ಮೈಸೂರು ನಗರ

ಪ್ರಧಾನಿಗಳು ಆರ್ಮಿ ಜೆರ್ಸಿ ಹಾಕಿಕೊಂಡು ರಾಜಕೀಯ ಲಾಭ ಪಡೆದಿದ್ದಾರೆ: ನಟ ಕಿಶೋರ್‌ ಆರೋಪ

ಮೈಸೂರು: ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದದ್ದೇ ಹೆಚ್ಚು ಎಂದು ಬಹುಭಾಷಾ ನಟ ಕಿಶೋರ್‌ ಹೇಳಿದ್ದಾರೆ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದದ್ದು ಹೆಚ್ಚು. ದೇಶದಲ್ಲಿ ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗುತ್ತಿದೆ. ಜಾತಿ, ಧರ್ಮ, ಭಾಷೆ ಬಗ್ಗೆ ಅಂಧಾಭಿಮಾನ ಎಲ್ಲಿ ತನಕ ಇರುತ್ತದೋ ಅಲ್ಲಿಯ ತನಕ ಬಳಸಿಕೊಳ್ಳೋರು ಇರುತ್ತಾರೆ. ಎಲ್ಲರೂ ನಿಜವಾದ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ನೋಡಬೇಕು ಎಂದು ಸಲಹೆ ನೀಡಿದರು.

ಇನ್ನು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಘಟನೆ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ರಾಜಕೀಯ ಲಾಭಕ್ಕಾಗಿ ನಾವು ಬಿಟ್ಟು ಕೊಡಬಾರದು. ಈ ಹಿಂದಿನ ಘಟನೆಗಳ ಬಗ್ಗೆ ಸತ್ಯಾ-ಸತ್ಯತೆಗಳು ಹೊರ ಬಂದಿಲ್ಲ. ಅಲ್ಲಿನ ಗವರ್ನರ್ ಸತ್ಯಪಾಲ್ ಮಲ್ಲಿಕ್ ಅವರ ಆರೋಪಗಳು ಚರ್ಚೆಯಾಗಬೇಕು. ಅವರ ಆರೋಪಗಳ ಬಗ್ಗೆ ತನಿಖೆಯಾಗಿಲ್ಲ. ಧ್ವನಿ ಎತ್ತಿದರು ಅದನ್ನು ಅಡಗಿಸುತ್ತಾರೆ. ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದಿದೆ. ಮಾಧ್ಯಮಗಳ ಹುಟ್ಟಡಗಿಸುವ ಕೆಲಸವಾಗಿದೆ. ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗುತ್ತಿದೆ. ಪ್ರಶ್ನೆ ಕೇಳೋದು ಪ್ರಜಾಪ್ರಭುತ್ವದ ಲಕ್ಷಣ. ಉತ್ತರವನ್ನು ಬಡಿದು ಕೇಳಬೇಕು. ನಾವು ಜಾತಿ ಧರ್ಮದಲ್ಲಿ ಅಂಧರಾಗಿ ಕುಳಿತಿದ್ದೇವೆ. ದೇಶದ ವಿಚಾರದಲ್ಲೂ ಅಂಧರಾಗಬಾರದು. ಜನ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುವವರೆಗೂ ಬಿಡಬಾರದು. ಪ್ರಧಾನಿಗಳು ಆರ್ಮಿ ಜೆರ್ಸಿ ಹಾಕಿಕೊಂಡು ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

44 mins ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

47 mins ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

51 mins ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

55 mins ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

1 hour ago