ಮನರಂಜನೆ

ʼರಾಮಾಯಣʼಕ್ಕೆ ಯಶ್‌ ಕೂಡ ನಿರ್ಮಾಪಕ

ಕೆಜಿಎಫ್‌ ಚಿತ್ರ ಸರಣಿಯ ದೊಡ್ಡ ಯಶಸ್ಸಿನ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ರಾಕಿಂಗ್‌ ಸ್ಟಾರ್‌ ಯಶ್‌ ಇದೀಗ ಚಿತ್ರ ನಿರ್ಮಾಣದತ್ತಲೂ ಮುಖ ಮಾಡಿದ್ದಾರೆ. ಹೌದು, ದಂಗಲ್‌ ಖ್ಯಾತಿಯ ನಿತೇಶ್‌ ತಿವಾರಿ ಬೃಹತ್‌ ಮಟ್ಟದಲ್ಲಿ ನಿರ್ದೇಶಿಸಲು ಹೊರಟಿರುವ ʼರಾಮಾಯಾಣʼ ಚಿತ್ರಕ್ಕೆ ಯಶ್‌ ಬಂಡವಾಳ ಹೂಡಲಿದ್ದಾರೆ.

ರಣ್‌ಬೀರ್‌ ಕಪೂರ್‌ ರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರಕ್ಕೆ ನಿರ್ಮಾಪಕ ನಮಿತ್‌ ಮಲ್ಹೋತ್ರ ಬಂಡವಾಳ ಹೂಡಿದ್ದು, ಇದೀಗ ಯಶ್‌ ಸಹ ತಮ್ಮ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್‌ ಮೂಲಕ ಕೈ ಜೋಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯಶ್‌ ʼಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವುದು ನನ್ನ ಬಹುದಿನಗಳ ಕನಸಾಗಿದೆ. ಆ ಸಲುವಾಗಿ ನಾನು ಅತ್ಯುತ್ತಮ ವಿಎಫ್‌ಎಕ್ಸ್ ಸ್ಟುಡಿಯೋಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಲಾಸ್‌ಏಂಜಲೀಸ್‌ನಲ್ಲಿದ್ದೆ. ಆಗ ನನಗೆ ಗೊತ್ತಾಗಿದ್ದು, ಈ ವಿಎಫ್‌ಎಕ್ಸ್ ಸ್ಟುಡಿಯೋ ಹಿಂದಿರುವುದು ಓರ್ವ ಭಾರತೀಯ ಎಂದು. ಅವರೇ ನಮಿತ್. ನನ್ನ ಮತ್ತು ನಮಿತ್ ನಡುವೆ ಸಾಕಷ್ಟು ಚರ್ಚೆಗಳು ನಡೆದವು. ನಮ್ಮ ನಡುವಿನ ಸಾಕಷ್ಟು ಕಲ್ಪನೆಗಳು ಒಂದೇ ರೀತಿಯಲ್ಲಿದ್ದವು. ಭಾರತೀಯ ಚಿತ್ರರಂಗದ ದೃಷ್ಟಿಯಲ್ಲಿ ನಮ್ಮ ವಿಚಾರಗಳು ಸಂಪೂರ್ಣವಾಗಿ ಹೊಂದಾಣಿಕೆಯಾಯಿತು. ಈ ಚರ್ಚೆಗಳ ಸಮಯದಲ್ಲಿ, ರಾಮಾಯಣದ ವಿಷಯವು ಬಂತುʼ ಎಂದಿದ್ದಾರೆ.

ಈ ಚಿತ್ರ ಮಾತ್ರವಲ್ಲದೇ ಯಶ್‌ ತಾವೇ ನಟಿಸುತ್ತಿರುವ, ಗೀತು ಮೋಹನ್‌ದಾಸ್‌ ನಿರ್ದೇಶನದ ʼಟಾಕ್ಸಿಕ್‌ʼ ಚಿತ್ರಕ್ಕೂ ಕೆವಿಎನ್‌ ಪ್ರೊಡಕ್ಷನ್ಸ್‌ ಜತೆ ಬಂಡವಾಳ ಹೂಡಿದ್ದಾರೆ.

andolana

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

3 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

15 hours ago