ಅದರ ಮುಂದೆ ನಿಂತರೆ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುವಂತೆ ಮಾಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಬ್ಬು ವಾಸನೆ ತರುತ್ತಿದ್ದವರನ್ನು ತಡೆಯಲು ಈ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
ಕನ್ನಡಿಯ ಸುತ್ತ ಎಲ್ಇಡಿ ಲೈಟ್ ಕೂಡಾ ಇದ್ದು, ಸಂಜೆ ವೇಳೆ ಸ್ಟ್ರೀಟ್ ಲೈಟ್ ಹೊತ್ತಿಕೊಳ್ಳುತ್ತಿದ್ದಂತೆ ಬಲ್ಬ್ ಕೂಡ ಆನ್ ಆಗುತ್ತದೆ. ಸುಮಾರು 9.5 ಲಕ್ಷ ವೆಚ್ಚದಲ್ಲಿ ಜಾರಿಗೆ ತಂದಿರುವ ಈ ಯೋಜನೆ ಸದ್ಯಕ್ಕೆ ಮೈಸೂರಿನಲ್ಲಿ ಮೊದಲು ಜಾರಿಯಾಗಿದೆ. ನಗರ ಪಾಲಿಕೆಯ ನೂತನ ಪ್ಲಾನ್‌ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗೋಡೆ ಕಂಡೊಡನೆ ಮೂತ್ರಿಸುವವರು ಮಾತ್ರ ಇನ್ಮುಂದೆ ಯೋಚಿಸಬೇಕಾಗಿದೆ!
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…