ಅಂತಾರಾಷ್ಟ್ರೀಯ

ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿಯ ಮೊದಲ ಪ್ರತಿಕ್ರಿಯೆ.!

ಬೆಂಗಳೂರು : ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌ ಸಮ್ಮಿಟ್‌ ವರ್ಚುವಲ್‌ ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಡೀಪ್‌ ಫೇಕ್‌” ವೀಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಐ (ಕೃತಕ ಬುದ್ದಿಮತ್ತರ) ದೊಡ್ಡ ಸಮಸ್ಯೆಯಾಗಿದ್ದು, ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಅವರು ಮಾದ್ಯಮಗಳಿಗೆ ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಡೀಪ್‌ ಫೇಕ್‌ ಕುರಿತು ಮಾತನಾಡಿದ ಪ್ರಧಾನಿ ಮೋದಿ “ಇತ್ತೀಚೆಗೆ ನಾನು ಹಾಡು ಹಾಡುತ್ತಿರುವ ವೀಡಿಯೋ ನೋಡಿದೆ. ನನ್ನು ಇಷ್ಟಪಡುವ ಜನರು ಅದನ್ನು ಪಾರ್ವರ್ಡ ಮಾಡಿದ್ದಾರೆ. ಅಲ್ಲದೇ ಈ ಡೀಪ್‌ ಸಮಸ್ಯೆ ದೊಡ್ಡದಾಗಿದ್ದು, ಚಾಟ್‌ ಜಿಪಿಟಿಯು ಇದರ ಬಗ್ಗೆ ಬಳೆಕೆದಾರರಿಗೆ ಎಚ್ಚರಿಕೆ ನೀಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಈ ತಂತ್ರಜ್ಞಾನವು ಸೌಥ್‌ ಮತ್ತು ನಾರ್ಥ್‌ ಗ್ಲೋಬಲ್‌ ನಡುವಿನ ಅಂತರವನ್ನು ಹೆಚ್ಚಿಸಬಾರದೆಂದು ಭಾರತ ಭಾವಿಸುತ್ತದೆ. ಎಐ ನ್ನು ಹಾಗೂ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಬೇಕು. ಈ ಬಗ್ಗೆ ಮಾತನಾಡಲು ಎಲ್ಲಾ ರಾಷ್ಟ್ರಗಳಿಗೂ ಇದು ಸೂಕ್ತ ಸಮಯ. ಇವುಗಳನ್ನು ಉತ್ತೇಜಿಸಲು ಮುಂದಿನ ತಿಂಗಳು ಭಾರತವು ಆರ್ಟಿಫಿಷಿಯಲ್‌ ಗ್ಲೇಬಲ್‌ ಪಾರ್ಟ್ನರ್‌ಶಿಪ್‌ ಸಮ್ಮಿಟ್‌ಗೆ ಆತಿಥ್ಯ ವಹಿಸಲಿದೆ ಎದು ಪ್ರಧಾನಿ ಮೋದಿ ತಿಳಿಸಿದರು.

ಜಿ20 ಸಭೆಗಳಲ್ಲಿ ಗ್ಲೋಬಲ್​ ಸೌಥ್ ಆದ್ಯತೆ : ದೆಹಲಿ ಜಿ-20 ಡಿಕ್ಲರೇಶನ್‌ನಲ್ಲಿ ಗ್ಲೋಬಲ್ ಸೌತ್ ವಿಷಯವನ್ನು ಸೇರಿಸಲಾಗಿದೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ನೆನಪಿಸಿದ್ದಾರೆ. ಕಳೆದ ವರ್ಷ ನಡೆದ ಜಿ20 ಸಭೆಗಳಲ್ಲಿ ಗ್ಲೋಬಲ್​ ಸೌಥ್ ಆದ್ಯತೆಯನ್ನು ಭಾರತ ವಿವರಿಸಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಾಗ, ಗ್ಲೋಬಲ್​​ ಸೌತ್ ಧ್ವನಿಯನ್ನು ಎತ್ತುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೇವೆ. ಜಿ20 ಅನ್ನು ಅಂತರ್ಗತ, ಮಾನವೀಯ ಕೇಂದ್ರವನ್ನಾಗಿ ಮಾಡುವುದು ನಮ್ಮ ಆದ್ಯತೆಯಾಗಿ ತೆಗೆದುಕೊಂಡಿದ್ದೇವು. ಅದರ ಭಾಗವಾಗಿ ನಾವು ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್ ಆಯೋಜಿಸಿದ್ದೇವೆ ಎಂದು ಪ್ರಧಾನಿ ಮೋದಿ ವಿವರಿಸಿದರು.

andolanait

Share
Published by
andolanait

Recent Posts

ಹನೂರು ತಾಲ್ಲೂಕಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದಿಂದ ಎರಡನೇ ದಿನದ ಸಮಗ್ರ ಪರಿಶೀಲನೆ

ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…

12 hours ago

ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿ:ರೈತರಿಗೆ ಲಕ್ಷಾಂತರ ರೂ. ನಷ್ಟ!

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…

12 hours ago

ಕಾಡುಪ್ರಾಣಿಗಳ ಹಾವಳಿ ತಡೆಗೆ ಸ್ಟೀಲ್ ರೋಪ್ ಬ್ಯಾರಿಕೇಡ್

ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ  ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…

13 hours ago

ದಸರೆಯಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಮುಖ್ಯಮಂತ್ರಿ

ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…

13 hours ago

ಪೌರಕಾರ್ಮಿಕರಿಗೆ ಉಚಿತ ಸಾಬೂನು ಗ್ಯಾರಂಟಿ ಕೊಡಿ

ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…

13 hours ago

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ   ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…

13 hours ago